ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗಾಗಿ ಐವತ್ತು ಕೇಜಿ ಚಿನ್ನದ ವಿಗ್ರಹ

|
Google Oneindia Kannada News

ಕೋಲ್ಕತ್ತಾ (ಪಶ್ಚಿಮ ಬಂಗಾಲ), ಸೆಪ್ಟೆಂಬರ್ 28: ಒಂದು ಗ್ರಾಮ್ ಚಿನ್ನಕ್ಕೆ ನಾಲ್ಕು ಸಾವಿರದ ಹತ್ತಿರ ಬೆಲೆ ಇದೆ. ಆಂಥದ್ದರಲ್ಲಿ ದೇವಿ ದುರ್ಗಾ ವಿಗ್ರಹವನ್ನು ಐವತ್ತು ಕೇಜಿ ಚಿನ್ನದಲ್ಲಿ ಮಾಡಲಾಗುತ್ತಿದ್ದು, ಇದರ ಮೌಲ್ಯ ಇಪ್ಪತ್ತು ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿದೆ. ಇದನ್ನು ಕೇಂದ್ರ ಕೋಲ್ಕತ್ತಾದ ಸಾಮೂಹಿಕ ದುರ್ಗಾ ಪೂಜೆಯಲ್ಲಿ ಬಳಸಲಾಗುತ್ತದೆ.

ಅಕ್ಟೋಬರ್ ನಾಲ್ಕರಿಂದ ಅತಿ ದೊಡ್ಡ ಪೂಜಾ ಕಾರ್ಯಕ್ರಮ ಆರಂಭವಾಗಲಿದ್ದು, ಸಂತೋಷ್ ಮಿತ್ರ ಸ್ಕ್ವೇರ್ ನಲ್ಲಿ ಹದಿಮೂರು ಅಡಿ ಎತ್ತರದ ವಿಗ್ರಹವನ್ನು ಇಡಲಾಗುವುದು. "ಈ ಹಿಂದೆ ದೇವಿ ವಿಗ್ರಹವನ್ನು ಯಾರೂ ಚಿನ್ನದಲ್ಲಿ ಮಾಡಿಲ್ಲ. ಇದು ನಮ್ಮ ಕನಕ ದುರ್ಗಾ. ಐವತ್ತು ಕೇಜಿ ಚಿನ್ನ ಬಳಸಿ ತಯಾರಿಸಲಾಗಿದೆ" ಎಂದು ಸಾಮೂಹಿಕ ಪೂಜೆ ಮಂಟಪದ ಅಧ್ಯಕ್ಷ ಪ್ರದೀಪ್ ಘೋಷ್ ಹೇಳಿದ್ದಾರೆ.

ದಸರಾ 2019; ಕೆಎಸ್ಆರ್‌ಟಿಸಿಯಿಂದ 2500 ವಿಶೇಷ ಬಸ್ದಸರಾ 2019; ಕೆಎಸ್ಆರ್‌ಟಿಸಿಯಿಂದ 2500 ವಿಶೇಷ ಬಸ್

ಬಹುರಾಷ್ಟ್ರೀಯ ಕಂಪೆನಿಗಳ ಸಹಾಯವನ್ನು ಪಡೆದಿದ್ದು, ದುರ್ಗಾ ದೇವಿ ವಿಗ್ರಹ ಹಾಗೂ ಹಬ್ಬದ ಖರ್ಚನ್ನು ಅವರೇ ಭರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಆಯೋಜಕರು ಇಂಥ ಪ್ರಯತ್ನ ಮಾಡಿದ್ದಲ್ಲ. ಎರಡು ವರ್ಷದ ಹಿಂದೆ ಚಿನ್ನದ ಸೀರೆಯನ್ನು ಉಡಿಸಲಾಗಿತ್ತು.

Durga Idol Made With 50 Kg Gold in Kolkata

ವಿಗ್ರಹ ಮಾಡಲು ಚಿನ್ನ ಒದಗಿಸುವುದಕ್ಕೆ ಒಬ್ಬರು ಅಥವಾ ಹೆಚ್ಚು ಮಂದಿ ಆಭರಣ ತಯಾರಕರು ಮುಂದೆ ಬಂದಿದ್ದಾರೆ. ವಿಗ್ರಹ ವಿಸರ್ಜನೆ ನಂತರ ಅವರಿಗೆ ಚಿನ್ನ ವಾಪಸ್ ದೊರೆಯುತ್ತದೆ.

English summary
Dasara special: Goddess Durga devi idol made with 50 Kg gold in Kolkata. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X