ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: ಟಿಎಂಸಿ ಸಚಿವರ ಮೇಲೆ ಬಾಂಬ್ ದಾಳಿ

|
Google Oneindia Kannada News

ಕೋಲ್ಕತಾ, ಫೆಬ್ರವರಿ 18: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲು ನಿಲ್ದಾಣದ ಹೊರಭಾಗದಲ್ಲಿ ಬುಧವಾರ ರಾತ್ರಿ 9.45ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದರಿಂದ ಉಪ ಕಾರ್ಮಿಕ ಸಚಿವ ಜಾಕಿರ್ ಹೊಸೇನ್ ಹಾಗೂ ಟಿಎಂಸಿಯ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಸಚಿವ ಜಾಕಿರ್ ಹೊಸೇನ್ ಅವರ ದೇಹದ ಎಡಭಾಗ, ಮುಖ್ಯವಾಗಿ ಎಡಗಾಲಿಗೆ ತೀವ್ರ ಗಾಯವಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಕೋಲ್ಕತಾಕ್ಕೆ ಕರೆದೊಯ್ಯಲಾಗಿದೆ.

 ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ

ಬುಧವಾರ ರಾತ್ರಿ ಜಂಗಿಪುರ್ ನಗರದ ನಿಮ್ತಿಟಾ ರೈಲು ನಿಲ್ದಾಣದ ಕಡೆಗೆ ಜಾಕೀರ್ ಹೊಸೇನ್ ತಮ್ಮ ಬೆಂಗಾವಲಿನ ಜತೆಗೆ ನಡೆದುಕೊಂಡು ತೆರಳುತ್ತಿದ್ದಾಗ ಅಪರಿಚಿತ ದಾಳಿಕೋರರು ಬಾಂಬ್‌ಗಳನ್ನು ಎಸೆದಿದ್ದಾರೆ. ಅವರ ಜತೆಗಿದ್ದ ಇನ್ನಿಬ್ಬರಿಗೂ ಗಾಯಗಳಾಗಿವೆ. ಈ ದಾಳಿಯ ಘಟನೆ ವಿಡಿಯೋದಲ್ಲಿ ದಾಖಲಾಗಿದೆ.

ಈ ಘಟನೆನೆಗೆ ಬಿಜೆಪಿಯೇ ಹೊಣೆ ಎಂದು ಮುರ್ಶಿದಾಬಾದ್ ಟಿಎಂಸಿ ಜಿಲ್ಲಾಧ್ಯಕ್ಷ ಅಬು ತೆಹೆರ್ ಖಾನ್ ಆರೋಪಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ನಿರಾಕರಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಎಂಸಿ ಒಳಗೆ ಉಂಟಾಗಿರುವ ಆಂತರಿಕ ತಿಕ್ಕಾಟದ ಕಾರಣದಿಂದ ಸಚಿವರ ಮೇಲೆ ಈ ದಾಳಿ ನಡೆದಿರಬಹುದು ಎಂದು ಅವರು ಹೇಳಿದ್ದಾರೆ.

Crude Bomb Hurled On West Bengal Minister Jakir Hossain, Injured

Recommended Video

Virat Kohli ಅವರ ನಡುವಳಿಕೆಗೆ ಶಿಕ್ಷೆ ಆಗಬೇಕು ಎಂದ ಮಾಜಿ ಕ್ರಿಕೆಟಿಗ | Oneindia Kannada

ಬಿಜೆಪಿ ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ: ಉತ್ತರ ಕೋಲ್ಕತಾದ ಬಿಜೆಪಿ ಜಿಲ್ಲಾಧ್ಯಕ್ಷ ಶಿಬಾಜಿ ಸಿಂಘಾ ರಾಯ್ ಅವರ ಮೇಲೆ ಬುಧವಾರ ಹಲ್ಲೆ ನಡೆದಿದೆ. ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ಶಂಕುದೇಬ್ ಪಾಂಡಾ ಅವರ ಮೇಲೆಯೂ ದಾಳಿ ನಡೆದಿದೆ ಎನ್ನಲಾಗಿದೆ. ಉತ್ತರ ಕೋಲ್ಕತಾದ ಫೂಲ್ ಭಾಗನ್ ಬಳಿ ಹಲ್ಲೆ ನಡೆದಿದ್ದು, ಗಾಯಗೊಂಡಿರುವ ಸಿಂಘಾ ರಾಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
West Bengal TMC Minister Jakir Hossain and others injured after crude bombs were hurled at him in Murshidabad by unidentified attackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X