ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರ ಸಿದ್ಧಪಡಿಸಿದ ಕೆಂಪು ವಲಯಗಳ ಪಟ್ಟಿ ನೆಟ್ಟಗಿಲ್ಲವೇ?

|
Google Oneindia Kannada News

ಕೋಲ್ಕತ್ತಾ, ಮೇ.01: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕಿದೆ. ಭಾರತ ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನಾಗಿ ವಿಂಗಡಿಸಿದೆ. ಈ ಪಟ್ಟಿಯೇ ನೆಟ್ಟಗಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ.

Recommended Video

ಪೊಲೀಸರು ಮಾಡುತ್ತಿರೋ ಕೆಲಸಕ್ಕೆ ನಮ್ಮದೊಂದು ಚಿಕ್ಕ ಸಲಾಂ | Oneindia Kannada

ನೊವೆಲ್ ಕೊರೊನಾ ವೈರಸ್ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರವು ದೇಶದಲ್ಲಿ 130 ಕೆಂಪು ವಲಯಗಳನ್ನು ಪಟ್ಟಿ ಮಾಡಿದೆ.

ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ದೇಶದಲ್ಲಿ ಕೆಂಪು ವಲಯಗಳನ್ನು ಗುರುತಿಸಿದ ಕೇಂದ್ರ ಸರ್ಕಾರದ ಮಾನದಂಡದಲ್ಲಿ ಲೋಪವಿದೆ ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ವಿವೇಕ್ ಕುಮಾರ್ ಕೇಂದ್ರದ ಮುಖ್ಯ ಆರೋಗ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಏಪ್ರಿಲ್.30ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಕಾರ್ಯದರ್ಶಿಯವರು ಮಂಡನೆ ಸರಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇರೋದು 4 ಕೆಂಪು ವಲಯಗಳಲ್ಲ

ಪಶ್ಚಿಮ ಬಂಗಾಳದಲ್ಲಿ ಇರೋದು 4 ಕೆಂಪು ವಲಯಗಳಲ್ಲ

ಕಳೆದ ಏಪ್ರಿಲ್.30ರಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಂಪುಟ ಕಾರ್ಯದರ್ಶಿಯವರು ಪಶ್ಚಿಮ ಬಂಗಾಳದಲ್ಲಿ ಕೇವಲ ನಾಲ್ಕೇ ನಾಲ್ಕು ಜಿಲ್ಲೆಗಳನ್ನು ಕೆಂಪು ವಲಯ ಎಂದು ಘೋಷಿಸಿದ್ದಾರೆ. ಆದರೆ ರಾಜ್ಯ ಸರ್ಕಾರದ ಪ್ರಕಾರ ಪಶ್ಚಿಮ ಬಂಗಾಳದಲ್ಲಿ 10ಕ್ಕೂ ಹೆಚ್ಚು ಕೆಂಪು ವಲಯಗಳಿವೆ. ಈ ಪ್ರದೇಶಗಳಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಕೇಂದ್ರ ಸರ್ಕಾರವು ಕೋಲ್ಕತ್ತಾ, ಹೌರಾ, ನಾರ್ತ್ 24 ಪರಗಣಾಸ್ ಮತ್ತು ಪುರ್ಬಾ ಮೆದಿನಿಪುರ್ ಜಿಲ್ಲೆಗಳನ್ನು ಕೆಂಪು ವಲಯ ಎಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಮೂರು ವಲಯಗಳ ಪಟ್ಟಿಯಲ್ಲಿ ಇರೋದೇನು?

ರಾಜ್ಯದಲ್ಲಿ ಮೂರು ವಲಯಗಳ ಪಟ್ಟಿಯಲ್ಲಿ ಇರೋದೇನು?

ಪಶ್ಚಿಮ ಬಂಗಾಳದಲ್ಲಿ 8 ಹಸಿರು ವಲಯ, 11 ಕಿತ್ತಳೆ ವಲಯ ಹಾಗೂ ನಾಲ್ಕು ಜಿಲ್ಲೆಗಳನ್ನು ಕೆಂಪು ವಲಯ ಎಂದು ಕೇಂದ್ರ ಸರ್ಕಾರವು ಗುರುತಿಸಿದೆ. ಕೇಂದ್ರವು ಗುರುತಿಸಿರುವ ಜಿಲ್ಲೆಗಳ ಪಟ್ಟಿಯನ್ನು ಪತ್ರದ ಜೊತೆಗೆ ಲಗತ್ತಿಸಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಲಾಗಿದೆ.

ಭಾರತದಲ್ಲಿ ಗುರುತಿಸಿದ ಕೆಂಪು ವಲಯಗಳ ವಿಶೇಷ?

ಭಾರತದಲ್ಲಿ ಗುರುತಿಸಿದ ಕೆಂಪು ವಲಯಗಳ ವಿಶೇಷ?

ದೇಶದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಅಥವಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಂಪು ವಲಯಗಳು ಎಂದು ಗುರುತಿಸಲಾಗುತ್ತಿದೆ. ಕೊರೊನಾ ಶಂಕಿತರು ಹೆಚ್ಚಾಗಿರುವ ವಲಯಗಳನ್ನು ಕಿತ್ತಳೆ ಹಾಗೂ ಸೋಂಕಿತರೇ ಇಲ್ಲದ ಪ್ರದೇಶವನ್ನು ಹಸಿರುವ ವಲಯ ಎಂದು ಗುರುತಿಸಲಾಗಿದೆ.

ದೇಶದಲ್ಲಿ ಇರುವ ಕೆಂಪು, ಕಿತ್ತಳೆ, ಹಸಿರು ವಲಯಗಳೆಷ್ಟು?

ದೇಶದಲ್ಲಿ ಇರುವ ಕೆಂಪು, ಕಿತ್ತಳೆ, ಹಸಿರು ವಲಯಗಳೆಷ್ಟು?

ಕೇಂದ್ರ ಸರ್ಕಾರವು ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ ವಲಯ ಹಾಗೂ 319 ಹಸಿರು ವಲಯಗಳೆಂದು ಪಟ್ಟಿ ಮಾಡಿದೆ. ಕಂಟೋನ್ಮೆಂಟ್ ಝೋನ್ ಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪತ್ತೆ ಮತ್ತು ಸೋಂಕಿತರ ಜೊತೆಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವುದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಕೆಲವು ಮಾರ್ಗಸೂಚಿಗಳನ್ನು ಕೂಡಾ ರೂಪಿಸಲಾಗಿದೆ.

English summary
India Lockdown: West Bengal Government Object Central Government Zones List. Mamata Banarjee Sends Own List To Central.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X