ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಯೇ ಟಿಎಂಸಿ ಅಭ್ಯರ್ಥಿ: ಹೌರಾ ಎಸ್‌ಪಿ ವಜಾಗೊಳಿಸಿದ ಚುನಾವಣಾ ಆಯೋಗ

|
Google Oneindia Kannada News

ನವದೆಹಲಿ, ಮಾರ್ಚ್ 9: ಪಶ್ಚಿಮ ಬಂಗಾಳದ ಹೌರಾ (ಗ್ರಾಮೀಣ) ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ರಾಯ್ ಅವರನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಹಾಕಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯ ರಾಯ್ ಅವರ ಪತ್ನಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದೆ.

'ಸೌಮ್ಯ ರಾಯ್ ಅವರನ್ನು ತೆಗೆದುಹಾಕಲಾಗಿದೆ. ಅವರ ಪತ್ನಿ ಲವ್ಲಿ ಮೊಯಿತ್ರಾ ಅವರು ಅಭ್ಯರ್ಥಿಯಾಗಿರುವುದರಿಂದ ಸೌಮ್ಯ ಅವರು ಯಾವುದೇ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ' ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಟೈಮ್ಸ್ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರಟೈಮ್ಸ್ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

ಸೌತ್ 24 ಪರಗಣ ಜಿಲ್ಲೆಯ ಸೋನಾಪುರ್ ದಕ್ಷಿಣ್ ವಿಧಾನಸಭೆ ಕ್ಷೇತ್ರದಿಂದ ಎಸ್‌ಪಿ ಪತ್ನಿ ಲವ್ಲಿ ಮೊಯಿತ್ರಾ ಅವರಿಗೆ ಟಿಎಂಸಿ ಟಿಕೆಟ್ ಪ್ರಕಟಿಸಿದೆ.

Election Commission Removes Howrah Rural SP After TMC Announces Ticket To His Wife

ನಿಯಮಾವಳಿಗಳ ಪ್ರಕಾರ ಅಭ್ಯರ್ಥಿಯೊಬ್ಬರ ಕುಟುಂಬದ ಯಾವುದೇ ವ್ಯಕ್ತಿಯು ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿ ಹೇಳಿದ್ದಾರೆ.

ಟಿಎಂಸಿಗೆ ಆಘಾತ: ಬಿಜೆಪಿಯತ್ತ ಮುಖ ಮಾಡಿದ 5 ಹಾಲಿ ಶಾಸಕರು?ಟಿಎಂಸಿಗೆ ಆಘಾತ: ಬಿಜೆಪಿಯತ್ತ ಮುಖ ಮಾಡಿದ 5 ಹಾಲಿ ಶಾಸಕರು?

ಲವ್ಲಿ ಮೊಯಿತ್ರಾ ಅವರನ್ನು ಸೋನಾಪುರ ದಕ್ಷಿಣ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದಂತೆಯೇ ಹೌರಾ (ಗ್ರಾಮೀಣ) ಜಿಲ್ಲೆಯ ಎಸ್‌ಪಿಯಾಗಿ ಆಕೆಯ ಪತಿ ಮುಂದುವರಿಯಲು ಹೇಗೆ ಸಾಧ್ಯ ಎಂದು ವಿರೋಧಪಕ್ಷಗಳು ಪ್ರಶ್ನಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿದೆ.

English summary
The Election Commission has removed Howrah Rural SP after TMC announces ticket to his wife Lovely Moitra from Sonapur Dakshin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X