ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲಿ ಹಿಂಸೆ ನೀಡಲಾಗಿತ್ತು ಎಂದ ಬಿಜೆಪಿ ನಾಯಕಿ

|
Google Oneindia Kannada News

ಕೋಲ್ಕತ್ತಾ, ಮೇ 15: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಎಡಿಟ್ ಮಾಡಿ, ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ಬಂಧನಗಕ್ಕೊಳಗಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ, ತಮಗೆ ಜೈಲಿನಲ್ಲಿ ಕಿರುಕುಳ ನೀಡಡಲಾಗಿತ್ತು ಎಂದಿದ್ದಾರೆ.

"ಜೈಲಿನಲ್ಲಿ ನನಗೆ ಹಿಂಸೆ ನೀಡಲಾಯ್ತು. ಜೈಲರ್ ನನ್ನನ್ನು ತಳ್ಳುತ್ತಿದ್ದರು. ಜೈಲಿನಲ್ಲಿ ಒರಟಾಗಿ ನಡೆಸಿಕೊಂಡರು. ನಾನು ಯಾರೊಂದಿಗೂ ಮಾತನಾಡುವುದಕ್ಕೆ ಅವಕಾಶ ನೀಡಲಿಲ್ಲ. ನನಗೆ ಸರಿಯಾಗಿ ನೀರನ್ನೂ ಕೊಡಲಿಲ್ಲ. ಶೌಚಾಲಯದಲ್ಲೂ ನೀರಿರಲಿಲ್ಲ" ಎಂದು ಶರ್ಮಾ ಆರೋಪಿಸಿದರು.

ಪ್ರಿಯಾಂಕ ಹೋಲುವಂತೆ ಮಮತಾ ಬ್ಯಾನರ್ಜಿ ಚಿತ್ರ ಎಡಿಟ್: ಬಿಜೆಪಿ ನಾಯಕಿ ಅರೆಸ್ಟ್ಪ್ರಿಯಾಂಕ ಹೋಲುವಂತೆ ಮಮತಾ ಬ್ಯಾನರ್ಜಿ ಚಿತ್ರ ಎಡಿಟ್: ಬಿಜೆಪಿ ನಾಯಕಿ ಅರೆಸ್ಟ್

I was tortured in jail: Priyanka Sharma who shared Mamata Banerjees meme

ಮಂಗಳವಾರವೇ ಆಕೆಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಕ್ಷಮೆ ಕೇಳುವಂತೆ ಸೂಚಿಸಿತ್ತು. ಆದರೆ ಸುಪ್ರೀಂ ಆದೇಶದ ಹೊರತಾಗಿಯೂ ಹದಿನೆಂಟು ಗಂಟೆಗಳ ಕಾಲ ಆಕೆಯನ್ನು ಜೈಲಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು ಎಂದು ಶರ್ಮಾ ದೂರಿದ್ದಾರೆ.

"ನನಗೆ ಜಾಮೀನು ಮಂಜೂರಾದ ಮೇಲೂ ನನ್ನನ್ನು ಅವರು 18 ಗಂಟೆಗಳ ಕಾಲ ಬಿಡುಗಡೆ ಮಾಡಿರಲಿಲ್ಲ. ನನ್ನ ಕುಟುಂಬ ಮತ್ತು ವಕೀಲರನ್ನು ಭೇಟಿ ಮಾಡುವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ನಾನು ಕ್ಷಮಾಪಣಾ ಪತ್ರಕ್ಕೆ ಸಹಿಮಾಡಬೇಕೆಂದರು. ನಾನು ಕ್ಷಮೆ ಕೇಳುವುದಿಲ್ಲ. ಹೋರಾಡುತ್ತೇನೆ" ಎಂದು ಪ್ರಿಯಾಂಕಾ ಶರ್ಮಾ ಹೇಳಿದರು.

ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 'ಎಂಇಟಿ ಗಾಲಾ - 2019' ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡ ಚಿತ್ರಕ್ಕೆ ಮಮತಾ ಬ್ಯಾನರ್ಜಿಯ ಮುಖವನ್ನು ಹಚ್ಚಿ, ಎಡಿಟ್ ಮಾಡಲಾಗಿತ್ತು. ಈ ಚಿತ್ರವನ್ನು ಪಶ್ಚಿಮ ಬಂಗಾಳದ ಯುವ ನಾಯಕಿ, ಹೌರಾ ಜಿಲ್ಲೆಯ ಬಿಜೆಪಿ ಸಂಚಾಲಕಿ ಪ್ರಿಯಾಂಕ ಶರ್ಮಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತು ತೃಣಮೂಲ ಕಾಂಗ್ರೆಸ್ ಮುಖಂಡ ವಿಭಾಸ್ ಹಜ್ರಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದ ಕಾರಣ ಹೌರಾ ಪೊಲೀಸರು ಪ್ರಿಯಾಂಕ ಶರ್ಮಾ ಅವರನ್ನು ಬಂಧಿಸಿ, ಹೌರಾ ಕೋರ್ಟಿಗೆ ಹಾಜರು ಪಡಿಸಿದ್ದರು.

English summary
Priyanka Sharma who is BJP activist arrested and freed after five days, for posting edited photo of WB CM Mamata Banerjee said, She was tortured in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X