ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸರ್ಕಾರ ರಚನೆಗೆ ಬಿಜೆಪಿ- ಟಿಎಂಸಿ ಒಂದಾಗುವುದನ್ನೂ ನೀವು ನೋಡಬಹುದು"

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 9: ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೂರು ಹಂತದ ಚುನಾವಣೆಗಳು ಮುಗಿದಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಕ್ ಸಮರವೇ ನಡೆಯುತ್ತಿದೆ. ಅಲ್ಲಲ್ಲಿ ಈ ಎರಡೂ ಪಕ್ಷಗಳ ನಡುವೆ ಗಲಭೆ ನಡೆದ ವರದಿ ಆಗಿದೆ.

ಆದರೆ ಇವುಗಳ ಮಧ್ಯೆ ಸಿಪಿಐ (ಎಂ) ಪಶ್ಚಿಮ ಬಂಗಾಳ ಕಾರ್ಯದರ್ಶಿ ಸೂರ್ಯ ಕಾಂತ ಮಿಶ್ರಾ ಅವರು ಹೊಸದೊಂದು ಸಾಧ್ಯತೆಯ ಕುರಿತು ಮಾತನಾಡಿದ್ದಾರೆ. ಚುನಾವಣಾ ಆಯೋಗದ ನಿಷ್ಪಕ್ಷಪಾತದ ಕುರಿತು ಪ್ರಶ್ನೆ ಮಾಡಿರುವ ಅವರು, ಒಂದು ವೇಳೆ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಬಹುಮತ ಸಿಗದಿದ್ದರೆ ಬಿಜೆಪಿ ಹಾಗೂ ಟಿಎಂಸಿ ಕೈಜೋಡಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಮುಂದೆ ಓದಿ...

 ಅತಂತ್ರ ಫಲಿತಾಂಶ ಬಂದರೆ ಎರಡೂ ಪಕ್ಷಗಳು ಒಂದಾಗಬಹುದು

ಅತಂತ್ರ ಫಲಿತಾಂಶ ಬಂದರೆ ಎರಡೂ ಪಕ್ಷಗಳು ಒಂದಾಗಬಹುದು

ಸದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಜಟಾಪಟಿಯಲ್ಲಿವೆ. ಯಾರು ಗೆಲ್ಲಬಹುದು ಎಂಬುದನ್ನು ಹೇಳುವುದು ಕಷ್ಟವಾಗಿದೆ. ಆದರೆ ಅತಂತ್ರ ಫಲಿತಾಂಶ ಬಂದರೆ ಬಿಜೆಪಿ ಜೊತೆ ಟಿಎಂಸಿ ಕೈಜೋಡಿಸುವ ಸಾಧ್ಯತೆ ಇದೆ ಎಂದು ಸಿಪಿಐಎಂ ಕಾರ್ಯದರ್ಶಿ ಸೂರ್ಯ ಕಾಂತ ಮಿಶ್ರಾ ಹೇಳಿದ್ದಾರೆ.

ಬಿಜೆಪಿ ಪರ ಮತದಾರರಿಗೆ ಕಿರುಕುಳ ನೀಡುತ್ತಿರುವ ಸಿಆರ್‌ಪಿಎಫ್: ಮಮತಾ ಆರೋಪಬಿಜೆಪಿ ಪರ ಮತದಾರರಿಗೆ ಕಿರುಕುಳ ನೀಡುತ್ತಿರುವ ಸಿಆರ್‌ಪಿಎಫ್: ಮಮತಾ ಆರೋಪ

"ಟಿಎಂಸಿ-ಬಿಜೆಪಿ ಓಲೈಸುತ್ತಿದೆ ಚುನಾವಣಾ ಆಯೋಗ"

ಎಡಪಕ್ಷಗಳ ಮೈತ್ರಿಕೂಟ ಸಂಯುಕ್ತ ಮೋರ್ಚಾ ಮಾತ್ರವಲ್ಲದೇ ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಚುನಾವಣಾ ಅಕ್ರಮಗಳ ಬಗ್ಗೆ ದೂರುಗಳನ್ನು ನೀಡಿವೆ. ಆದರೆ ಯಾವುದನ್ನೂ ಆಯೋಗ ಪರಿಗಣಿಸಿಲ್ಲ. ಟಿಎಂಸಿ ಹಾಗೂ ಬಿಜೆಪಿಯನ್ನು ಓಲೈಸುವುದರಲ್ಲೇ ಚುನಾವಣಾ ಆಯೋಗ ನಿರತವಾಗಿದೆ ಎಂದು ಆರೋಪಿಸಿದ್ದಾರೆ.

"ಟಿಎಂಸಿ, ಬಿಜೆಪಿ ಕೈಜೋಡಿಸುವುದನ್ನು ಕಾಣುವ ಸಾಧ್ಯತೆ ಇದೆ"

ಚುನಾವಣಾ ಫಲಿತಾಂಶದಲ್ಲಿ ಒಂದು ವೇಳೆ ಅತಂತ್ರ ಉಂಟಾದರೆ ಎಡಪಕ್ಷಗಳ ಸಂಯುಕ್ತ ಮೋರ್ಚಾ ಮೈತ್ರಿಕೂಟ ಟಿಎಂಸಿ ಜೊತೆ ಕೈಜೋಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ, ಇದು ಕಾಲ್ಪನಿಕ ಎಂದು ಹೇಳಿ, ಸಂಯುಕ್ತ ಮೋರ್ಚಾ ಸರ್ಕಾರ ರಚಿಸುವ ಪ್ರಯತ್ನದಲ್ಲಿದೆ. ಜೊತೆಗೆ ಟಿಎಂಸಿ, ಬಿಜೆಪಿ ಕೈಜೋಡಿಸುವುದನ್ನು ನೀವು ಕಾಣುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪ್ರತಿದಿನವೂ ಹಿಂದೂ-ಮುಸ್ಲಿಂ ಎನ್ನುವ ಮೋದಿ ವಿರುದ್ಧ ಏಕೆ ದೂರು ದಾಖಲಾಗಿಲ್ಲ?ಪ್ರತಿದಿನವೂ ಹಿಂದೂ-ಮುಸ್ಲಿಂ ಎನ್ನುವ ಮೋದಿ ವಿರುದ್ಧ ಏಕೆ ದೂರು ದಾಖಲಾಗಿಲ್ಲ?

 ಬಿಜೆಪಿ- ಟಿಎಂಸಿ ಜಿದ್ದಾಜಿದ್ದಿಯಲ್ಲಿ ಇವೆಲ್ಲಾ ಸಾಧ್ಯವೇ?

ಬಿಜೆಪಿ- ಟಿಎಂಸಿ ಜಿದ್ದಾಜಿದ್ದಿಯಲ್ಲಿ ಇವೆಲ್ಲಾ ಸಾಧ್ಯವೇ?

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಎಂಟು ಹಂತದ ಚುನಾವಣೆಗಳಲ್ಲಿ ಮೂರು ಹಂತಗಳು ಮುಗಿದಿವೆ. ಬಿಜೆಪಿ-ಟಿಎಂಸಿ ನಡುವೆ ಜಿದ್ದಿನ ಹಣಾಹಣಿ ಇದೆ. ಈ ನಡುವೆ ಸಿಪಿಐಎಂ ಕಾರ್ಯದರ್ಶಿ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Trinamool Congress and the BJP may join hands if both the parties fall short of requisite numbers to form the government, opines CPI(M)'s West Bengal secretary Surya Kanta Mishra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X