ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ನೆಕ್ಟ್‌ ಟಾಗೆರ್ಟ್‌ ಟಿಎಂಸಿ ಶಾಸಕ ಕೃಷ್ಣ ಕಲ್ಯಾಣಿ

|
Google Oneindia Kannada News

ಕೋಲ್ಕತ್ತಾ,ಜುಲೈ. 30: ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರ ಆಹಾರ ಮತ್ತು ಖಾದ್ಯ ತೈಲ ಕಂಪನಿ ಮತ್ತು ಕೋಲ್ಕತ್ತಾ ಮೂಲದ ಎರಡು ಚಾನೆಲ್‌ಗಳ ನಡುವಿನ ಅನುಮಾನಾಸ್ಪದ ಹಣಕಾಸು ವಹಿವಾಟಿನ ಸಂಬಂಧ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗ ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಸಚಿವ ಪಾರ್ಥ ಚಟರ್ಜಿಯವರ ಆಪ್ತ ಸಹಾಯಕಿಯಿಂದ ವಶಪಡಿಸಿಕೊಂಡಿರುವ ಕೋಟಿಗಟ್ಟಲೆ ನಗದು ಹಣದ ಬಗೆಗಿನ ತನಿಖೆ ಇತ್ಯರ್ಥವಾಗುವ ಮೊದಲೇ ಟಿಎಂಸಿ ಪಕ್ಷದ ಶಾಸಕ ಕೃಷ್ಣ ಕಲ್ಯಾಣಿ ಅವರನ್ನು ತನಿಖೆಗೆ ಯಾವಾಗ ಬೇಕಾದರೂ ಕೇಂದ್ರ ತನಿಖಾ ಸಂಸ್ಥೆ ಇಡಿ ಕರೆಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಶಿಕ್ಷಕರ ನೇಮಕಾತಿ ಹಗರಣ: ಅರ್ಪಿತಾ ಮುಖರ್ಜಿ ಮನೆಯಿಂದ 4 ಐಷಾರಾಮಿ ಕಾರು ನಾಪತ್ತೆ!ಶಿಕ್ಷಕರ ನೇಮಕಾತಿ ಹಗರಣ: ಅರ್ಪಿತಾ ಮುಖರ್ಜಿ ಮನೆಯಿಂದ 4 ಐಷಾರಾಮಿ ಕಾರು ನಾಪತ್ತೆ!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಪಕ್ಷಾಂತರ ಮಾಡುವ ಮೊದಲು ಕಲ್ಯಾಣಿ ಬಿಜೆಪಿಯಲ್ಲಿದ್ದರು. ಪಕ್ಷಾಂತರವಾದ ಬಳಿಕ ಕೃಷ್ಣ ಕಲ್ಯಾಣಿ ಅವರನ್ನು ತೃಣಮೂಲ ಕಾಂಗ್ರೆಸ್‌ನ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2002 ರಲ್ಲಿ ಸ್ಥಾಪಿಸಲಾದ ಕಲ್ಯಾಣಿ ಸಾಲ್ವೆಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಆಹಾರ ತಯಾರಿಕಾ ಸಂಸ್ಥೆಯನ್ನು ಹೊಂದಿರುವ ಕಲ್ಯಾಣಿ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ವಿಧಾನಸಭೆಗೆ ರಾಜೀನಾಮೆ ನೀಡದೆ ತೃಣಮೂಲಕ್ಕೆ ಪಕ್ಷಾಂತರಗೊಂಡರು.

ED has issued a notice to a company belonging to Trinamool Congress MLA Krishna Kalyani

ಕೋಲ್ಕತ್ತಾ ಮೂಲದ ಎರಡು ಚಾನೆಲ್‌ಗಳೊಂದಿಗೆ ಶಾಸಕ ಕೃಷ್ಣ ಕಲ್ಯಾಣಿ ಅವರ ಕಂಪನಿಯ ಹಣಕಾಸು ವಹಿವಾಟು ನಡೆಸಿರುವ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಬಂಧಿತ ಸಚಿವ ಪಾರ್ಥ ಚಟರ್ಜಿ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಕೋಟ್ಯಂತರ ರೂಪಾಯಿ ವಶಪಡಿಸಿಕೊಂಡ ನಂತರ ತೃಣಮೂಲ ಕಾಂಗ್ರೆಸ್‌ ಸಚಿವರಿಂದ ದೂರ ಉಳಿದಿದೆ.

ED has issued a notice to a company belonging to Trinamool Congress MLA Krishna Kalyani

ಸಚಿವ ಪಾರ್ಥ ಚಟರ್ಜಿ ಮಮತಾ ಬ್ಯಾನರ್ಜಿಗೆ ಹತ್ತಿರವಾಗಿದ್ದರು. ಆದರೆ ಈಗ ಮಮತಾ ಮುಜುಗರಕ್ಕೊಳಗಾಗಿದ್ದಾರೆ. ಹಾಗಾಗಿ ನಿನ್ನೆ ಸಚಿವ ಸ್ಥಾನದಿಂದ ಪಾರ್ಥ ಚಟರ್ಜಿ ಅವರನ್ನು ವಜಾಗೊಳಿಸಲಾಯಿತು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ. 2016ರಲ್ಲಿ ಪಾರ್ಥ ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಕ್ಕೆ ಲಂಚ ಪಡೆದ ಆರೋಪ ಅವರ ಮೇಲಿದೆ.

Recommended Video

Rohit ಹಾಗು Dravidನ ಹೊಗಳಿದ Dinesh Karthik | *Cricket | OneIndia Kannada

English summary
The Trinamool Congress has received a notice from the Enforcement Directorate regarding suspicious financial transactions between a food and edible oil company of an MLA and two Kolkata-based channels, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X