ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಏನು ದೇವರಾ? ಕಿಡಿಕಾರಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಮೇ 15: "ಅಮಿತ್ ಶಾ ಅವರ ವಿರುದ್ಧ ಪ್ರತಿಭಟನೆ ಮಾಡಬಾರದು ಎಂಬುದಕ್ಕೆ ಅವರೇನು ದೇವರಾ?" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆಯ ನಿಮಿತ್ತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅ ವರು ರೋಡ್ ಶೋ ನಡೆಸಿದ ಕೆಲವೇ ಹೊತ್ತುಗಳಲ್ಲಿ ಹಿಂಸಾಚಾರ ವರದಿಯಾಗಿತ್ತು.

ಅಮಿತ್ ಶಾ ರೋಡ್ ಶೋ: ಭಾರೀ ಹಿಂಸಾಚಾರ, ಕೋಲ್ಕತ್ತಾದಲ್ಲಿ ಘರ್ಷಣೆ, ಕಲ್ಲು ತೂರಾಟಅಮಿತ್ ಶಾ ರೋಡ್ ಶೋ: ಭಾರೀ ಹಿಂಸಾಚಾರ, ಕೋಲ್ಕತ್ತಾದಲ್ಲಿ ಘರ್ಷಣೆ, ಕಲ್ಲು ತೂರಾಟ

ಅಮಿತ್ ಶಾ ಅವರು ಪಶ್ಚಿಮಬಂಗಾಳದ ಸಮಾಜ ಈಶ್ವರಚಂದ್ರ ವಿದ್ಯಾಸಾಗರ ಕಾಲೇಜಿನ ಸುತ್ತ ಮುತ್ತ ಸುಮಾರು ನಾಲ್ಕು ಕಿಮೀ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಕಲ್ಲುತೂರಾಟ ಆರಂಭವಾದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಲುಪಿತ್ತು. ಅಷ್ಟರಲ್ಲೇ ಶಾ ರೋಡ್ ಶೋ ಮುಗಿದ್ದಿದ್ದರಿಂದ ಅವರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.

Is Amit Shah God? Mamata Banerjee asks

ಈ ಘಟನೆ ನಡೆದ ಒಂದೇ ಗಂಟೆಗಳಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, "ಈ ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತರು ನಡೆದುಕೊಂದ ರೀತಿಯ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಆದರೆ ಈಶ್ವರಚಂದ್ರ ವಿದ್ಯಾಸಾಗರರಂಥ ಮಹಾನ್ ಸಮಾಯ ಸುಧಾರಕರ ಪುತ್ಥಳಿ ಧ್ವಂಸಗೊಳಿಸಿದ ಬಿಜೆಪಿ ನಡೆಯನ್ನು ನಾನು ಒಪ್ಪುವುದಿಲ್ಲ. ಅಲ್ಲದೆ ಅಮಿತ್ ಶಾ ಅವರ ಬಗ್ಗೆ ಬೇಸರವಿದ್ದಿದ್ದರಿಂದ ಜನರು ಪ್ರತಿಭಟನೆ ನಡೆಸುತ್ತಿದ್ದರು. ಅದರಲ್ಲಿ ತಪ್ಪೇನಿದೆ? ಅಮಿತ್ ಶಾ ಅವರ ವಿರುದ್ಧ ಪ್ರತಿಭಟನೆ ಮಅಡಬಾರದು ಎಂಬುದಕ್ಕೆ ಅವರೇನು ದೇವರಾ?" ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೇ 19ರಂದು ಭಾನುವಾರ ಏಳನೇ ಹಂತದ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
West Bengal chief minister Mamata Banerjee after riots in West Bengal after Shah's roadshow said, "What does Amit Shah think of himself? Is he above everything? Is he God that no one can protest against him?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X