ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ಟು ಹೋಗುವವರು ಹೋಗಲಿ, ಡೋಂಟ್ ಕೇರ್: ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಜೂನ್ 18: "ಯಾವುದೇ ಶಾಸಕರಿಗೆ ಟಿಎಂಸಿ ಬಿಟ್ಟು ಹೋಗಬೇಕು ಎನ್ನಿಸಿದರೆ ಅವರು ಹೋಗಬಹುದು. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ಸೋಮವಾರದಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗಿಯ, ಹಿರಿಯ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಟಿಎಂಸಿಯ ನೌಪರ ಶಾಸಕ ಸುನಿಲ್ ಸಿಂಗ್ ಬಿಜೆಪಿ ಸೇರಿದರು. ಅವರೊಂದಿಗೆ 12 ಕೌನ್ಸಲರ್ ಗಳೂ ಬಿಜೆಪಿ ಸೇರಿದ್ದರು.

ಬಿಜೆಪಿಗೆ ಟಿಎಂಸಿ ನಾಯಕ, ಮಮತಾ ಮೇಲೆರಗಿದ ಮತ್ತೊಂದು ಬರಸಿಡಿಲು!ಬಿಜೆಪಿಗೆ ಟಿಎಂಸಿ ನಾಯಕ, ಮಮತಾ ಮೇಲೆರಗಿದ ಮತ್ತೊಂದು ಬರಸಿಡಿಲು!

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ಒಬ್ಬ ಕೌನ್ಸಲರ್ ಪಕ್ಷ ತೊರೆದರೆ 500 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತಾಕತ್ತು ನನಗಿದೆ ಎಂದು ಅವರು ಹೇಳಿದರು.

If party MLAs want to leave they can, I dont care says Mamata Banerjee

"ತೃಣಮೂಲ ಕಾಂಗ್ರೆಸ್ ದುರ್ಬಲ ಪಕ್ಷವಲ್ಲ. 15-20 ಕೌನ್ಸೆಲರ್ ಗಳು ಹಣಕ್ಕಾಗಿ ಪಕ್ಶಃ ತೊರೆದರೆ ನಾವು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಪಕ್ಷದ ಶಾಸಕರಿಗೆ ಪಕ್ಷ ತೊರೆಯಬೇಕೆನ್ನಿಸಿದರೆ ತೊರೆಯಬಹುದು. ನಮಗೆ ಕಳ್ಳರನ್ನು ಪಕ್ಷದಲ್ಲಿರಿಸಿಕೊಳ್ಳಲು ಇಷ್ಟವೂ ಇಲ್ಲ. ಒಬ್ಬರು ಬಿಟ್ಟು ಹೋದರೆ 500 ಜನರನ್ನು ಸೇರಿಸೊಳ್ಳುವ ತಾಕತ್ತು ನನಗಿದೆ" ಎಂದು ಮತಾ ಬ್ಯಾನರ್ಜಿ ಹೇಳಿದರು.

English summary
West Bengal CM Mamata Banerjee in Kolkata said, TMC is not a weak party. I don't care if 15-20 councillors leave the party after accepting cash. If party MLAs want to leave they can. We don't want thieves in our party. If one person leaves I will prepare 500 more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X