ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಮಮತಾ ಕಾರ್ಡ್ V/s ರಾಮ್ ಕಾರ್ಡ್

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ.14: ಪಶ್ಚಿಮ ಬಂಗಾಳದಲ್ಲಿ ಜನತಾ ಕಾರ್ಡ್ ಮತ್ತು ಮಮತಾ ಕಾರ್ಡ್ ನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುವ ರಾಮ ಕಾರ್ಡ್ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಟಿಎಂಸಿ ಕಾರ್ಯದರ್ಶಿ ಪಾರ್ಥ ಛಟರ್ಜಿ ತಿರುಗೇಟು ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ. ಟಿಎಂಸಿ ಸರ್ಕಾರವು ಜಾರಿಗೊಳಿಸಿರುವ ಕಲ್ಯಾಣ ಯೋಜನೆಗಳಿಂದ ರಾಜ್ಯದಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳುವುದ ಕಷ್ಟವಾಗುತ್ತಿದೆ. ಹೀಗಾಗಿ ವಾಕ್ಚಾತುರ್ಯದಿಂದ ಮತದಾರರನ್ನು ಸೆಳೆಯುವುದಕ್ಕೆ ನೋಡುತ್ತಿದ್ದಾರೆ. ಆದರೆ ಈ ತಂತ್ರವು ಪಶ್ಚಿಮ ಬಂಗಾಳದಲ್ಲಿನ ಮತದಾರರ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವವರೆಗೂ ಬಿಜೆಪಿಗೆ ವಿಶ್ರಾಂತಿ ಇಲ್ಲ: ಅಮಿತ್ ಶಾ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಎಂಬ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ಎಂಬ ಜನತಾ ಕಾರ್ಡ್ ಮತ್ತು ಮಮತಾ ಕಾರ್ಡ್ ಎದುರಿಗೆ ಪ್ರಧಾನಿಯ ಈ ಅಸ್ತ್ರ ವರ್ಕೌಟ್ ಆಗುವುದಿಲ್ಲ ಎಂದು ಪಾರ್ಥ ಛಟರ್ಜಿ ಹೇಳಿದ್ದಾರೆ.

In West Bengal Only Mamata Card Matter To People, Not Modis Ram card: Said TMC Leader

ಪಶ್ಚಿಮ ಬಂಗಾಳಕ್ಕೆ ಸಿಕ್ಕಿಲ್ಲ ಕೇಂದ್ರದ ನೆರವು:
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಆದರೆ ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿ ಇಂಫಾಲ್ ಸುನಾಮಿಯಿಂದ ಕೋಟಿ ಕೋಟಿ ರೂಪಾಯಿ ನಷ್ಟ ಸಂಭವಿಸಿದರೂ ಕೇಂದ್ರದಿಂದ ಯಾವುದೇ ಆರ್ಥಿಕ ನೆರವು ನೀಡಿರಲಿಲ್ಲ ಎಂದು ಪಾರ್ಥ ಛಟರ್ಜಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳವನ್ನು ನಿರ್ಲಕ್ಷಿಸಲಾಗಿದ್ದು, ಜನತೆಯು ಅದಕ್ಕೆ ಶಿಕ್ಷೆಯಾಗಿ ಉತ್ತರ ನೀಡುತ್ತಾರೆ.
ದೇಶದಲ್ಲಿ ಆಹಾರ ಧಾನ್ಯ ಮತ್ತು ಮೂಲಭೂತ ವಸ್ತುಗಳ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆಯು ಗಗನಮುಖಿಯಾಗಿ ಏರಿಕೆಯಾಗುತ್ತಿದೆ. ಇನ್ನೇನು ಇಷ್ಟರಲ್ಲೇ 100 ರೂಪಾಯಿ ಗಡಿ ದಾಟುತ್ತದೆ ಎಂದು ಪಾರ್ಥ ಛಟರ್ಜಿ ಕಿಡಿ ಕಾರಿದ್ದಾರೆ.

English summary
In West Bengal Only Mamata Card Matter To People, Not Modi's 'Ram card', Said TMC Leader Partha Chatterjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X