• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುರ್ಗಾದೇವಿ ವಿಸರ್ಜನೆ: ಜಲ್‌ಪೈಗುರಿಯಲ್ಲಿ ದಿಢೀರ್ ಪ್ರವಾಹ, 7ಮಂದಿ ಸಾವು, ಹಲವು ಜನ ನಾಪತ್ತೆ

|
Google Oneindia Kannada News

ಕೊಲ್ಕತ್ತಾ, ಅಕ್ಟೋಬರ್ 06: ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ದುರ್ಗಾ ದೇವಿ ವಿಸರ್ಜನೆ ವೇಳೆ ಏಕಾಎಕಿ ಸೃಷ್ಟಿಯಾದ ಪ್ರವಾಹದಲ್ಲಿ ಸುಮಾರು ಏಳಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಜಲ್‌ಪೈಗುರಿಯಲ್ಲಿ ನಿಯೋರಾ ನದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ದುರ್ಗಾ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಕಳೆದೆರಡು ದಿನದಿಂದ ಈ ಭಾಗದಲ್ಲಿ ಅಧಿಕ ಮಳೆ ಬೀಳುತ್ತಿದೆ. ಈಹಿನ್ನೆಲೆಯಲ್ಲಿ ವಿಸರ್ಜನೆ ವೇಳೆ ನದಿಯಲ್ಲಿ ದಿಢೀರ್‌ನೆ ಉಂಟಾದ ಪ್ರವಾಹದಲ್ಲಿ ಅನೇಕ ಭಕ್ತರು ಕೊಚ್ಚಿಹೋಗಿದ್ದಾರೆ.

ಕೋಲ್ಕತ್ತಾದ ದುರ್ಗಾ ಪೂಜೆಯಲ್ಲಿ ಮಹಿಷಾಸುರನಂತೆ ಮಹಾತ್ಮಾ ಗಾಂಧಿಯ ಚಿತ್ರಣ; ವ್ಯಾಪಕ ಖಂಡನೆ ಕೋಲ್ಕತ್ತಾದ ದುರ್ಗಾ ಪೂಜೆಯಲ್ಲಿ ಮಹಿಷಾಸುರನಂತೆ ಮಹಾತ್ಮಾ ಗಾಂಧಿಯ ಚಿತ್ರಣ; ವ್ಯಾಪಕ ಖಂಡನೆ

ಘಟನೆಯಲ್ಲಿ ಪ್ರವಾಹಕ್ಕೆ ಮಹಿಳೆಯುರ, ಮಕ್ಕಳು, ನಾಗರಿಕರು ಸೇರಿಂತೆ ಭಕ್ತರು ಕೊಚ್ಚಿ ಹೋಗಿದ್ದಾರೆ. ಅವರ ಪೈಕಿ ಸುಮಾರು 10ಕ್ಕೂ ಅಧಿಕ ಭಕ್ತರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. 7ಮಂದಿ ಮೃತಪಟ್ಟಿದ್ದಾರೆ. ಇನ್ನು ಕಾರ್ಯಾಚರಣೆ ನಡೆದಿದ್ದು, ಏಕಾಎಕಿ ನುಗ್ಗಿ ಬಂದ ನೀರಲ್ಲಿ ಅನೇಕ ಜನರು ಕೊಚ್ಚಿ ಹೋಗಿದ್ದಾರೆ. ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಜಲ್‌ಪೈಗುರಿ ಪೊಲೀಸ್ ವರಿಷ್ಠಾಧಿಕಾರಿ ದೇಬರ್ಶಿ ದತ್ತಾ ಅವರು ಮಾಹಿತಿ ನೀಡಿದ್ದಾರೆ. ಪ್ರವಾಹದಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ. ಏಳು ಸಾವು ಸಂಭವಿಸಿದ್ದು, ಗಾಯಾಳು 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿಯ ಕೆಳಭಾಗದಲ್ಲಿ ಶೋಧ ಕಾರ್ಯ ಆರಂಭವಾಗಿದೆ. ಭೂತಾನ್ ಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಈ ಅವಘಡ ಸಂಭವಿಸಿದೆ. ನದಿಯಲ್ಲಿ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿತು. ಜಲ್‌ಪೈಗುರಿಯ ಮಲ್ಬಜಾರ್‌ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ವಿವರಿಸಿದರು.

100ಕ್ಕೂ ಹೆಚ್ಚು ಮಂದಿ ನಾಪತ್ತೆ!
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹಠಾತ್ ಪ್ರವಾಹದ ವೀಡಿಯೊ ಶೇರ್‌ ಮಾಡಿದ್ದಾರೆ. ಪ್ರವಾಹದಲ್ಲಿ 100ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದಾರೆ. ಸಾವು ನೋವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅನೇಕರು ತಮ್ಮ ಕುಟುಂಬಸ್ಥರು, ಪ್ರೀತಿಪಾತ್ರರನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಈ ದಿನ ನನ್ನ ಊರಿಗೆ ಕರಾಳ ದಿನ. ನಿಮ್ಮೆಲ್ಲರ ಪ್ರಾರ್ಥನೆಗಳು ನಮಗೆ ಬೇಕು ನೆಟ್ಟಿಗನೊಬ್ಬ ವಿಡಿಯೋ ಹಂಚಿಕೊಂಡು ಕೇಳಿದ್ದಾರೆ.

Flash flood in Jalpaiguri at west bengal, 7 dead several people are missing

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟ್ವಿಟ್ ಮಾಡಿದ್ದು, ದುರ್ಗಾ ದೇವಿ ವಿಸರ್ಜನೆ ವೇಳೆ ಮಾಲ್ ನದಿಯಲ್ಲಿ ಉಂಟಾದ ಪ್ರವಾಹದಿಂದ ಅವಘಡ ಸಂಭವಿಸಿದೆ. ಅನೇಕ ಮಂದಿ ಪ್ರಾಣಾಪಾಯದಲ್ಲಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮುಖ್ಯಮಂತ್ರಿಗಳು ತುರ್ತು ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

English summary
Flash flood in Jalpaiguri at West bengal, 7 dead several people are missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X