ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ನೀರೊಳಗಿನ ಮೆಟ್ರೋ ಸಂಚಾರ ಜೂನ್ 2023ಕ್ಕೆ ಆರಂಭ

|
Google Oneindia Kannada News

ಕೋಲ್ಕತ್ತಾ, ಆಗಸ್ಟ್ 9: ನಿರೀಕ್ಷೆಯಂತೆ ಕಾಮಗಾರಿ ಮುಗಿದರೆ ಜೂನ್ 2023ರಿಂದ ದೇಶದಲ್ಲೇ ಮೊದಲ ಬಾರಿಗೆ ನೀರೊಳಗಿನ ಮೆಟ್ರೋ ಸೇವೆಯಲ್ಲಿ ಪ್ರಯಾಣ ಮಾಡಬಹುದು. ಈ ಅನುಭವ ನಿಮಗೆ ಬೇಕು ಅಂದ್ರೆ ನೀವು ಕೋಲ್ಕತ್ತಾಗೆ ಹೋಗಬೇಕಾಗುತ್ತದೆ.

ಹೌದು, ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ (ಕೆಎಂಆರ್‌ಸಿ) ಸೋಮವಾರ ಹೇಳಿಕೆ ನೀಡಿರುವಂತೆ, ಹೂಗ್ಲಿ ನದಿಯ ಕೆಳಭಾಗದಲ್ಲಿ ಕೋಲ್ಕತ್ತಾದ ಮೂಲಕ ಸಾಲ್ಟ್ ಲೇಕ್ ಅನ್ನು ಹೌರಾಕ್ಕೆ ಸಂಪರ್ಕಿಸುವ ಮೆಟ್ರೋ ಮಾರ್ಗವು ಪ್ರಸ್ತುತ 5ನೇ ಸೆಕ್ಟರ್ ಮತ್ತು ಸೀಲ್ದಾಹ್ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುತ್ತಿದೆ.

ಏರ್‌ಪೋರ್ಟ್ ಲೈನ್ ಮೆಟ್ರೊ: ಚಿಕ್ಕಜಾಲ ನಿವಾಸಿಗಳಿಂದ ನಿಲ್ದಾಣಕ್ಕೆ ಬೇಡಿಕೆಏರ್‌ಪೋರ್ಟ್ ಲೈನ್ ಮೆಟ್ರೊ: ಚಿಕ್ಕಜಾಲ ನಿವಾಸಿಗಳಿಂದ ನಿಲ್ದಾಣಕ್ಕೆ ಬೇಡಿಕೆ

ಸೀಲ್ದಾಹ್‌ನಿಂದ ಹೌರಾ ಮೈದಾನದವರೆಗಿನ ಮೆಟ್ರೋ ಸೇವೆ ಜೂನ್ 2023ರ ವೇಳೆಗೆ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ಕೆಎಂಆರ್‌ಸಿ ಹೇಳಿದೆ, ನೀರೊಳಗಿನ ಮೆಟ್ರೋ ಹೂಗ್ಲಿ ನದಿಯ ಕೆಳಗೆ 500 ಮೀಟರ್ ದೂರ ಚಲಿಸುತ್ತದೆ. ಇದು ಕೋಲ್ಕತ್ತಾದ ಮೂಲಕ ಸಾಲ್ಟ್ ಲೇಕ್ ಅನ್ನು ಹೌರಾಕ್ಕೆ ಸಂಪರ್ಕಿಸುತ್ತದೆ.

ಯೋಜನೆಯ ಒಟ್ಟು 16.55 ಕಿಮೀ ಉದ್ದದಲ್ಲಿ, 5ನೇ ಸೆಕ್ಟರ್ ಮತ್ತು ಸೀಲ್ಡಾ ನಡುವಿನ 9.30 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ, ಉಳಿದ 7.25 ಕಿಲೋ ಮೀಟರ್ ಉದ್ದದ ಕಾಮಗಾರಿ ಬಹುತೇಕ ಪೂರ್ಣವಾಗಲಿದ್ದು ಇನ್ನೊಂದು ವರ್ಷದಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ಕೆಸಿಎಂಆರ್ ಹೇಳಿದೆ.

ಮೆಟ್ರೋ ಕಾಮಗಾರಿ: 1342 ಮರಗಳನ್ನು ಕತ್ತರಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ಮೆಟ್ರೋ ಕಾಮಗಾರಿ: 1342 ಮರಗಳನ್ನು ಕತ್ತರಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್

 2035ರ ವೇಳೆಗೆ 10 ಲಕ್ಷ ಜನರ ಪ್ರಯಾಣ

2035ರ ವೇಳೆಗೆ 10 ಲಕ್ಷ ಜನರ ಪ್ರಯಾಣ

ಯೋಜನೆ ಪೂರ್ಣಗೊಂಡ ನಂತರ, ಎಸ್‌ಪ್ಲಾನೇಡ್, ಮಹಾಕರನ್, ಹೌರಾ ಮತ್ತು ಹೌರಾ ಮೈದಾನದಲ್ಲಿ ಇನ್ನೂ ನಾಲ್ಕು ಭೂಗತ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಪೂರ್ವ-ಪಶ್ಚಿಮ ಮೆಟ್ರೋ ಲಿಂಕ್ ಕೋಲ್ಕತ್ತಾ ಮತ್ತು ಹೌರಾವನ್ನು ಸಂಪರ್ಕಿಸಿದರೆ, ಇದು 2035 ರ ವೇಳೆಗೆ 10 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತದೆ ಎಂದು ಕೆಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಟ್ರೋ ರೈಲು ಸೇವೆಯ ಆರಂಭವು ಲಕ್ಷಾಂತರ ಪ್ರಯಾಣಿಕರಿಗೆ ವರದಾನವಾಗಲಿದೆ. ಸಂಚಾರ ದಟ್ಟಣೆಯ ನಗರಗಳಲ್ಲಿ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಪ್ರಸ್ತುತ, ಕೋಲ್ಕತ್ತಾದಲ್ಲಿನ ಗ್ರೀನ್ ಲೈನ್ ಪೂರ್ವ ಕೋಲ್ಕತ್ತಾದಲ್ಲಿ 5ನೇ ಸೆಕ್ಟರ್ ಮತ್ತು ಫೂಲ್ಬಗಾನ್ ನಡುವೆ 6. 97 ಕಿಮೀ ದೂರವನ್ನು ಒಳಗೊಂಡಿದೆ.

 67 ದಿನಗಳಲ್ಲಿ ಕಾಮಗಾರಿ ಪೂರ್ಣ

67 ದಿನಗಳಲ್ಲಿ ಕಾಮಗಾರಿ ಪೂರ್ಣ

ಈ ಮಾರ್ಗಕ್ಕಾಗಿ ಸುರಂಗಗಳನ್ನು 2017 ರಲ್ಲಿ ನಿರ್ಮಾಣ ಕಂಪನಿಯಾದ ಆಫ್ಕಾನ್ಸ್ ನಿರ್ಮಾಣ ಮಾಡಿದೆ. "ನದಿ ಸುರಂಗಗಳು, ಎಂಜಿನಿಯರಿಂಗ್ ಅದ್ಭುತ, ಭಾರತದಲ್ಲಿ ಮೊದಲನೆಯದು ಮತ್ತು ವಿಶ್ವದಾದ್ಯಂತ ಅಪರೂಪದ ಸಾಹಸವಾಗಿದೆ. ನಿರ್ಮಾಣ ಕಾಮಗಾರಿಯನ್ನು 67 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ" ಎಂದು ಅಫ್ಕಾನ್ಸ್‌ನ ಪ್ರಾಜೆಕ್ಟ್ ಮ್ಯಾನೇಜರ್ ಸತ್ಯ ನಾರಾಯಣ ಕುನ್ವರ್ ತಿಳಿಸಿದ್ದಾರೆ. ಆದರೆ, ನೀರು ತುಂಬಿ ಹರಿಯುತ್ತಿರುವುದರಿಂದ ಯೋಜನೆಗಾಗಿ ಹೆಚ್ಚಿನ ಸಮಯ ತೆಗೆದುಕೊಂಡಿತು ಮತ್ತು ವೆಚ್ಚ ಕೂಡ ಅಧಿಕವಾಯಿತು ಎಂದು ಹೇಳಿದ್ದಾರೆ.

 ಪ್ರಯಾಣಿಕರಿಗೆ ಆಕರ್ಷಣೆಯ ಕೇಂದ್ರ ಬಿಂದು

ಪ್ರಯಾಣಿಕರಿಗೆ ಆಕರ್ಷಣೆಯ ಕೇಂದ್ರ ಬಿಂದು

ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯು ಕೇವಲ 27 ನಿಮಿಷಗಳಲ್ಲಿ ಹೂಗ್ಲಿ ನದಿಯ ಅಡಿಯಲ್ಲಿ 5ನೇ ಸೆಕ್ಟರ್ ನಿಂದ ಹೌರಾವರೆಗಿನ ದೂರವನ್ನು ಕ್ರಮಿಸುತ್ತದೆ. ಲಂಡನ್ ಮತ್ತು ಪ್ಯಾರಿಸ್ ನಡುವಿನ ಯೂರೋಸ್ಟಾರ್ ರೈಲುಗಳ ಭಾರತದ ಸ್ವಂತ ಆವೃತ್ತಿಯಲ್ಲಿ ನದಿಯ ಅಗಲದಲ್ಲಿರುವ ಅವಳಿ ಸುರಂಗಗಳು ಪ್ರಯಾಣಿಕರಿಗೆ ಮತ್ತೊಂದು ಆಕರ್ಷಣೆಯಾಗಲಿವೆ.

ಮೆಟ್ರೋ ಪ್ರಯಾಣಿಕರು ಅರ್ಧ ಕಿಲೋಮೀಟರ್‌ಗೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ನೀರಿನ ಕೆಳಗೆ ಹೋಗುತ್ತಾರೆ.

 ಯೋಜನೆಗೆ 8600 ಕೋಟಿ ರುಪಾಯಿ ವೆಚ್ಚ

ಯೋಜನೆಗೆ 8600 ಕೋಟಿ ರುಪಾಯಿ ವೆಚ್ಚ

ಅಂದಾಜಿನ ಪ್ರಕಾರ, ರೈಲು ಮುಳುಗಿರುವಾಗ 10 ಅಂತಸ್ತಿನ ರಚನೆಗೆ ಸಮಾನವಾದ ಆಳದಲ್ಲಿ ಚಲಿಸುತ್ತದೆ. 1.4 ಮೀಟರ್ ಅಗಲದ ಕಾಂಕ್ರೀಟ್ ರಿಂಗ್‌ಗಳಿಂದ ಅವಳಿ ಸುರಂಗಗಳನ್ನು ನಿರ್ಮಿಸಲಾಗಿದೆ, ಸುರಂಗಗಳಿಗೆ ನೀರು ಪ್ರವೇಶಿಸುವುದನ್ನು ತಡೆಯಲು, ಅವುಗಳು ಹೈಡ್ರೋಫಿಲಿಕ್ ಗ್ಯಾಸ್ಕೆಟ್‌ಗಳೊಂದಿಗೆ ಅಳವಡಿಸಲಾಗಿದೆ.

ವರದಿಗಳ ಪ್ರಕಾರ, ಈ ಯೋಜನೆಯು ಸರಿಸುಮಾರು 8600 ಕೋಟಿ ರುಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ.

ಹೌರಾ ಮೆಟ್ರೋ ನಿಲ್ದಾಣವು ‍ಭೂಮಿಯ ಮಟ್ಟದಿಂದ 33 ಮೀಟರ್ ಆಳವನ್ನು ಹೊಂದಿದ್ದು, ರಾಷ್ಟ್ರದಲ್ಲೇ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ ಎನಿಸಿಕೊಂಡಿದೆ. ಪ್ರಸ್ತುತ, ದೆಹಲಿ ಮೆಟ್ರೋದಲ್ಲಿನ ಹೌಜ್ ಖಾಸ್ ಪ್ರಸ್ತುತ ಅತ್ಯಂತ ಆಳವಾದದ್ದು, 29 ಮೀಟರ್ ಆಳವಿದೆ.

Recommended Video

BJP ಈ 6 ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ನೋ ಟಿಕೆಟ್? | *Politics | OneIndia Kannada

English summary
The Kolkata Metro Rail Corporation (KMRC) on Monday said that, the India's maiden underwater metro service likely to be completed by June 2023. The metro line, which will connect Salt Lake to Howrah via Kolkata with a stretch below the Hooghly river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X