ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ಹೊಸ ಆಫರ್: ಶ್ರೀಲಂಕಾ-ಶ್ರೀರಾಮಾಯಣ ಯಾತ್ರೆ ಪ್ಯಾಕೇಜ್

|
Google Oneindia Kannada News

ಬೆಂಗಳೂರು, ನವೆಂಬರ್ 05: ಭಾರತೀಯ ರೈಲ್ವೆಯ ಆನ್ ಲೈನ್ ಟಿಕೆಟಿಂಗ್ ವ್ಯವಸ್ಥೆ ಐಆರ್ ಸಿಟಿಸಿ ಹೊಸ ಸೌಲಭ್ಯಗಳನ್ನು ತಂದಿರುವ ಬೆನ್ನಲ್ಲೇ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಐಆರ್ ಟಿಸಿ ಕೋಲ್ಕತಾ ವಿಭಾಗದಿಂದ ಶ್ರೀಲಂಕಾ-ಶ್ರೀರಾಮಾಯಣ ಯಾತ್ರೆ ಎಂಬ ಪ್ಯಾಕೇಜ್ ಘೋಷಿಸಿದೆ.

ಪ್ರೀಮಿಯಂ ತತ್ಕಾಲ್ ಕೋಟಾವನ್ನು ರೈಲ್ವೆ ಇಲಾಖೆ ಇತ್ತೀಚೆಗೆ ಪರಿಚಯಿಸಿದ್ದು, ಇದರಲ್ಲಿ ಏಜೆಂಟ್ ಗಳ ನೆರವಿಲ್ಲದೆ ನೇರವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಶ್ರೀಲಂಕಾ-ಶ್ರೀರಾಮಾಯಣ ಯಾತ್ರೆ ಪ್ಯಾಕೇಜ್ 6 ದಿನ ಅಥವಾ 7 ದಿನಗಳ ಕಾಲದ ಪ್ಯಾಕೇಜ್ ಆಗಿದೆ. ರಾಮಾಯಣ ಕಾಲದ ತಾಣಗಳನ್ನು ಕಾಣಲು ಬಯಸುವ ಪ್ರವಾಸಿಗರಿಗೆ ಈ ಪ್ಯಾಕೇಜ್ ಹೇಳಿ ಮಾಡಿಸಿದ್ದಂತಿದೆ.

IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

'ಭಾರತ್ ದರ್ಶನ್ ಸ್ಪೆಷನ್ ಟ್ರೈನ್' ಹೆಸರಿನ ಈ ಆಫರ್ ನಲ್ಲಿ ಪ್ರಮುಖ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಳ್ಳುವ ಅವಕಾಶ ನೀಡಲಾಗಿತ್ತು. ಐಅರ್ ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು. ಅಥವಾ ವಲಯ ಕಚೇರಿಯಲ್ಲಿ ಟಿಕೆಟ್ ಪಡೆಯಬಹುದು.

ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯ

ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯ

ಪ್ಯಾಕೇಜ್ ಹೆಸರು: SriLanka -Ramayana Trails
ಭೇಟಿ ಮಾಡಲಿರುವ ಪ್ರಮುಖ ತಾಣಗಳು: ನೆಗೊಂಬೊ, ಕ್ಯಾಂಡಿ, ನುವಾರ ಎಲಿಯಾ, ಕೊಲಂಬೋ.
ಪ್ರಯಾಣದ ರೀತಿ: ವಿಮಾನಯಾನ
ಎಲ್ಲಿಂದ: ಡಂ ಡಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 13.50 ಗಂಟೆಗೆ
ಶ್ರೇಣಿ: ಡಿಲಕ್ಸ್
ಆಹಾರ: ಅಮೆರಿಕನ್ ಪ್ಲ್ಯಾನ್ (B+L+D)

ಭೇಟಿ ಮಾಡಲಿರುವ ತಾಣಗಳು

ಭೇಟಿ ಮಾಡಲಿರುವ ತಾಣಗಳು

ಅಶೋಕ್ ವಾಟಿಕಾ(ಹಕ್ಕಗಲ ಜೈವಿಕ ಉದ್ಯಾನ), ಮುನ್ನೇಶ್ವರಿ, ಮುನ್ನಾವರಂ, ಹನುಮಾನ್ ದೇಗುಲ, ಕೋನೆಶ್ವರಂ ದೇಗುಲ, ತ್ರಿಂಕೊಮಾಲೆ, ಸಿಗಿರಿಯಾ, ಟೀ ಗಾರ್ಡನ್, ನಗರ ವಿಹಾರ ..ಇತ್ಯಾದಿ ಈ ಪ್ಯಾಕೇಜಿನಲ್ಲಿ ಸೇರಿವೆ.ನೆಗೊಂಬೊ, ಕ್ಯಾಂಡಿ, ನುವಾರ ಎಲಿಯಾ, ಕೊಲಂಬೋ ಸುತ್ತ ಮುತ್ತಲಿನ ಪ್ರದೇಶಗಳನ್ನು ಭೇಟಿ ಮಾಡಬಹುದು.

ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!

ವಿಮಾನಯಾನ ಮಾಹಿತಿ

ವಿಮಾನಯಾನ ಮಾಹಿತಿ

19.01.2020ರಿಂದ ಕೋಲ್ಕತಾದಿಂದ ಕೊಲಂಬೋ
UL 188 Kolkata - Colombo 13.50-17.00
UL 187 Colombo- Kolkata 08.25-11.30

ಪ್ರಯಾಣ ದರ

ಒಬ್ಬರ ಪ್ರಯಾಣಕ್ಕೆ (INR): Rs 51,800
ಇಬ್ಬರಿಗೆ (INR): Rs 43,580
ಮೂವರಿಗೆ (INR): Rs 41,800
ಮಗು ಹಾಗೂ ಬೆಡ್ ಜೊತೆಗೆ (INR): Rs 34,000
ಬೆಡ್ ರಹಿತ ಮಗು (INR): Rs 32,180

ಪ್ಯಾಕೇಜಿನಲ್ಲಿ ಏನಿರುತ್ತೆ? ಏನಿರಲ್ಲ?

ಪ್ಯಾಕೇಜಿನಲ್ಲಿ ಏನಿರುತ್ತೆ? ಏನಿರಲ್ಲ?

ರಿಟರ್ನ್ ಏರ್ ಟಿಕೆಟ್
ವೀಸಾ ಶುಲ್ಕ
ಹೋಟೆಲ್ ವಸತಿ, ಊಟ ವ್ಯವಸ್ಥೆ
ಪ್ರವಾಸಿ ತಾಣಗಳ ಪ್ರವೇಶ ಶುಲ್ಕ, ವಾಹನ ಶುಲ್ಕ
ಪ್ರತಿದಿನಕ್ಕೆ 500 ಎಂಎಲ್ ಖನಿಜಯುಕ್ತ ನೀರು
ಎಸಿ ಕೋಚ್ ಬಸ್ ವ್ಯವಸ್ಥೆ, ಇಂಗ್ಲಿಷ್ ಬಲ್ಲ ಟೂರ್ ಗೈಡ್
ಪ್ರವಾಸ ವಿಮೆ(60 ವರ್ಷದ ತನಕ)
ಜಿಎಸ್ಟಿ ಎಲ್ಲವೂ ಪ್ಯಾಕೇಜಿನಲ್ಲಿ ಸೇರಿದೆ.

ಏನಿರಲ್ಲ?
ವಿಮಾನಯಾನ ದರ ಏರಿಕೆಯಾದರೆ, ನಿಮ್ಮ ಅಗತ್ಯದ ಆಹಾರ ಅಲಭ್ಯವಾದರೆ, ಗೈಡ್ ಗಳಿಗೆ ನೀಡುವ ಟಿಪ್ಸ್, ಹೆಚ್ಚುವರಿಯಾಗಿ ಮಾಡುವ ಶಾಪಿಂಗ್ ಮುಂತಾದ ಸೇವೆಗಳು ಪ್ಯಾಕೇಜಿನಲ್ಲಿರುವುದಿಲ್ಲ. ಹೆಚ್ಚಿನ ವಿವರಗಳನ್ನು ಐಆರ್ ಸಿಟಿಸಿ ಟೂರಿಸಂ ವೆಬ್ ತಾಣದಲ್ಲಿ ಪಡೆಯಬಹುದು.

ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ

English summary
IRCTC has launched "Srilanka-Shri Ramayan Yatra" Ex Kolkata an all inclusive and most affordable Outbound tour package for the duration of 06 days - 07 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X