ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ಪತನ: ಸುದ್ದಿ ತಿಳಿದು ಸಭೆ ಅರ್ಧಕ್ಕೆ ನಿಲ್ಲಿಸಿದ ಮಮತಾ

|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್‌ 08: ತಮಿಳುನಾಡಿನ ಊಟಿ ಬಳಿಯ ಕುನೂರು ಅರಣ್ಯ ಪ್ರದೇಶದಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

ಆಡಳಿತಾತ್ಮಕ ವಿಚಾರದಲ್ಲಿ ಸಭೆಯು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಸಿಡಿಎಸ್​ ಜನರಲ್​ ಬಿಪಿನ್​ ರಾವತ್ ಇದ್ದ ಹೆಲಿಕಾ‌ಪ್ಟರ್‌ ಪತನವಾದ ಸುದ್ದಿಯು ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ. ಸಭೆ ನಡೆಯುತ್ತಿದ್ದಂತೆ ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನಮಗೆ ಅತ್ಯಂತ ದುಖಃಕರವಾದ ಸುದ್ದಿ ಲಭಿಸಿದೆ. ನಾನು ಆಶ್ಚರ್ಯಕ್ಕೆ ಒಳಗಾಗಿದ್ದೇನೆ. ನನ್ನ ಸಂತಾಪವನ್ನು ವ್ಯಕ್ತಪಡಿಸಲು ನನ್ನ ಬಾಯಲ್ಲಿ ಯಾವುದೇ ಮಾತು ಕೂಡಾ ಬರುತ್ತಿಲ್ಲ. ನಾನು ಈ ಸಭೆಯನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ," ಎಂದು ಹೇಳಿ ಸಭೆಯಿಂದ ಎದ್ದು ಹೊರನಡೆದಿದ್ದಾರೆ.

ರಾವತ್‌ 'ಅತೀ ಸುರಕ್ಷಿತ' Mi-17V5 ಹೆಲಿಕಾಪ್ಟರ್‌ನಲ್ಲಿದ್ದರು: ಪತನದ ಬಗ್ಗೆ ತಜ್ಞರ ಗೊಂದಲರಾವತ್‌ 'ಅತೀ ಸುರಕ್ಷಿತ' Mi-17V5 ಹೆಲಿಕಾಪ್ಟರ್‌ನಲ್ಲಿದ್ದರು: ಪತನದ ಬಗ್ಗೆ ತಜ್ಞರ ಗೊಂದಲ

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದಿದೆ. ಈ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್‌ರ ಪತ್ನಿಯೂ ಕೂಡಾ ಇದ್ದರು. ಈವರೆಗೆ 14 ಮಂದಿಯ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ. ಬಿಪಿನ್‌ ರಾವತ್‌ ಒಬ್ಬರೇ ಬದುಕುಳಿದಿದ್ದಾರೆ.

Defence Chiefs Chopper Crash: Mamata Banerjee Stops Meeting Midway

ಟ್ವೀಟ್‌ ಮಾಡಿದ ಮಮತಾ ಬ್ಯಾನರ್ಜಿ

ಇನ್ನು ಈ ವಿಚಾರದಲ್ಲಿ ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, "ಕುನೂರ್‌ನಿಂದ ಅತೀ ಬೇಸರವಾದ ಸುದ್ದಿಯು ಬಂದಿದೆ. ಸಿಡಿಎಸ್‌ ಬಿಪಿನ್‌ ರಾವತ್‌ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಸೇನೆಯ ಎಲ್ಲಾ ಜನರ ಸುರಕ್ಷತೆಗಾಗಿ ಇಡೀ ದೇಶವೇ ಪ್ರಾರ್ಥನೆ ಮಾಡುತ್ತದೆ. ಯಾರಿಗೆ ಗಾಯವಾಗಿದೆಯೋ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾಲ್ಕು ದಿನಗಳ ಆಡಳಿತ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಹಲವು ಪರಿಶೀಲನಾ ಸಭೆಗಳನ್ನು ನಡೆಸಲಿದ್ದಾರೆ.

ತಮಿಳುನಾಡಿನ ಊಟಿ ಬಳಿಯ ಕುನೂರು ಅರಣ್ಯ ಪ್ರದೇಶದಲ್ಲಿ ಬುಧವಾರ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. Mi-17V5 ಸೇನಾ ಹೆಲಿಕಾಪ್ಟರ್​ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಬಿಪಿನ್ ರಾವತ್ ಸೇರಿ ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂರೂ ಸೇನಾಪಡೆಗಳಿಗೂ ಏಕೈಕ ದಂಡನಾಯಕ, ಏನಿದು 'ಸಿಡಿಎಸ್' ಹುದ್ದೆ?ಮೂರೂ ಸೇನಾಪಡೆಗಳಿಗೂ ಏಕೈಕ ದಂಡನಾಯಕ, ಏನಿದು 'ಸಿಡಿಎಸ್' ಹುದ್ದೆ?

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಇವರು ಸೇನಾ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸೇನಾ ಹೆಲಿಕಾಪ್ಟರ್ ಪತನದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಸಿಡಿಎಸ್​ ಬಿಪಿನ್ ರಾವತ್, ಅವರ ಪತ್ನಿ ಮತ್ತು ಹೆಲಿಕಾಪ್ಟರ್​​ನಲ್ಲಿದ್ದ ಇನ್ನಿತರ ಸಿಬ್ಬಂದಿ ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನೂ ಹಲವಾರು ಮಂದಿ ಗಣ್ಯರು ಬಿಪಿನ್‌ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

(ಓನ್‌ಇಂಡಿಯಾ ಸುದ್ದಿ)

Recommended Video

Ashes ಸರಣಿಯ ಮೊದಲನೇ ದಿನ ಮಳೆಯಲ್ಲಿ ಕೊಚ್ಚಿ ಹೋದ England | Oneindia Kannada

English summary
Mamata Banerjee Stops Meeting Midway Hearing About Defence Chief's Chopper Crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X