ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಈ ವಿಳಂಬದ ನಿರ್ಧಾರ ಹಲವು ಮಂದಿ ಸಾವಿಗೆ ಕಾರಣವಾಯ್ತು: ಮಮತಾ

|
Google Oneindia Kannada News

ಕೋಲ್ಕತ್ತಾ, ಜೂನ್ 07: ಲಸಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ವಿಳಂಬದ ನಿರ್ಧಾರ ಹಲವು ಮಂದಿ ಸಾವಿಗೆ ಕಾರಣವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Recommended Video

ನನ್ನ ಮಾತನ್ನು ಕೇಳಲು ಮೋದಿಗೆ 4 ತಿಂಗಳು ಬೇಕಾಯ್ತು ಎಂದ ದೀದಿ | Mamata Banerjee | Modi | Oneindia Kannada

ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಮ್ಮ ದೀರ್ಘಕಾಲದ ಬೇಡಿಕೆ ಬಗ್ಗೆ ಫೆಬ್ರವರಿ 21ರಂದು ಮತ್ತು ಹಲವು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ, ಇದನ್ನು ಕೇಳಲು ಅವರಿಗೆ ನಾಲ್ಕು ತಿಂಗಳು ತೆಗೆದುಕೊಂಡರು. ಈಗ ಬಹಳ ಒತ್ತಡ ಬಂದ ಬಳಿಕ ಅವರು ಮಾತನ್ನು ಕೇಳಿದ್ದಾರೆ. ನಮ್ಮ ಬೇಡಿಕೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ

ರಾಜ್ಯಗಳ ಬೇಡಿಕೆ ಆಲಿಸಲು ಮೋದಿಯವರಿಗೆ ನಾಲ್ಕು ತಿಂಗಳೇ ಬೇಕಾಯಿತು ಎಂದು ಹೇಳಿದ್ದಾರೆ.ಈ ಸಾಂಕ್ರಾಮಿಕದ ಆರಂಭದಿಂದಲೂ ದೇಶದ ಜನರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕಿತ್ತು, ಮೋದಿಯವರು ವಿಳಂಬದ ನಿರ್ಧಾರವು ಅನೇಕರು ಜೀವ ಕಳೆದುಕೊಳ್ಳಲು ಕಾರಣವಾಯಿತು. ಈ ಬಾರಿ ಲಸಿಕಾ ಅಭಿಯಾನ ಪ್ರಚಾರ ಕೇಂದ್ರೀಕೃತವಾಗಿರಲಿದೆ, ಜನರ ಪರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

Delayed Decision Cost Many Lives: Mamata On PMs Vaccine Announcement

ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ''18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರ ಸರ್ಕಾರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದರು.
ರಾಜ್ಯಗಳ ಲಸಿಕೆಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಕ್ರಮ ಕೈಗೊಂಡಿದೆ'' ಎಂದರು.

ಹಾಗೆಯೇ ''ಕೇಂದ್ರ ಸರ್ಕಾರ ನೀಡಿರುವ ಲಸಿಕೆಯ ಶೇ.25ರಷ್ಟು ಖಾಸಗಿ ಆಸ್ಪತ್ರೆಗಳು ಪಡೆಯಬಹುದು, ಹಣವಿರುವವರು ಹಾಗೂ ಲಸಿಕೆ ಉಚಿತವಾಗಿ ಬೇಡ ಎನ್ನುವವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆಯನ್ನು ಪಡೆದುಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.

ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದ ಉಚಿತ ಲಸಿಕೆ ಲಭ್ಯವಾಗಲಿದೆ. 2014ಕ್ಕೂ ಮೊದಲು ದೇಶದಲ್ಲಿ ಶೇ.60ರಷ್ಟು ಲಸಿಕೆಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಲ್ಲಿ ಅದರ ಪ್ರಮಾಣ ಶೇ.80-90ರಷ್ಟಾಗಿದೆ.

ಯಾವುದೇ ಮಾರಣಾಂತಿಕ ಕಾಯಿಲೆಗಳು ದೇಶವನ್ನು ಆಕ್ರಮಿಸಿದಾಗ ಅವುಗಳನ್ನು ಹೊಡೆದೋಡಿಸಲು ದೇಶೀಯ ಲಸಿಕೆಗಳು ಇರಲಿಲ್ಲ, ವಿದೇಶದಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು.

English summary
West Bengal Chief Minister Mamata Banerjee said on Monday that the decision on vaccinating all above the age of 18 for free should have been taken long back and the delay has cost many lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X