ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ.ಬಂಗಾಳದಲ್ಲಿ ಟಿವಿ ನೋಡಿದರೆ, ಸಂಗೀತ ಕೇಳಿದರೆ, ಕೇರಂ ಆಡಿದರೆ ದಂಡ

|
Google Oneindia Kannada News

ಮುರ್ಶಿದಾಬಾದ್, ಆಗಸ್ಟ್ 21: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಟಿವಿ ನೋಡುವುದು, ಸಂಗೀತ ಕೇಳುವುದು, ಕೇರಂ ಆಡಿದರೆ ಅವರ ಮೇಲೆ ದಂಡ ವಿಧಿಸಲಾಗುತ್ತಿದೆ. ಇದೇನಿದು ಪಶ್ಚಿಮ ಬಂಗಾಳದಲ್ಲಿ ಸಕಾರವೇ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎಂದುಕೊಳ್ಳಬೇಡಿ ಇದು ಅಲ್ಪಸಂಖ್ಯಾತ ಸಮುದಾಯ ತೆಗೆದುಕೊಂಡಿರುವ ನಿರ್ಧಾರವಾಗಿದೆ.

ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೆಲವೊಂದು ಚಟುವಟಿಕೆಗಳ ಮೇಲೆ ನಿಷೇಧ(ಫತ್ವಾ) ಹೇರಿದೆ. ಈ ಪೈಕಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ ಮಾಡುವುದು, ಮದ್ಯ ಮಾರಾಟ ಮಾಡುವುದು, ಕೇರಂ ಆಡುವುದೂ ಸಹ ಸೇರ್ಪಡೆಯಾಗಿದೆ.

ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ

ಒಂದು ವೇಳೆ ಈ ಫತ್ವಾವನ್ನು ಉಲ್ಲಂಘನೆ ಮಾಡಿದವರು 500 ರೂಪಾಯಿಗಳಿಂದ 7,000 ರೂಪಾಯಿಗಳ ವರೆಗೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

Fatwa Banning Music, Lottery, Watching TV Issued In West Bengals Murshidabad

ಫತ್ವಾ ಉಲ್ಲಂಘಿಸಿದವರ ಬಗ್ಗೆ ಮಾಹಿತಿ ನೀಡುವವರಿಗೂ 200-2000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಅಂಶಗಳೆಲ್ಲವೂ ಯುವ ಪೀಳಿಗೆಯನ್ನು ಸಂಸ್ಕೃತಿ ಮತ್ತು ನೈತಿಕ ಅಧಃಪತನದತ್ತ ಕೊಂಡೊಯ್ಯುವುದನ್ನು ತಪ್ಪಿಸಲು ಸಮಿತಿ ಈ ರೀತಿಯ ನಿಷೇಧ, ಫತ್ವಾ ವಿಧಿಸಿದೆ ಎಂಬ ಸಮರ್ಥನೆಯೂ ವ್ಯಕ್ತವಾಗತೊಡಗಿದೆ.

ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್ ನ ಅಡಿಯಲ್ಲಿ ಈ ಫತ್ವಾ ಹೊರಡಿಸಲಾಗಿದೆ. ಈ ಆದೇಶವನ್ನೂ ಮೀರಿ ನಡೆದರೆ ಸಂಗೀತ ಕೇಳಿದರೆ 1,000 ರೂಪಾಯಿ ದಂಡ, ಕೇರಮ್ ಆಡಿದರೆ 500 ರೂಪಾಯಿ ದಂಡ ಲಾಟರಿ ಖರೀದಿಸಿದರೆ 2,000 ರೂಪಾಯಿ ದಂಡ, ಮದ್ಯ ಮಾರಾಟ ಮಾಡಿದರೆ, 7,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

English summary
A village in Chief Minister Mamata Banerjee’s West Bengal has issued a fatwa banning watching television, playing carom, buying lottery tickets and listening to music using smartphones and computers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X