ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: ಕಾಂಗ್ರೆಸ್

|
Google Oneindia Kannada News

ಕೊಲ್ಕತ್ತಾ, ಅಕ್ಟೋಬರ್ 11: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ಸಂಸದ ಅಧೀರ್ ರಂಜನ್ ಚೌಧರಿ, 'ರಾಜ್ಯದಲ್ಲಿ ಹಿಂಸೆ ತಾಂಡವವಾಡುತ್ತಿದೆ, ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಹೇರಬೇಕು' ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ RSS ಕಾರ್ಯಕರ್ತ, ಗರ್ಭಿಣಿ ಪತ್ನಿ, ಮಗುವಿನ ಬರ್ಬರ ಹತ್ಯೆಪಶ್ಚಿಮ ಬಂಗಾಳದಲ್ಲಿ RSS ಕಾರ್ಯಕರ್ತ, ಗರ್ಭಿಣಿ ಪತ್ನಿ, ಮಗುವಿನ ಬರ್ಬರ ಹತ್ಯೆ

ನಿನ್ನೆಯಷ್ಟೆ ಆರ್‌ಎಸ್‌ಎಸ್ ಕಾರ್ಯಕರ್ತ ಆತನ ಗರ್ಭಿಣಿ ಪತ್ನಿ ಮತ್ತು ಮಗುವನ್ನು ಹಾಡ ಹಗಲೇ ಕೊಂದಿರುವ ಘಟನೆ ಬಗ್ಗೆ ಮಾತನಾಡುತ್ತಾ ಅವರು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Impose President Rule In West Bengal: Congress

ರಾಜ್ಯದ ಬಿಜೆಪಿ ಸಹ ಇದೇ ಒತ್ತಾಯ ಮಾಡಿದ್ದು, ದೀದಿ ಆಡಳಿತದಲ್ಲಿ ಹಿಂಸಾಚಾರ ಮೇರೆ ಮೀರಿದ್ದು ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದೆ.

ಆ ದಿನ ಮಳೆ ಬರದಿದ್ದರೆ...ಲಕ್ಷ ಗೆಲ್ಲಲು ಆಗ್ತಿರ್ಲಿಲ್ಲ: ಲಾಟರಿ ಗೆದ್ದ ರಿಕ್ಷಾ ಚಾಲಕ ಆ ದಿನ ಮಳೆ ಬರದಿದ್ದರೆ...ಲಕ್ಷ ಗೆಲ್ಲಲು ಆಗ್ತಿರ್ಲಿಲ್ಲ: ಲಾಟರಿ ಗೆದ್ದ ರಿಕ್ಷಾ ಚಾಲಕ

ಪೋನ್ಜಿ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ ಅಧೀರ್ ರಂಜನ್ ಚೌಧರಿ, 'ಇತ್ತೀಚೆಗಷ್ಟೆ ಮಮತಾ ಬ್ಯಾನರ್ಜಿ ಅವರು, ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದಾರೆ. ಆಗಿನಿಂದ ಹಗರಣದ ತನಿಖೆ ನಿಧಾನವಾಗಿದೆ ಇವರಲ್ಲಿ ಏನಾದರೂ ಒಳ ಒಪ್ಪಂದ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂಸಾಚಾರದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಅದರಲ್ಲಿಯೂ ರಾಜಕೀಯ ಪ್ರೇರಿತ ಹತ್ಯೆಗಳು ರಾಜ್ಯದಲ್ಲಿ ಹೆಚ್ಚಾಗಿವೆ.

English summary
Congress leader Adhir Ranjan Chowdary demand central government to impose president rule in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X