ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಕತ್ತದ ಪ್ರತಿಪಕ್ಷಗಳ ಬೃಹತ್ ಸಮಾವೇಶದಲ್ಲಿ ದೇವೇಗೌಡ ಭಾಗಿ

|
Google Oneindia Kannada News

ಕೊಲ್ಕತ್ತ, ಜನವರಿ 18: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿರುವ ಕೇಂದ್ರ ಪ್ರತಿಪಕ್ಷಗಳ ಸಮಾವೇಶದಲ್ಲಿ ಭಾಗವಹಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಇಂದು ಕೋಲ್ಕತ್ತಕ್ಕೆ ತೆರಳಿದ್ದಾರೆ.

ಜ. 19ರ ವಿರೋಧ ಪಕ್ಷಗಳ ಮಹಾ ಸಭೆ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾಜ. 19ರ ವಿರೋಧ ಪಕ್ಷಗಳ ಮಹಾ ಸಭೆ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾ

ಕೊಲ್ಕತ್ತದಲ್ಲಿ ನಾಳೆ (ಜನವರಿ 19) ರಂದು ವಿರೋಧ ಪಕ್ಷಗಳ ಮಹಾಸಭೆ ನಡೆಯಲಿದ್ದು, ಕೇಂದ್ರದ ಬಿಜೆಪಿಯ ವಿರೋಧ ಪಕ್ಷಗಳು ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಮಹಾ ಸಭೆಯಲ್ಲಿ ಭಾಗವಹಿಸಲಿವೆ.

ಮೋದಿ ಫೋಟೋ ಬಳಸುವ ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿದ ಮಮತಾ ಮೋದಿ ಫೋಟೋ ಬಳಸುವ ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿದ ಮಮತಾ

ಈಗಾಗಲೇ ಹಲವು ಪಕ್ಷಗಳ ಮುಖಂಡರು ಕೊಲ್ಕತ್ತಕ್ಕೆ ತೆರಳಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಹ ಕೊಲ್ಕತ್ತವನ್ನು ತಲುಪಿದ್ದಾರೆ. ದೇವೇಗೌಡ ಅವರು ಪ್ರಾದೇಶಿಕ ಪಕ್ಷಗಳ ಒಕ್ಕೂಟದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

HD Deve Gowda participating in TMCs opposition rally

ದೇವೇಗೌಡ ಮಾತ್ರವಲ್ಲದೆ ಸಿಎಂ ಕುಮಾರಸ್ವಾಮಿ ಅವರು ಸಹ ಈ ಬೃಹತ್ ಸಭೆಯಲ್ಲಿ ಭಾಗವಹಿಸುತ್ತಿದ್ದು, ಅವರು ನಾಳೆ ಕೊಲ್ಕತ್ತಗೆ ಪ್ರಯಾಣ ಬೆಳೆಸಿ ಸಮಾವೇಶದಲ್ಲಿ ಹಾಜರಿರಲಿದ್ದಾರೆ.

ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

ನಾಳಿನ ಮಹಾ ಸಭೆಯು ಬಿಜೆಪಿಗೆ ಮರಣ ಮೃದಂಗ ಎಂದು ಈಗಾಗಲೇ ಮಮತಾ ಬ್ಯಾನರ್ಜಿ ಅವರು ಘೋಷಿಸಿದ್ದು, ನಾಳಿನ ಸಮಾವೇಶದ ಮೇಲೆ ದೇಶದ ಕಣ್ಣು ನೆಟ್ಟಿದೆ.

English summary
HD Deve Gowda and NCP chief Sharad Pawar reach Kolkata for TMC's opposition rally tomorrow. CM Kumaraswamy also participating in the rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X