ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲು

|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್ 30: "ಮೊದಲು 30 ಸ್ಥಾನಗಳನ್ನು ಗೆದ್ದು ನೋಡಿ, ಆಮೇಲೆ 294 ಸೀಟುಗಳ ಬಗ್ಗೆ ಕನಸು ಕಾಣುವಿರಂತೆ" ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿ ನೀಡಿ ರೋಡ್ ಶೋ ನಡೆಸಿದ ನಂತರದ ಒಂದೇ ವಾರದಲ್ಲಿ ಬೋಲ್ಪುರದಲ್ಲಿ ಮಮತಾ ಬ್ಯಾನರ್ಜಿ ಮಂಗಳವಾರ ರೋಡ್ ಶೋ ಹಮ್ಮಿಕೊಂಡಿದ್ದರು. ಮುಂದಿನ ವಿಧಾನ ಸಭಾ ಚುನಾವಣೆಗೆ ಈಗಾಗಲೇ ಪ್ರಚಾರ ಕಾರ್ಯ ಕೈಗೊಂಡಿದ್ದು, ಈ ಸಂದರ್ಭ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮುಂದೆ ಓದಿ...

 ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿಕೊಳ್ಳುತ್ತಿದೆ. ಆದರೆ ಕೆಲವು ಶಾಸಕರನ್ನು ದುಡ್ಡಿನಿಂದ ಕೊಂಡುಕೊಂಡ ಮಾತ್ರಕ್ಕೆ ಇಡೀ ತೃಣಮೂಲ ಕಾಂಗ್ರೆಸ್ ಅನ್ನೇ ಖರೀದಿಸಿದಿರಿ ಎಂದುಕೊಳ್ಳಬೇಡಿ. ತೃಣಮೂಲ ಕಾಂಗ್ರೆಸ್ ಜನರಿಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಈಗ ಬಿಜೆಪಿಯವರು ಹೊರಗಿನವರಾಗಿ ಬಂದು 200 ಸೀಟುಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಭೇಟಿ ನಂತರದ ಒಂದೇ ವಾರದಲ್ಲಿ ಉತ್ತರ ಕೊಟ್ಟ ದೀದಿಅಮಿತ್ ಶಾ ಭೇಟಿ ನಂತರದ ಒಂದೇ ವಾರದಲ್ಲಿ ಉತ್ತರ ಕೊಟ್ಟ ದೀದಿ

"ಚುನಾವಣೆಗಾಗಿ ಮಾತ್ರ ಇಲ್ಲಿಗೆ ಬಂದಿದ್ದಾರೆ"

ಪಶ್ಚಿಮ ಬಂಗಾಳಕ್ಕೆ ಚುನಾವಣೆಗಾಗಿ ಮಾತ್ರ ಬಿಜೆಪಿಯವರು ಬಂದಿದ್ದಾರೆ. ಅವರಿಗೆ 5 ಸ್ಟಾರ್ ಊಟವೇ ಬೇಕು. ಆದರೆ ತೋರಿಕೆಗೆ ಬುಡಕಟ್ಟು ಮನೆಯ ಊಟ ಬೇಕು. ನಮ್ಮ ಬುಡಕಟ್ಟು ಸಹೋದರರನ್ನು ಈ ರೀತಿ ಅವಮಾನ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿದರು.

"ಮೊದಲು 30 ಸೀಟುಗಳನ್ನು ಗೆದ್ದು ನೋಡಿ"

ಬಿಜೆಪಿಯವರೇ ಮೊದಲು ಮೂವತ್ತು ಸೀಟುಗಳನ್ನು ಗೆಲ್ಲಲು ಸಾಧ್ಯವಾಗುತ್ತದಾ ನೋಡಿ, ಆಮೇಲೆ 294 ಸೀಟುಗಳನ್ನು ಪಡೆಯುವ ಕನಸು ಕಾಣುವಿರಂತೆ ಎಂದು ದೀದಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಶ್ಚಿಮ ಬಂಗಾಳ ಭೇಟಿ ಸಂದರ್ಭ ತಾವು ಪಶ್ಚಿಮ ಬಂಗಾಳದಲ್ಲಿ 200 ಸೀಟುಗಳನ್ನು ಗೆದ್ದು ಕಮಲ ಅರಳಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ದೀದಿ ಮಂಗಳವಾರ ಸವಾಲು ಹಾಕಿದ್ದಾರೆ.

ಮೋದಿ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ; ಮಮತಾ ಬ್ಯಾನರ್ಜಿಮೋದಿ ಸರ್ಕಾರ ನನ್ನನ್ನು ಗುರಿಯಾಗಿಸಿಕೊಂಡಿದೆ; ಮಮತಾ ಬ್ಯಾನರ್ಜಿ

 ಬಿಜೆಪಿಗೆ ಪ್ರಶಾಂತ್ ಕಿಶೋರ್ ಸವಾಲು

ಬಿಜೆಪಿಗೆ ಪ್ರಶಾಂತ್ ಕಿಶೋರ್ ಸವಾಲು

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯ ಸೀಟುಗಳನ್ನು ಪಡೆದರೂ ತಾವು ಟ್ವಿಟ್ಟರ್ ಖಾತೆಯನ್ನು ತ್ಯಜಿಸುವುದಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶಪಥ ಮಾಡಿದ್ದರು. 2021ರಲ್ಲಿ ನಡೆಯುವ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಹತ್ತು ಸ್ಥಾನ ಪಡೆಯಲೂ ಹೆಣಗಾಡಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು.

English summary
"first win 30 seats in the state and then dream about winning 294", challenges west bengal cm mamata banerjee to bjp
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X