ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೋ ಬ್ಯಾಕ್ ಗವರ್ನರ್' ಚಳುವಳಿ ನಡೆಸಿದ್ಯಾಕೆ ಆ ವಿದ್ಯಾರ್ಥಿಗಳು?

|
Google Oneindia Kannada News

ಕೋಲ್ಕತ್ತಾ, ಜನವರಿ.28: ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರನ್ನೇ ಒಳಗೆ ಬಿಟ್ಟುಕೊಳ್ಳದಂತಾ ಘಟನೆಯೊಂದು ನಡೆದಿದೆ. ಗವರ್ನರ್ ವಿರುದ್ಧ ವಿದ್ಯಾರ್ಥಿಗಳು ಗೋ ಬ್ಯಾಕ್ ಚಳುವಳಿ ನಡೆಸಿದ್ದು, ಸಾಕಷ್ಟು ಸುದ್ದಿಯಾಗಿದೆ.

ಮಂಗಳವಾರ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್ ರನ್ನು ವಿದ್ಯಾರ್ಥಿಗಳು ತಡೆದಿದ್ದಾರೆ.

Governor Go Back Slogans Against Jagdeep Dhankhar In University Of Calcutta

ಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರ

ಕೋಲ್ಕತ್ತಾ ವಿಶ್ವವಿದ್ಯಾಲಯ ಗೇಟ್ ನಲ್ಲಿಯೇ ರಾಜ್ಯಪಾಲರ ಕಾರಿಗೆ ವಿದ್ಯಾರ್ಥಿಗಳು ಅಡ್ಡಗಟ್ಟಿದ್ದಾರೆ. ಅಲ್ಲದೇ, ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ವಿವಿಯಲ್ಲಿ ಕೆಲಕಾಲ ಗೊಂದಲದ ವಾತಾವರಣವು ನಿರ್ಮಾಣವಾಗಿದೆ.

ಇನ್ನು, ಕೋಲ್ಕತ್ತಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಧಿಕ್ಕಾರ ಘೋಷಣೆಗಳಿಂದಾಗಿ ಕಾರ್ಯಕ್ರಮದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

English summary
Students Raised 'Governor Go Back' Slogans Against Jagdeep Dhankhar In University Of Calcutta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X