ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಪ್ರಕರಣ: ಕೋಲ್ಕತ್ತಾದ ಉದ್ಯಮಿಯ ಮನೆ ಮೇಲೆ ಇಡಿ ದಾಳಿ: 7 ಕೋಟಿ ರೂ. ವಶ

|
Google Oneindia Kannada News

ಮೊಬೈಲ್ ಅಪ್ಲಿಕೇಶನ್ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಇಡಿ ಅಧಿಕಾರಿಗಳ ತಂಡ, ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ನಾಸಿರ್ ಖಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿ 7 ಕೋಟಿ ರೂಪಾಯಿ ನಗದು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಲ್ಕತ್ತಾ ಮೂಲದ ಉದ್ಯಮಿ ನಿಸಾರ್ ಖಾನ್ ಅವರ ಮನೆಯ ಮಂಚದ ಕೆಳಗೆ 500 ಮತ್ತು 2000 ರೂ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ.

ವಶಪಡಿಸಿಕೊಂಡಿರುವ ಹಣದ ನಿಖರವಾದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ನಗದು ಎಣಿಕೆ ಯಂತ್ರಗಳನ್ನು ತರಲಾಗಿದೆ. ಉದ್ಯಮಿಯ ನಿವಾಸದ ಮೇಲೆ ಇಡಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳಿಂದ ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮನಿ ಲಾಂಡರಿಂಗ್‌ನಲ್ಲಿ ಭಾಗಿಯಾಗಿರುವ ಇಡಿ ಶಂಕಿತ ಉದ್ಯಮಿಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಈ ಹುಡುಕಾಟಗಳು ನಡೆಯುತ್ತಿವೆ.

ಖಾನ್ ಅವರ ಮನೆಯಿಂದ ವಶಪಡಿಸಿಕೊಂಡಿರುವ ಹಣವು ಟಿಎಂಸಿಯ ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿರುವ ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದೆ ಎಂಬ ಊಹಾಪೋಹಗಳನ್ನು ಮಾಡಲಾಗುತ್ತಿದೆ. ಹೆಚ್ಚಿನ ಇಡಿ ಅಧಿಕಾರಿಗಳು ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನಿಂದ ಉದ್ಯಮಿಯ ಮನೆಗೆ ತೆರಳಿದ್ದಾರೆ ಮತ್ತು ನಗದು ಎಣಿಕೆ ಯಂತ್ರಗಳನ್ನು ಅವರ ನಿವಾಸಕ್ಕೆ ತರಲಾಗಿದೆ. ಶನಿವಾರ ಬೆಳಗ್ಗೆ ಇಡಿ ಅಧಿಕಾರಿಗಳು ಕೋಲ್ಕತ್ತಾದ ಮೂರು ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

Fraud case: ED raid on Kolkata businessmans house: Rs 7 crore seized

ಇಡಿ ಮೂಲಗಳ ಪ್ರಕಾರ, ಪಾರ್ಕ್ ಸ್ಟ್ರೀಟ್ ಪ್ರದೇಶದ ಸಮೀಪದ ಮೆಕ್ಲಿಯೋಡ್ ಸ್ಟ್ರೀಟ್‌ನಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂದರಿನ ಪಕ್ಕದ ಪ್ರದೇಶ ಮತ್ತು ಗಾರ್ಡನ್ ರೀಚ್ ಪ್ರದೇಶದಲ್ಲಿ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ. ವಶಪಡಿಸಿಕೊಂಡ ಹಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಉದ್ಯಮಿಯ ಕುಟುಂಬದ ವಿಚಾರಣೆ ಆರಂಭಿಸಿದ್ದಾರೆ. ಹೆಚ್ಚುವರಿ ಪಡೆಗಳೊಂದಿಗೆ ಮನೆಯ ಸುತ್ತಲೂ ಸಿಆರ್‌ಪಿಎಫ್ ತಂಡವನ್ನು ನಿಯೋಜಿಸಲಾಗಿದೆ.

Fraud case: ED raid on Kolkata businessmans house: Rs 7 crore seized

ಇಡಿ ಈಗಾಗಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಇಡಿ ಅಧಿಕಾರಿಯೊಬ್ಬರ ಪ್ರಕಾರ, ಪತ್ತೆಯಾದ ದೊಡ್ಡ ಮೊತ್ತದ ನಗದು ಮೂಲದ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು ನಿಸಾರ್ ಖಾನ್ ಹಾಗೂ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಡಿ ದಾಳಿಯನ್ನು ವೀಕ್ಷಿಸಲು ಸ್ಥಳೀಯ ನಿವಾಸಿಗಳು ಖಾನ್ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಖಾನ್ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಇನ್ನೆಲ್ಲಿ ಹೆಚ್ಚಿನ ಹಣ ಬಚ್ಚಿಟ್ಟಿದ್ದಾರೆ ಎಂದು ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸಿದ್ದಾರೆ.

English summary
A team of ED officials, along with bank officials, raided the residence of businessman Nasir Khan in Garden Reach area of ​​Kolkata on Saturday and seized Rs 7 crore in cash and property documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X