ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಪಿಕಪ್ ವಾಹನಕ್ಕೆ ವಿದ್ಯುತ್ ಸ್ಪರ್ಶ; 10 ಜನರು ಸಾವು

|
Google Oneindia Kannada News

ಕೋಲ್ಕತ್ತಾ, ಆಗಸ್ಟ್ 01; ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಪಿಕಪ್ ವಾಹನಕ್ಕೆ ವಿದ್ಯುತ್ ಸ್ಪರ್ಶವಾಗಿದೆ. ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಸುಮಾರು 27 ಜನರಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಸ್ಪರ್ಶವಾಗಿದೆ. ವಾಹನದಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಜಲ್ಪಗುರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧ್ಯಪ್ರದೇಶ: 3,419 ಕೋಟಿ ರುಪಾಯಿ ವಿದ್ಯುತ್ ಬಿಲ್ ಕಂಡು ವ್ಯಕ್ತಿ ಅಸ್ವಸ್ಥ!ಮಧ್ಯಪ್ರದೇಶ: 3,419 ಕೋಟಿ ರುಪಾಯಿ ವಿದ್ಯುತ್ ಬಿಲ್ ಕಂಡು ವ್ಯಕ್ತಿ ಅಸ್ವಸ್ಥ!

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮಿತ್ ವರ್ಮಾ ಘಟನೆ ಕುರಿತು ಮಾಹಿತಿ ನೀಡಿದ್ದಾರೆ, "12 ಗಂಟೆ ಸುಮಾರಿಗೆ ಮೇಕಿಲ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಅನ್ವಯ ವಾಹನದ ಹಿಂದೆ ಜೋಡಿಸಲಾಗಿದ್ದ ಡಿಜೆ ಸಿಸ್ಟಮ್‌ ಜನರೇಟರ್‌ನಿಂದ ವಿದ್ಯುತ್ ಅವಘಡ ನಡೆದಿದೆ" ಎಂದರು.

ಚಿತ್ರದುರ್ಗ: ಚಿಕ್ಕಜಾಜೂರಿನಿಂದ ಗುಂತಕಲ್ಗೆ ಮೊದಲ ಬಾರಿಗೆ ವಿದ್ಯುತ್ ಚಾಲಿತ ರೈಲು ಚಿತ್ರದುರ್ಗ: ಚಿಕ್ಕಜಾಜೂರಿನಿಂದ ಗುಂತಕಲ್ಗೆ ಮೊದಲ ಬಾರಿಗೆ ವಿದ್ಯುತ್ ಚಾಲಿತ ರೈಲು

Electrocution In Cooch Behar 10 Dead Many Injured

"27 ಜನರಲ್ಲಿ 16 ಜನರನ್ನು ಜಲ್ಪಗುರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರಿಗೂ ಚಿಕ್ಕಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. 10 ಜನರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ಘೋಷಣೆ ಮಾಡಿದ್ದಾರೆ" ಎಂದು ಅಮಿತ್ ವರ್ಮಾ ಹೇಳಿದರು.

 ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಭರವಸೆ ಗುಜರಾತ್‌ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಭರವಸೆ

ಮೃತಪಟ್ಟ ಎಲ್ಲರೂ ಸೀತಾಕುಲ್ಚಿ ಎಂಬ ಪ್ರದೇಶಕ್ಕೆ ಸೇರಿದವರು. ಅವರ ಕುಟುಂಬಗಳನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ.

English summary
10 people dead and many injured in after pickup van carrying passengers electrocuted in Cooch Behar district of West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X