• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ನಾಗರಹಾವು... ಬಿಜೆಪಿ ಸೇರುತ್ತಿದ್ದಂತೆ ಮಿಥುನ್ ಚಕ್ರವರ್ತಿ ಹೊಸ ಡೈಲಾಗ್

|

ಕೋಲ್ಕತ್ತಾ, ಮಾರ್ಚ್ 6: ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದು ಖ್ಯಾತ ನಟ ಮಿಥುನ್ ಚಕ್ರವರ್ತಿ ಭಾನುವಾರ ಅಧೀಕೃತವಾಗಿ ಬಿಜೆಪಿ ಸೇರಿದ್ದಾರೆ. ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ ಮುನ್ನ ಬಿಜೆಪಿ ಸೇರಿಕೊಂಡಿದ್ದಾರೆ.

ಇದೇ ಸಂದರ್ಭ, ಬಂಗಾಳದ ನೆಚ್ಚಿನ ನಟ ಮಿಥುನ್ ಚಕ್ರವರ್ತಿ ಅಲ್ಲಿ ನೆರೆದಿದ್ದ ಜನಸಮೂಹದೊಂದಿಗೆ ಸಂವಾದ ನಡೆಸಿದ್ದಾರೆ. ತಮ್ಮ ಡೈಲಾಗ್‌ಗಳಿಂದ ಜನರನ್ನು ಹುರಿದುಂಬಿಸಿದ್ದಾರೆ. "ನಾನು ಬಂಗಾಳಿ ಎನಿಸಿಕೊಂಡಿರುವುದಕ್ಕೆ ಹೆಮ್ಮೆ ಇದೆ. ಇಲ್ಲಿ ಹುಟ್ಟಿ ಬೆಳೆದಿರುವ ಪ್ರತಿಯೊಬ್ಬರಿಗೂ ಈ ನೆಲದ ಮೇಲೆ ಹಕ್ಕಿದೆ. ನನ್ನ ಡೈಲಾಗ್‌ಗಳೆಂದರೆ ನಿಮಗೆಲ್ಲಾ ಇಷ್ಟವೆಂದು ತಿಳಿದಿದೆ" ಎಂದು ಹೇಳುತ್ತಾ ಹಲವು ಡೈಲಾಗ್‌ಗಳನ್ನು ಜನರ ಮುಂದಿಟ್ಟರು. ಮುಂದೆ ಓದಿ...

ಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ

"ನಾನು ನಾಗರಹಾವು..."

"ಇದು ನನ್ನ ಹೊಸ ಡೈಲಾಗ್. ನಾನು ಸಾಮಾನ್ಯ ಹಾವಲ್ಲ. ಶುದ್ಧ ನಾಗರ ಹಾವು. ಒಂದೇ ಒಂದು ಕಡಿತ ಸಾಕು, ನೀವು ಫೋಟೊ ಸೇರುತ್ತೀರ" ಎಂದು ಡೈಲಾಗ್ ಹೊಡೆಯುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆಯ ಮಳೆಯನ್ನೇ ಸುರಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಸೇರಿದ್ದರು.

 ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ನಟ

ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ನಟ

ನನ್ನ ಕನಸು ಇಂದು ನನಸಾಗಿದೆ. ಪ್ರಧಾನಿ ಮೋದಿಯವರೊಂದಿಗೆ ನಾನು ವೇದಿಕೆ ಹಂಚಿಕೊಳ್ಳುತ್ತಿದ್ದು, ನನ್ನ ಕನಸು ನೆರವೇರಿದೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಿಥುನ್ ಚಕ್ರವರ್ತಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದರು. ಸುದ್ದಿ ವಾಹಿನಿ ಒಂದರ ಸ್ಟಾರ್ ಪ್ರಚಾರಕರಾದ ಮಿಥುನ್ ಚಕ್ರವರ್ತಿ ಅಂದಿನ ಸಮಯದಲ್ಲೇ 1.2 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎಂಬ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಹ ಪ್ರಶ್ನೆ ಮಾಡಿದ್ದರು. ಈ ಹಣವನ್ನು ತನಿಖಾ ಸಂಸ್ಥೆಗೆ ಹಿಂತಿರುಗಿಸಿದ್ದ ಮಿಥುನ್ ಚಕ್ರವರ್ತಿ ಅವರು ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದರು.

 ಬಿಜೆಪಿಗೆ ಬಲ ಕೊಡುವುದೇ ಮಿಥುನ್ ಚಕ್ರವರ್ತಿ ಸೇರ್ಪಡೆ?

ಬಿಜೆಪಿಗೆ ಬಲ ಕೊಡುವುದೇ ಮಿಥುನ್ ಚಕ್ರವರ್ತಿ ಸೇರ್ಪಡೆ?

70 ವರ್ಷದ ನಟ ಮಿಥುನ್ ಚಕ್ರವರ್ತಿಗೆ ಬಂಗಾಳದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ಮಿಥುನ್ ಚಕ್ರವರ್ತಿ ಬಿಜೆಪಿ ಸೇರಿರುವುದು ಬಲ ಎಂದೇ ನಿರೀಕ್ಷಿಸಲಾಗಿದೆ. ಫೆಬ್ರವರಿ 16ರಂದು ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್ ಮಿಥುನ್ ಚಕ್ರವರ್ತಿ ಅವರ ನಿವಾಸದಲ್ಲಿ ಭೇಟಿ ಮಾಡಿದಂದಿನಿಂದ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಬಿಜೆಪಿಯ ಪಶ್ಚಿಮ ಬಂಗಾಳ ರಾಜ್ಯ ಅಧ್ಯಕ್ಷ ಕೈಲಾಶ್ ವಿಜಯ್ ವರ್ಗಿಯಾ ಅವರು ಬೆಳ್ಗಚಿಯಾ ಪ್ರದೇಶದಲ್ಲಿನ ಮಿಥುನ್ ಚಕ್ರವರ್ತಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿ

 ಮಾರ್ಚ್ 27ರಿಂದ ಪಶ್ಚಿಮ ಬಂಗಾಳ ಚುನಾವಣೆ

ಮಾರ್ಚ್ 27ರಿಂದ ಪಶ್ಚಿಮ ಬಂಗಾಳ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
ನಾಲ್ಕನೇ ಹಂತ: ಏಪ್ರಿಲ್ 10
ಐದನೇ ಹಂತ: ಏಪ್ರಿಲ್ 17
ಆರನೇ ಹಂತ: ಏಪ್ರಿಲ್ 22
ಏಳನೇ ಹಂತ: ಏಪ್ರಿಲ್ 26
ಎಂಟನೇ ಹಂತ: ಏಪ್ರಿಲ್ 29

English summary
Actor Mithun Chakraborty joined bjp on sunday, and coined a new slogan "I'm a cobra, one bite is enough" in rally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X