ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಏರ್ ವಿಮಾನ ಹಾರಾಟ ವೇಳೆ ಗಾಳಿ ಏರು ಪೇರು, ಇಬ್ಬರು ಸಿಬ್ಬಂದಿಗಳಿಗೆ ಗಾಯ

|
Google Oneindia Kannada News

ಕೋಲ್ಕತ್ತ, ಫೆಬ್ರವರಿ 27: ಗೋ ಏರ್​ ವಿಮಾನದಲ್ಲಿ ಏರ್​​ ಟರ್ಬುಲೆನ್ಸ್(ಗಾಳಿಯಲ್ಲಿ ಏರುಪೇರು)​​ ಉಂಟಾಗಿ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.

ಮಂಗಳವಾರ ಗೋ ಏರ್​​ ವಿಮಾನ(G8 761) ಭುವನೇಶ್ವರದಿಂದ ಕೋಲ್ಕತ್ತಾಗೆ ತೆರಳಿತ್ತು. ಈ ವೇಳೆ ಪ್ರಯಾಣದ ಮಧ್ಯೆಯೇ ವಿಮಾನದಲ್ಲಿ ಏರ್ ಟರ್ಬುಲೆನ್ಸ್ ಉಂಟಾಗಿ ವಿಮಾನ ಹಾರಾಟ ಆರಂಭಿಸಿದ ಕೆಲವೇ ಹೊತ್ತಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಪ್ರಯಾಣಿಕರು ಪರದಾಡುವಂತಾಗಿದೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ಭುವನೇಶ್ವರದಿಂದ ಕೋಲ್ಕತ್ತಾದತ್ತ ಹೊರಟಿದ್ದ ಈ ವಿಮಾನದಲ್ಲಿ ದಿಢೀರ್​​​ ಏರ್​​​ ಟರ್ಬುಲೆನ್ಸ್​​​ ಉಂಟಾದ ಕಾರಣ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

GoAir Bhubaneswar-Kolkata flight hit by turbulence, 2 crew members injured

ಇದೀಗ ಯಾವುದೇ ಆತಂಕಕ್ಕೊಳಗಾಗದೇ ಸುರಕ್ಷತೆಯಿಂದ ಕೋಲ್ಕತ್ತಾ ತಲುಪಿದ್ದೇವೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿತವಾಗಿ ನಮ್ಮ ಪೈಲಟ್​​ಗಳು ವಿಮಾನವನ್ನು ದಡ ಸೇರಿಸಿದ್ದಾರೆ ಎಂದು ಕೋಲ್ಕತ್ತಾ ವಿಮಾನ ನಿಲ್ದಾಣ​​ ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಟರ್ಬುಲೆನ್ಸ್ ಎಂದರೇನು? : ಏರ್ ಟರ್ಬುಲೆನ್ಸ್ ಎಂದರೆ ಗಾಳಿ ಹರಿವಿನಲ್ಲಿ ಏರು ಪೇರಾಗುವುದು ಎಂದು ಅರ್ಥ, ಇದು ಪೈಲಟ್‌ಗಳಿಗೆ ಮೊದಲು ತಿಳಿಯುವುದಿಲ್ಲ, ಏಕಾಏಕಿ ಆಗುವ ಬದಲಾವಣೆ ಇದಾಗಿರುತ್ತದೆ.

ಪ್ರೇಮಿಗಳ ದಿನ ಆಚರಣೆಗೆ ಬೆಂಗಳೂರು ಜೋಡಿಗಳು ಜೈಪುರಕ್ಕೆ ಹಾರಿದ್ದಾರೆ! ಪ್ರೇಮಿಗಳ ದಿನ ಆಚರಣೆಗೆ ಬೆಂಗಳೂರು ಜೋಡಿಗಳು ಜೈಪುರಕ್ಕೆ ಹಾರಿದ್ದಾರೆ!

ಮುಂಜಾಗ್ರತೆ ವಹಿಸಲು ಕೂಡ ಸಾಧ್ಯವಿಲ್ಲ, ಏಕಾ ಏಕಿ ಗಾಳಿಯಲ್ಲಿ ಏರು ಪೇರು ಉಂಟಾಗಿ ವಿಮಾನವು ಸ್ವಲ್ಪ ಅಲ್ಲಾಡುತ್ತದೆ ಆಗ ಪ್ರಯಾಣಿರು ಸೀಟ್ ಬೆಲ್ಟ್ ಧರಿಸಿರದೇ ಇದ್ದರೆ ಗಾಯಗಳಾಗುವ ಸಾಧ್ಯತೆ ಇರುತ್ತದೆ.

English summary
Two cabin crew members suffered "minor" injuries when a Kolkata-bound GoAir flight from Bhubaneswar experienced severe air turbulence Tuesday, the airline said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X