ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರವ್‌, ಬಂಗಾಳ ಸರ್ಕಾರಕ್ಕೆ ದಂಡ ವಿಧಿಸಿದ ಕೋಲ್ಕತ್ತಾ ಹೈಕೋರ್ಟ್

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್‌, 28: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ನಿಗಮ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಡಬ್ಲ್ಯೂಬಿಎಚ್‌ಐಡಿಸಿಒ) ವಿರುದ್ಧ ದಂಡ ವಿಧಿಸಿದೆ.

ಕೋಲ್ಕತ್ತಾದ ಸಮೀಪದ ನ್ಯೂ ಟೌನ್‌ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಲು ಅನಿಯಮಿತ ನಿವೇಶನ ಹಂಚಿಕೆ ಆರೋಪದಲ್ಲಿ ನ್ಯಾಯಾಲಯ ಈ ದಂಡ ವಿಧಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಹಾಗೂ ನ್ಯಾಯಮೂರ್ತಿ ಅರಿಜಿತ್‌ ಬ್ಯಾನರ್ಜಿ ಅವರನ್ನು ಒಳಗೊಂಡ ಪೀಠವು ಈ ಆದೇಶವನ್ನು ನೀಡಿದೆ.

ಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿ

ಹೊಸ ಪಟ್ಟಣದ ಶಾಲೆಯನ್ನು ಸ್ಥಾಪಿಸಲು ಗಂಗೂಲಿ ಹಾಗೂ ಸೊಸೈಟಿಗೆ ಎರಡು ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ. ಇದರ ವಿಚಾರಣೆ ಮೇಲೆ ಪೀಠವು ಆದೇಶವನ್ನು ನೀಡಿದೆ. ಭೂಮಿಯನ್ನು 2020 ರಲ್ಲಿ ಆಗಸ್ಟ್‌ನಲ್ಲಿ ಡಬ್ಲ್ಯೂಬಿಎಚ್‌ಐಡಿಸಿಒ ಗೆ ಒಪ್ಪಿಸಲಾಗಿದೆ.

High Court fines Sourav Ganguly And West Bengal govt over land allotment

ಸೌರವ್ ಗಂಗೂಲಿಗೆ ಹತ್ತು ಸಾವಿರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಕ್ಕೆ 50,000 ರೂಪಾಯಿ ದಂಡವನ್ನು ಪೀಠವು ವಿಧಿಸಿದೆ. ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ, "ನಿಲುವನ್ನು ಈಗಾಗಲೇ ಸಲ್ಲಿಸಿರುವ ಹಿನ್ನೆಲೆಯಿಂದಾಗಿ ನಾವು ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕಾದ ಸನ್ನಿವೇಶ ಇಲ್ಲಿ ಬರುವುದಿಲ್ಲ. ಆದರೆ ಸುಪ್ರೀಂ ಕೋರ್ಟ್ ಹಾಕಿರುವ ಕಾನೂನಿಗೆ ವಿರುದ್ದವಾಗಿ ನಿರಂಕುಶವಾಗಿ ಅಧಿಕಾರವನ್ನು ನಡೆಸುವ ಮೂಲಕ ದಾವೆಯನ್ನು ಹೂಡಿದ ರಾಜ್ಯದ ನಡವಳಿಕೆಯ ಹಿನ್ನೆಲೆ ದಂಡ ವಿಧಿಸಬೇಕಾಗುತ್ತದೆ," ಎಂದು ತಿಳಿಸಿದೆ.

"ನಾವು ರಾಜ್ಯ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ನಿಗಮ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಡಬ್ಲ್ಯೂಬಿಎಚ್‌ಐಡಿಸಿಒ) ಮೇಲೆ ತಲಾ ಐವತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸುತ್ತೇವೆ," ಎಂದು ಆದೇಶದಲ್ಲಿ ಹೈಕೋರ್ಟ್ ಹೇಳಿದೆ.

ಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆ

ಇನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಗಂಗೂಲಿ ಅವರ ಶಿಕ್ಷಣ ಮತ್ತು ಕಲ್ಯಾಣ ಸೊಸೈಟಿ ಮೇಲೆ ಹತ್ತು ಸಾವಿರ ಟೋಕನ್‌ ವೆಚ್ಚವನ್ನು ವಿಧಿಸಿದೆ. ಇನ್ನು "ಎಲ್ಲಾ ವಿಚಾರಗಳಲ್ಲಿ ಮಾರ್ಗದರ್ಶನ ನೀಡಲು ಒಂದು ನಿರ್ದಿಷ್ಟವಾದ ನೀತಿಯನ್ನು ಹೊಂದುವುದು ಅಗತ್ಯವಾಗಿದೆ. ಈ ಹಿನ್ನೆಲೆ ಯಾವುದೇ ನಿರಂಕುಶ ಅಧಿಕಾರಕ್ಕೆ ಅವಕಾಶ ನೀಡಲಾಗದು," ಎಂದಿದೆ.

"ಕ್ರೀಡಾಪಟುಗಳಿಗೆ ಎಂದಿಗೂ ದೇಶವು ಬೆಂಬಲವನ್ನು ನೀಡುತ್ತದೆ. ಅದು ಕೂಡಾ ಮುಖ್ಯವಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವವರ ಪರವಾಗಿ ದೇಶವು ಎಂದಿಗೂ ನಿಲ್ಲುತ್ತದೆ. ಕ್ರಿಕೆಟ್‌ ಕ್ಷೇತ್ರದಲ್ಲಿ ಸೌರವ್‌ ಗಂಗೂಲಿ ದೇಶಕ್ಕೆ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ ಎಂಬುವುದು ನಿಜವಾದ ವಿಚಾರ. ಆದರೆ ಕಾನೂನಿಗೆ ವಿಚಾರಕ್ಕೆ ಬರುವಾಗ, ನಮ್ಮ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಯಾರೂ ಕಾನೂನಿಗಿಂತ ಮೇಲೆ ಅಲ್ಲ," ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ. "ವಾಣಿಜ್ಯ ಉದ್ಯಮಗಳುಗೆ ನಿವೇಶನಗಳ ಹಂಚಿಕೆಯ ಪ್ರಶ್ನೆ ಬಂದಾಗ ರಾಜ್ಯದಲ್ಲಿ ಪ್ರಯೋಜನವನ್ನು ಪಡೆಯಲು ಆಗದು," ಎಂದೂ ಸ್ಪಷ್ಟಪಡಿಸಿದೆ.

ನ್ಯೂ ಟೌನ್ ನಲ್ಲಿ ನಿವೇಶನ ಹಂಚಿಕೆಯನ್ನು ಪ್ರಶ್ನಿಸಿ 2016 ರಲ್ಲಿ ಪಿಐಎಲ್ ಅನ್ನು ಸಲ್ಲಿಸಲಾಗಿದೆ. ನಿವೇಶನಗಳ ಹಂಚಿಕೆಗಾಗಿ ನಿಯಮಗಳು, ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಇನ್ನು ಈ ಹಂಚಿಕೆಯನ್ನು ಗಂಗೂಲಿಗೆ ಮತ್ತು ಸೊಸೈಟಿಗೆ ನೀಡಲಾಗಿದೆ ಎಂದು ಸೆಪ್ಟೆಂಬರ್ 27, 2013 ರ ಪತ್ರದಲ್ಲಿದೆ. ಇನ್ನು ಈ ಪ್ರಕರಣದಲ್ಲಿ ಗಂಗೂಲಿ ಸರ್ಕಾರದಿಂದ ನೀಡಲಾಗಿದ್ದ ಭೂಮಿಯನ್ನು ವಾಪಸ್‌ ನೀಡಿದ್ದಾರೆ. ಆದರೆ ನ್ಯಾಯಾಲಯ ಭೂಮಿ ಆದೇಶವನ್ನು ರದ್ದು ಮಾಡಿ, ಸರ್ಕಾರಕ್ಕೆ ಹಾಗೂ ಸೌರವ್ ಗಂಗೂಲಿಗೆ ದಂಡ ವಿಧಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Calcutta High Court fines penalised the Mamata Banerjee-led Bengal government and Board of Control for Cricket in India (BCCI) president Sourav Ganguly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X