ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ: ಗರ್ಭಿಣಿಯಂತೆ ಬಂದು ಆತ್ಮಾಹುತಿ ದಾಳಿ!

|
Google Oneindia Kannada News

ಕೋಲ್ಕತ್ತಾ, ಮೇ 11: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಕೆಲ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಮೇ 18 ರಂದು ಬುದ್ಧ ಪೂರ್ಣಿಮೆ ಆಚರಣೆಯ ಸಮಯದಲ್ಲಿ ಮಹಿಳೆಯೊಬ್ಬರು ಗರ್ಭಿಣಿಯಂತೆ ವೇಷ ಧರಿಸಿ ಬಂದು ಹಿಂದು ಅಥವಾ ಬೌದ್ಧ ಮಂದಿರಗಳನ್ನು ಹೊಕ್ಕಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದ್ದು, ಈ ಕುರಿತು ಎಚ್ಚರಿಕೆ ವಹಿಸುವಂತೆ ಅದು ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ತಿಳಿಸಿದೆ.

ಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿ

ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಜಾಮತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆಗಳು ಈ ದಾಳಿ ನಡೆಸಲು ಸಂಚು ರೂಪಿಸಿವೆ ಎನ್ನಲಾಗಿದೆ.

IB warns suicide attack on Bangladesh and WB on Buddha Purnima

ಮೇ 19 ರಂದು ಪಶ್ಚಿಮ ಬಂಗಾಳದಲ್ಲಿ ಕೊನೆಯೇ ಹಂತದ ಮತದಾನವೂ ಇದ್ದು, ಮೇ 18 ರಂದು ಬುದ್ಧ ಪೂರ್ಣಿಮೆ ಆಚರಣೆಗೊಳ್ಳಲಿದೆ. ಈ ಸಮಯದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅವರನ್ನು ಗುರಿಯಾಗಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಗರ್ಭಿಣಿ ವೇಶದಲ್ಲಿ ಬಂದರೆ ಹೆಚ್ಚಿನ ತಪಾಸಣೆ ನಡೆಸುವುದಿಲ್ಲ ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಿರುವ ಸಾಧ್ಯತೆ ಇದೆ.

ಕೇರಳದಲ್ಲಿ ಬಂಧಿತ ಉಗ್ರ ರಿಯಾಜ್ ಬಾಯ್ಬಿಟ್ಟ ಭಯಾನಕ ಸಂಗತಿಗಳುಕೇರಳದಲ್ಲಿ ಬಂಧಿತ ಉಗ್ರ ರಿಯಾಜ್ ಬಾಯ್ಬಿಟ್ಟ ಭಯಾನಕ ಸಂಗತಿಗಳು

ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ ಈಸ್ಟರ್ ಆಚರಣೆ ವೇಳೆ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ದಾಳಿಯನ್ನು ಚರ್ಚ್ ಮತ್ತು ಹೊಟೇಲ್ ಗಳನ್ನು ಗುರಿಯಾಗಿಸಿಕೊಂಡು ಮಾಡಲಾಗಿತ್ತು.

English summary
Central Intelligence Bureau warns Bangladesh government and West Bengal state government that, Jamaat-ul-Mujahideen Bangladesh (JMB) or Islamic State (ISIS) planned to terror attack on Buddha Purnima. Suicide bomber may wear dress like a pragnant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X