ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗಿಂತ ಅತಿ ಕೆಟ್ಟ ಗತಿ ಮೋದಿಗೆ ಕಾದಿದೆ; ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ 24: "ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಬಂದ ಕೆಟ್ಟ ಗತಿಯೇ ಮೋದಿಯವರಿಗೆ ಬರುತ್ತದೆ. ಟ್ರಂಪ್‌ಗಿಂತ ಅತಿ ಕೆಟ್ಟ ಪರಿಸ್ಥಿತಿ ಮೋದಿಗೆ ಕಾದಿದೆ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಬುಧವಾರ ಪಶ್ಚಿಮ ಬಂಗಾಳದ ದುನ್‌ಲೋಪ್‌ನಲ್ಲಿ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಳ್ವಿಕೆ ಸಾಧ್ಯವೇ ಇಲ್ಲ. ಅದಕ್ಕೆ ಅವಕಾಶವನ್ನೂ ಪಶ್ಚಿಮ ಬಂಗಾಳ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ತೃಣಮೂಲ ಕಾಂಗ್ರೆಸ್ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಅದಕ್ಕೆ ಬಂಗಾಳದ ಜನರು ಬೆಲೆ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ...

 ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ; ತೃಣಮೂಲ ಕಾಂಗ್ರೆಸ್‌ ಹೊಸ ಘೋಷಣೆ ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ; ತೃಣಮೂಲ ಕಾಂಗ್ರೆಸ್‌ ಹೊಸ ಘೋಷಣೆ

"ಹಿಂಸೆ, ಗಲಭೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ"

ನರೇಂದ್ರ ಮೋದಿ ದೇಶದಲ್ಲಿನ ಅತಿ ದೊಡ್ಡ ಲೂಟಿಕೋರ ಎಂದು ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ‌ಗೆ ಆದ ಗತಿ ನರೇಂದ್ರ ಮೋದಿಗೂ ಕಾದಿದೆ. ಟ್ರಂಪ್‌ಗಿಂತ ಇನ್ನೂ ಕೆಟ್ಟ ಪರಿಸ್ಥಿತಿ ಮೋದಿಗೆ ಬರುತ್ತದೆ. ಗಲಭೆ, ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

"ಬಂಗಾಳವೇ ಬಂಗಾಳವನ್ನು ಆಳುತ್ತದೆ"

ಮೆರವಣಿಗೆಯಲ್ಲಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡಿ, "ಬಂಗಾಳವೇ ಬಂಗಾಳವನ್ನು ಆಳುತ್ತದೆ. ಗುಜರಾತ್ ಬಂಗಾಳವನ್ನು ಆಳಲು ಸಾಧ್ಯವಿಲ್ಲ. ಇಲ್ಲಿ ಹೊರಗಿನವರಿಗೆ ಅವಕಾಶವಿಲ್ಲ. ಬಂಗಾಳ ತನ್ನ ಸ್ವಂತ ಮಗಳನ್ನಷ್ಟೇ ಅಧಿಕಾರದಲ್ಲಿ ನೋಡಲು ಬಯಸುತ್ತದೆ ಎಂದು ತಮ್ಮ ಪಕ್ಷದ ಘೋಷಣೆಯನ್ನು ಪುನರುಚ್ಚರಿಸಿದರು.

ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ

 ಬಿಜೆಪಿ ಮೂದಲಿಸಿದ ಸಿಎಂ

ಬಿಜೆಪಿ ಮೂದಲಿಸಿದ ಸಿಎಂ

ತೃಣಮೂಲ ಕಾಂಗ್ರೆಸ್‌ ದಂಗೆಕೋರರು ಎಂಬ ಬಿಜೆಪಿ ಹೇಳಿಕೆಯನ್ನು ಖಂಡಿಸಿರುವ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷದ ನಾಯಕರು ದೇಶದ್ರೋಹಿಗಳು ಹಾಗೂ ಜೋಕರ್‌ಗಳು ಎಂದು ಮೂದಲಿಸಿದ್ದಾರೆ. ಇಂಥ ದೇಶದ್ರೋಹಿಗಳಿಗೆ ಬಂಗಾಳದಲ್ಲಿ ಆಳ್ವಿಕೆ ಮಾಡಲು ಹಕ್ಕಿಲ್ಲ. ಬಂಗಾಳವನ್ನು ಮೋದಿ ಆಳಲು ಸಾಧ್ಯವಿಲ್ಲ. ಗೂಂಡಾಗಳು ಬಂಗಾಳವನ್ನು ಆಳಲು ಬಿಡುವುದಿಲ್ಲ ಎಂದಿದ್ದಾರೆ.

"ಚುನಾವಣೆಯಲ್ಲಿ ನಾನು ಗೋಲ್ ಕೀಪರ್"

ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲ್ ಕೀಪರ್ ಆಗಿರುತ್ತೇನೆ. ಬಿಜೆಪಿ ಒಂದೇ ಒಂದು ಗೋಲ್ ಕೂಡ ಗಳಿಸಲು ಸಾಧ್ಯವಿಲ್ಲ. ಅಂಥ ಆಟವನ್ನು ಆಡುತ್ತೇನೆ ಎಂದು ಹೇಳಿದ್ದಾರೆ. ಬುಧವಾರ ಕ್ರಿಕೆಟಿಗ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಂಗಾಳದ ಹಲವು ನಟರು ಟಿಎಂಸಿ ಚುನಾವಣಾ ಮೆರವಣಿಗೆಗೆ ಕೈಜೋಡಿಸಿದರು.

English summary
Fate worse than that of former US President Donald Trump awaits Narendra Modi, attacked West Bengal Chief Minister Mamata Banerjee on Wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X