• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಮತಾ ದೀದಿಗೆ ಮೋದಿಯ ಕುರ್ತಾ ಅಳತೆ ಹೇಗೆ ಗೊತ್ತು: ರಾಜ್‌ ಬಬ್ಬರ್‌

|

ಕೊಲ್ಕತ್ತ, ಏಪ್ರಿಲ್ 27: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೋದಿ ಅವರಿಗೆ ವರ್ಷಕ್ಕೆ ಎರಡು ಕುರ್ತಾ ಕಳಿಸುತ್ತಾರೆ ಎಂಬುದು ದೇಶದಾದ್ಯಂತ ಸುದ್ದಿಯಾಗಿತ್ತು, ಕೆಲವರು ಈ ಬಗ್ಗೆ ಮೆಚ್ಚುಗೆಯ ಮಾತನ್ನೂ ಆಡಿದ್ದರು, ಆದರೆ ಇದರ ಬಗ್ಗೆ ಅನುಮಾನವನ್ನು ಕಾಂಗ್ರೆಸ್‌ನ ವಕ್ತಾರರೊಬ್ಬರು ಪ್ರಕಟಿಸಿದ್ದಾರೆ.

ಮೋದಿ ಅವರಿಗೆ ಮಮತಾ ದೀದಿ ಕುರ್ತಾ ಕಳಿಸಿದ್ದು ನಿಜವೇ ಆಗಿದ್ದರೆ, ಮೋದಿ ಅವರ ಕುರ್ತಾದ ಅಳತೆ ದೀದಿಗೆ ಹೇಗೆ ಗೊತ್ತು ಎಂದು ಕಾಂಗ್ರೆಸ್‌ನ ರಾಜ್ ಬಬ್ಬರ್ ಅವರು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಕೊಲ್ಕತ್ತದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಸಿಹಿ ಮತ್ತು ಕುರ್ತಾ ಜಗತ್‌ ಪ್ರಸಿದ್ಧಿ, ಆದರೆ ದೀದಿ ಅವರು ನಮಗೆ ಇವೆರಡನ್ನು ಎಂದೂ ಕಳುಹಿಸಿಲ್ಲ, ಆದರೆ ಮೋದಿ ಗೆ ಮಾತ್ರ ಪ್ರತಿ ಬಾರಿ ಕಳುಹಿಸುತ್ತಾರಂತಲ್ಲ ಏಕೆ? ಎಂದು ರಾಜ್ ಬಬ್ಬರ್ ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?

ನಮಗೆ ಯಾರಿಗೂ (ಕೋಲ್ಕತ್ತದ ವಿಪಕ್ಷ ಸದಸ್ಯರಿಗೆ) ಉಡುಗೊರೆಗಳನ್ನು ಕಳುಹಿಸದೆ, ಕೇವಲ ಮೋದಿಗೆ ಮಾತ್ರವೇ, ಅದರಲ್ಲಿಯೂ ಕುರ್ತಾವನ್ನು ತಾವೇ ಆಯ್ಕೆ ಮಾಡಿ ಕಳುಹಿಸುತ್ತಿದ್ದಾರೆಂದರೆ ಅವರಿಗೆ ಮೋದಿ ಅವರ ಕುರ್ತಾದ ಅಳತೆ ಗೊತ್ತಿರಬೇಕು, ಇಷ್ಟು ದಿನ ಜನ ಮೋದಿ ಅವರ ಎದೆಯ ಅಳತೆಯ ಬಗ್ಗೆ ಮಾತನಾಡುತ್ತಿದ್ದರು ಈಗ ಕುರ್ತಾದ ಅಳತೆಯ ಬಗ್ಗೆಯೂ ಮಾತನಾಡಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಹಿಂಸೆಗೆ ಪ್ರಚೋದನೆ ನೀಡಲಾಗುತ್ತಿದೆ: ರಾಜ್ ಬಬ್ಬರ್‌

ಹಿಂಸೆಗೆ ಪ್ರಚೋದನೆ ನೀಡಲಾಗುತ್ತಿದೆ: ರಾಜ್ ಬಬ್ಬರ್‌

ನಟರೂ ಆಗಿರುವ ರಾಜ್‌ ಬಬ್ಬರ್‌ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲ, ಪಾರದರ್ಶಕ ಚುನಾವಣೆ ನಡೆದರೆ ಸೋಲುವ ಭಯದಿಂದ ಅವರು ಗಲಾಟೆ ಎಬ್ಬಿಸಿದ್ದಾರೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.

'ರಸಗುಲ್ಲಾ ನೀಡ್ತೀವಿ, ಮತಗಳನ್ನಲ್ಲ' ಮೋದಿ ಮಾತಿಗೆ ಮಮತಾ ದೀದಿ ಉತ್ತರ

'ಪ.ಬಂಗಾಳದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ದೀದಿ ಕಾರಣ'

'ಪ.ಬಂಗಾಳದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ದೀದಿ ಕಾರಣ'

ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿರಲು ಸಹ ದೀದಿ ಅವರ ಹಿಂಸಾತ್ಮಕ ನೀತಿಗಳೇ ಕಾರಣ ಎಂದು ಅವರು ಆರೋಪಿಸಿದ ಅವರು, ತಮ್ಮನ್ನು ಸೌಜನ್ಯ ಇಲ್ಲದ ವ್ಯಕ್ತಿ ಎಂದು ಟೀಕಿಸಿದ್ದ ತೃಣಮೂಲ ಕಾಂಗ್ರೆಸ್‌ನ ನಾಯಕ ಪಾರ್ಥ ಚಟರ್ಜಿ ಕುರಿತು, 'ಆತನಿಗೆ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಅನುಭವವಿಲ್ಲ' ಎಂದು ಹರಿಹಾಯ್ದಿದ್ದಾರೆ.

ಮಣ್ಣಿನ ಲಾಡು ಮಾಡಿ ಮೋದಿ ಹಲ್ಲು ಮುರಿಯಲು ಕಲ್ಲು ಇಡುತ್ತೇನೆಂದ ದೀದಿ ಮಮತಾ

ಸೀತಾರಾಂ ಯೆಚೂರಿ ಟೀಕೆ

ಸೀತಾರಾಂ ಯೆಚೂರಿ ಟೀಕೆ

ಸಿಪಿಎಂನ ಮುಖ್ಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಹ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದು, ಇಲ್ಲಿ (ಪಶ್ಚಿಮ ಬಂಗಾಳ)ದಲ್ಲಿ ಬಿಜೆಪಿ ಜೊತೆಗೆ ಕುಸ್ತಿ ಮಾಡುವ ಇವರು, ದೆಹಲಿಯಲ್ಲಿ ದೋಸ್ತಿ ಪ್ರದರ್ಶಿಸುತ್ತಾರೆ ಎಂದು ಹೇಳಿದ್ದಾರೆ.

ಅಕ್ಷಯ್‌ ಕುಮಾರ್‌ಗೆ ನೀಡಿದ್ದ ಸಂದರ್ಶನ ವೈರಲ್

ಅಕ್ಷಯ್‌ ಕುಮಾರ್‌ಗೆ ನೀಡಿದ್ದ ಸಂದರ್ಶನ ವೈರಲ್

ಮೊನ್ನೆಯಷ್ಟೆ ನರೇಂದ್ರ ಮೋದಿ ಅವರು ಬಾಲಿವುಡ್ ಚಿತ್ರನಟ ಅಕ್ಷಯ್‌ ಕುಮಾರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ, ವಿರೋಧ ಪಕ್ಷದಲ್ಲಿಯೂ ನನಗೆ ಬಹಳ ಉತ್ತಮ ಗೆಳೆಯರಿದ್ದಾರೆ, ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ನನಗೆ ಎರಡು ಕುರ್ತಾ ಕಳುಹಿಸುತ್ತಾರೆ, ಸಿಹಿ ಕೊಡಿಸುತ್ತಾರೆ ಎಂದು ಹೇಳಿದ್ದರು, ಇದು ದೇಶದಾದ್ಯಂತ ಸುದ್ದಿಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Bengal Congerss leader asks 'How Mamata Banarjee knows Narendra Modi's 'kurtha' size. He was talking about Modi's interview with Akshay Kumar, in that Modi says Didi sends two Kurtha's every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more