ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತರೂ ಸರಿ, ಹೋರಾಟ ಬಿಡೆನು: ಮಮತಾ ಬ್ಯಾನರ್ಜಿ

|
Google Oneindia Kannada News

ಕೊಲ್ಕತ್ತ, ಫೆಬ್ರವರಿ 04: ಕೇಂದ್ರ ಸರ್ಕಾರದ ವಿರುದ್ಧ ಟೊಂಕ ಕಟ್ಟಿ ನಿಂತಿರುವ ಮಮತಾ ಬ್ಯಾನರ್ಜಿ ಹೋರಾಟವನ್ನು ಅಂತ್ಯ ಮಾಡುವ ಸಣ್ಣ ಲಕ್ಷಣವೂ ಕಾಣುತ್ತಿಲ್ಲ.

ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ನಿವಾಸದ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳನ್ನೇ ಕೊಲ್ಕತ್ತ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರ ಪರ ನಿಂತಿದ್ದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು.

ಮೋದಿ ಭೀತಿಯಲ್ಲಿ ದೀದಿ? ಕೋಲ್ಕತ್ತಾದಲ್ಲಿ ಪ್ರಜಾತಂತ್ರದ ಭಾರೀ ಅಣಕಮೋದಿ ಭೀತಿಯಲ್ಲಿ ದೀದಿ? ಕೋಲ್ಕತ್ತಾದಲ್ಲಿ ಪ್ರಜಾತಂತ್ರದ ಭಾರೀ ಅಣಕ

'ಪಕ್ಷದ ಮುಖಂಡರ ಮೇಲೆ ಸುಖಾಸುಮ್ಮನೆ ನೀವು ದಾಳಿಗಳು ಮಾಡಿದಾಗ, ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದಾಗ ನಾನು ಬೀದಿಗೆ ಇಳಿಯಲಿಲ್ಲ ಆದರೆ ನೀವು ಗಡಿ ದಾಟಿದ್ದೀರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 I am ready to give my life but not compromise : Mamata Banerjee

ಅವರು (ಕೇಂದ್ರ ಸರ್ಕಾರ) ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ಹುದ್ದೆಗೆ ಅವಮಾನ ಮಾಡಲು ಯತ್ನಿಸಿದೆ, ಇದು ನನಗೆ ಬೇಸರ ತರಿಸಿದೆ ಹಾಗಾಗಿ ನಾನು ಪ್ರತಿಭಟನೆಗೆ ಇಳಿದಿದ್ದೇನೆ ಎಂದು ದೀದಿ ಹೇಳಿದ್ದಾರೆ.

ಧರಣಿ ಕೂತ ಮಮತಾ ದೀದಿ, ಹೆಗಲಾಗುತ್ತೇನೆಂದ ರಾಹುಲ್ ಗಾಂಧಿಧರಣಿ ಕೂತ ಮಮತಾ ದೀದಿ, ಹೆಗಲಾಗುತ್ತೇನೆಂದ ರಾಹುಲ್ ಗಾಂಧಿ

ಪ್ರಾಣ ಹೋದರೂ ಸರಿ ನಾನು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಎಂದಿರುವ ದೀದಿ, ದೇಶವನ್ನು ಉಳಿಸುವ ವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ದೀದಿ-ಸಿಬಿಐ ವಿವಾದ LIVE: ಹಠ ಬಿಡದ ಮಮತಾ, ಕೇಂದ್ರಕ್ಕೇ ಸವಾಲು ದೀದಿ-ಸಿಬಿಐ ವಿವಾದ LIVE: ಹಠ ಬಿಡದ ಮಮತಾ, ಕೇಂದ್ರಕ್ಕೇ ಸವಾಲು

ಸಿಬಿಐ-ಕೊಲ್ಕತ್ತ ಪೊಲೀಸರ ಜಟಾಪಟಿಯು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ನಾಳೆಗೆ ವಿಚಾರಣೆ ಮುಂದೂಡಲಾಗಿದೆ.

English summary
I am ready to give my life but not compromise. I did not take to the streets when you touched TMC leaders. But I am angry when they tried to insult the chair of the Kolkata Police Commissioner, he is leading the organisation said West Bengal CM Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X