ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನಕ್ಕೂ ಮುನ್ನವೇ ಹಿಂಸಾಚಾರ: ಪ.ಬಂಗಾಳದಲ್ಲಿ ಓರ್ವ ಯೋಧನ ಹತ್ಯೆ

|
Google Oneindia Kannada News

ಬಗ್ನನ್, ಮೇ 02: ಪಶ್ಚಿಮ ಬಂಗಾಳದ ಹೊವ್ರಾಹ್ ಜಿಲ್ಲೆಯ ಬಗ್ನಾನ್ ಎಂಬಲ್ಲಿ ಕೇಂದ್ರ ಭದ್ರತಾ ಪಡೆಯ ಶಿಬಿರದ ಬಳಿ ನಡೆದ ಹಿಂಸಾಚಾರದಲ್ಲಿ ಓರ್ವ ಯೋಧ ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ನೀವೇನು ಕುದುರೆ ವ್ಯಾಪಾರ ಮಾಡ್ತಿದ್ದೀರಾ?: ಮೋದಿಗೆ ಟಿಎಂಸಿ ತಿರುಗೇಟು ನೀವೇನು ಕುದುರೆ ವ್ಯಾಪಾರ ಮಾಡ್ತಿದ್ದೀರಾ?: ಮೋದಿಗೆ ಟಿಎಂಸಿ ತಿರುಗೇಟು

ಮೇ 6 ರಂದು ನಡೆಯಲಿರುವ ಐದನೇ ಹಂತದ ಲೋಕಸಭಾ ಚುನಾವಣೆಯ ಸಲುವಾಗಿ ಭದ್ರತಾ ಪಡೆಯನ್ನು ಬಗ್ನನ್ ನಲ್ಲಿ ನಿಯೋಜಿಸಲಾಗಿತ್ತು. ಆದರೆ ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಾಗಲೇ ಹಿಂಸಾಚಾರ ತಲೆದೂರಿದ್ದು, ಓರ್ವ ಸೈನಿಕನನ್ನು ಹತ್ಯೆಗೈಯ್ಯಲಾಗಿದೆ. ಅಸ್ಸಾಂ ರೈಫಲ್ಸ್ ನ ಏಳನೇ ಬೆಟಾಲಿಯನ್ನಿನ ಜವಾನ ಭೋಲನಾಥ್ ದಾಸ್ ಎಂಬುವವರೇ ಮೃತರು ಎಂಬುದು ಸಾಬೀತಾಗಿದೆ.

ಮೋದಿ, ಹಿಟ್ಲರ್‌ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿಮೋದಿ, ಹಿಟ್ಲರ್‌ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿ

ಯೋಧನನ್ನು ಹತ್ಯೆಗೈದ ಆರೋಪಿಯನ್ನು ಲಕ್ಷ್ಮಿಕಾಂತ ಬುರ್ಮಾನ್ ಎಂದು ಗುರುತಿಸಲಾಗಿದ್ದು, 13 ಬಾರಿ ಆತ ಗುಂಡು ಹಾರಿಸಿದ್ದಾನೆ ಎಂಬುದು ತಿಳಿದುಬಂದಿದೆ.

Gunfight in central force base in West Bengal: 1 soldier killed

ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲೂ ಚುನಾವಣಾ ಆಯೋಗ ಈಗಾಗಲೇ ಸೂಕ್ಷ್ಮ ಪ್ರದೇಶಗಳು ಎಂದು ಘೋಷಿಸಿದ್ದು, ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಸಾಕಷ್ಟು ಭದ್ರತೆಯ ನಿಯೋಜನೆಯ ನಡುವೆಯೂ ಅಹಿತಕರ ಘಟನೆಗಳು ನಡೆಯುತ್ತಲೇ ಇದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Gunfight in central force base in Bagnan in West Bengal's Howrah district kills one soldier and injures two.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X