ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಪ್ರಾರ್ಥನೆಯ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೊಲ್ಕತ್ತಾ, ಜೂನ್ 5: ರಂಜಾನ್ ಹಬ್ಬದ ದಿನ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಶುಭಾಶಯ ಕೋರುತ್ತಾ, ಜೊತೆಗೆ ಪ್ರಾರ್ಥನೆ ಸಲ್ಲಿಸಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಸೂರ್ಯ ಬೆಳಗ್ಗೆ ಉದಯಿಸುತ್ತಾನೆ, ನಂತರ ಅವನ ಬಿಸಿಲಿನ ಪ್ರಖರತೆ ತೀವ್ರವಾಗುತ್ತಾ ಸಾಗುತ್ತದೆ, ಸಂಜೆಯ ಹೊತ್ತಿಗೆ ಅವನು ಮುಳುಗುತ್ತಾನೆ ಎಂದು ಬಿಜೆಪಿಯನ್ನು ಉಲ್ಲೇಖಿಸಿ ಮಮತಾ ಟೀಕಿಸಿದ್ದಾರೆ.

ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆ

ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತೆಂದು ಯಾರೂ ಭಯಪಡಬೇಕಾಗಿಲ್ಲ. ಜೈಶ್ರೀರಾಮ್.. ಜೈಶ್ರೀರಾಮ್ ಎನ್ನುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.

In the Ramzan prayer, West Bengal CM Mamata Banerjee lambasted BJP

ಮತ ಯಂತ್ರಗಳನ್ನು ವಶಪಡಿಸಿಕೊಂಡು ಉದಯಿಸಿದಷ್ಟೇ ವೇಗದಲ್ಲಿ ಅವರು (ಬಿಜೆಪಿ) ಮುಳುಗುತ್ತಾರೆ ಎಂದಿರುವ ಮಮತಾ, ನಮ್ಮ ದೇಶ ಸರ್ವಧರ್ಮದ ಶಾಂತಿಯ ತೋಟ, ಅದಕ್ಕೆ ನಮ್ಮ ರಾಜ್ಯದಲ್ಲಿ ತೊಂದರೆ ಬಂದರೆ, ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ 24 ಪರಗಣ ಜಿಲ್ಲೆಯ ಬಿಜೆಪಿ ಕಚೇರಿಯ, ಬಾಗಿಲನ್ನು ತೆಗೆದು, ಅಲ್ಲಿ ತೃಣಮೂಲ ಕಾಂಗ್ರೆಸ್ಸಿನ ಚಿಹ್ನೆಯನ್ನು ಮಮತಾ ಬ್ಯಾನರ್ಜಿ ಪೈಂಟ್ ಮಾಡಿದ್ದು, ಭಾರೀ ಚರ್ಚೆಯ ವಿಷಯವಾಗಿತ್ತು.

ಬಳ್ಳಾರಿಯಲ್ಲಿ ಪೇಜಾವರ ಶ್ರೀಗಳು, ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಅಗತ್ಯ, ಇತ್ತೀಚಿನ ದಿನಗಳಲ್ಲಿ ಅವರ ನಡೆ ನನಗೆ ಬಹಳ ಬೇಸರ ತಂದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಬಗ್ಗೆ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದರು.

English summary
In the Ramzan prayer, West Bengal Chief Minister Mamata Banerjee lambasted BJP. She said, BJP again came to power in central, but nobody should not fear about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X