ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಇಳಿಸಲು ಮಮತಾ ಸರಕಾರ ನಿರಾಕರಣೆ, ಸಿಟ್ಟಿಗೆದ್ದ ಯೋಗಿ

|
Google Oneindia Kannada News

ಪಶ್ಚಿಮ ಬಂಗಾಲದಲ್ಲಿ ಅಧಿಕಾರದಲ್ಲಿರುವ 'ಜನ ವಿರೋಧಿ' ತೃಣಮೂಲ ಕಾಂಗ್ರೆಸ್ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತಾವಧಿ ಕೊನೆಗೆ ದಿನಗಣನೆ ಆರಂಭವಾಗಿದೆ ಎಂದು ಅವರು ಕಟು ಶಬ್ದಗಳಿಂದ ಟೀಕಿಸಿದ್ದಾರೆ.

ಜನವರಿ ಹತ್ತೊಂಬತ್ತನೇ ತಾರೀಕಿನಂದು ಟಿಎಂಸಿ ಆಯೋಜಿಸಿದ್ದ ಕೋಲ್ಕತ್ತಾ ಸಭೆಯಲ್ಲಿ ಭಾಗವಹಿಸಿದ್ದ ವಿಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ. ರಾಜ್ಯ ಸರಕಾರವು ಪ್ರಜಾಪ್ರಭುತ್ವ ಹಕ್ಕನ್ನು ಹೇಗೆ ಹತ್ತಿಕ್ಕುತ್ತಿದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆ : ಯೋಗಿ ಆದಿತ್ಯನಾಥ್ ನಂಬರ್ 1 ಸಿಎಂ ಇಂಡಿಯಾ ಟುಡೇ ಸಮೀಕ್ಷೆ : ಯೋಗಿ ಆದಿತ್ಯನಾಥ್ ನಂಬರ್ 1 ಸಿಎಂ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರದಂದು ದಕ್ಷಿಣ ದಿನಜ್ ಪುರ್ ಜಿಲ್ಲೆಯ ಬಲಾರ್ ಘಾಟ್ ನಲ್ಲಿ ಗಣತಂತ್ರ ಬಚಾವೋ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರ್ಯಕ್ರಮ ನಡೆಯುವ ಸ್ಥಳದ ಬಳಿ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದ್ದರಿಂದ ಯೋಗಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ.

Days of TMC government in Bengal numbered, said UP CM Yogi Adityanath

ಅಲ್ಲಿಗೆ ಬರಲು ಹಾಗೂ ನಿಮ್ಮನ್ನು ಭೇಟಿ ಮಾಡಲು ಟಿಎಂಸಿ ಸರಕಾರ ನನಗೆ ಅವಕಾಶ ನೀಡಲಿಲ್ಲ. ಆದ್ದರಿಂದ ಮೋದಿಜೀ ಡಿಜಿಟಲ್ ಇಂಡಿಯಾಗೆ ಮೊರೆ ಹೋಗಿ ನಿಮ್ಮನ್ನು ಉದ್ದೇಶಿಸಿ ಮಾತನಾಡಬೇಕಾಯಿತು. ಈ ಟಿಎಂಸಿ ಸರಕಾರ ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ರಾಷ್ಟ್ರೀಯ ಭದ್ರತೆ ಜತೆಗೆ ರಾಜಿ ಮಾಡಿಕೊಂಡಿದೆ ಎಂದು ತಮ್ಮ ಭಾಷಣದ ಆಡಿಯೋ ಲಿಂಕ್ ನಲ್ಲಿ ಹೇಳಿದ್ದಾರೆ.

ದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿ

ಟಿಎಂಸಿ ಸರಕಾರಕ್ಕೆ ಬಿಜೆಪಿ ಅಂದರೆ ಭಯ. ಏಕೆಂದರೆ ಬಂಗಾಲದಲ್ಲಿ ಅದರ ಕೊನೆ ದಿನಗಳ ಗಣನೆ ಆರಂಭವಾಗಿದೆ ಎಂದು ಗೊತ್ತಾಗಿದೆ. ತನ್ನ ಓಲೈಕೆ ರಾಜಕಾರಣದ ಸಲುವಾಗಿ ಪಶ್ಚಿಮ ಬಂಗಾಲದಲ್ಲಿ ದುರ್ಗಾ ಪೂಜೆ ನಿಲ್ಲಿಸಲು ಟಿಎಂಸಿ ಸರಕಾರ ಪ್ರಯತ್ನಿಸಿತು ಎಂದು ಅವರು ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!

ಮುಂದೆ ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯೇ ಸರಕಾರ ರಚಿಸುವಂತೆ ಮಾಡಲು ಪಕ್ಷದ ಕಾರ್ಯಕರ್ತರು ಶ್ರಮಿಸಿ ಎಂದರು. ಸರಕಾರ ಮತ್ತು ಅದರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಮಮತಾ ಬ್ಯಾನರ್ಜಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸರಕಾರಿ ಅಧಿಕಾರಿಗಳು ರಾಜ್ಯದಲ್ಲಿ ಟಿಎಂಸಿ ಕಾರ್ಯಕರ್ತರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಅವಮಾನಕರ ಎಂದು ಹೇಳಿದ್ದಾರೆ.

English summary
Uttar Pradesh Chief Minister Yogi Adityanath Sunday lashed out at the “anti-people” Trinamool Congress government in West Bengal, saying the days of Chief Minister Mamata Banerjee’s rule are “numbered”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X