ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಟಕ: ಸೌದಿ ಅರೇಬಿಯಾದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು

|
Google Oneindia Kannada News

ಕೊಲ್ಕತ್ತಾ, ಮಾರ್ಚ್ 9: ಡಯಾಬಿಟೀಸ್ ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದ ಆ ವ್ಯಕ್ತಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ. ಹೀಗಾಗಿ ಕೊರೊನಾ ವೈರಸ್ ಸೋಂಕಿನ ಶಂಕಿಯಿಂದ ಆ ವ್ಯಕ್ತಿಗೆ ಮುರ್ಶಿದಾಬಾದ್ ನ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?

ಬ್ಲಡ್ ರಿಪೋರ್ಟ್ ಬರುವ ಮುನ್ನವೇ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಡಯಾಬಿಟೀಸ್ ನಿಂದ ಆ ವ್ಯಕ್ತಿ ಮೃತಪಟ್ಟಿರಬಹುದು ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಅಜಯ್ ಚಕ್ರಬೋರ್ತಿ ಹೇಳಿದ್ದಾರೆ.

Coronavirus Scare: Man Who Returned From Saudi Arabia Dies In Bengal Isolation Ward

''ಆ ವ್ಯಕ್ತಿಗೆ ಮಧುಮೇಹ ಇತ್ತು. ಇನ್ಸುಲಿನ್ ತೆಗೆದುಕೊಳ್ಳಬೇಕಿತ್ತು. ಸೌದಿ ಅರೇಬಿಯಾದಿಂದ ವಾಪಸ್ ಬಂದ ಆ ವ್ಯಕ್ತಿಗೆ ಇನ್ಸುಲಿನ್ ತೆಗೆದುಕೊಳ್ಳಲು ಮೂರ್ನಾಲ್ಕು ದಿನಗಳಿಂದ ಹಣ ಇರಲಿಲ್ಲ. ಜೊತೆಗೆ ಜ್ವರ, ನೆಗಡಿ ಮತ್ತು ಕೆಮ್ಮು ಕೂಡ ಬಾಧಿಸುತ್ತಿತ್ತು. ಹೀಗಾಗಿ, ಅವರನ್ನ ಮುರ್ಶಿದಾಬಾದ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಕೊಡುತ್ತಿದ್ವಿ. ನಿನ್ನೆ ಆತ ಮೃತಪಟ್ಟಿದ್ದಾನೆ'' ಎಂದು ಅಜಯ್ ಚಕ್ರಬೋರ್ತಿ ತಿಳಿಸಿದ್ದಾರೆ.

''ಆತನ ಬ್ಲಡ್ ರಿಪೋರ್ಟ್ ಇನ್ನೂ ಬಂದಿಲ್ಲ. ಕೊರೊನಾ ವೈರಸ್ ಸೋಂಕಿನಿಂದ ಆತ ಮೃತಪಟ್ಟಿರುವ ಸಾಧ್ಯತೆ ಕಮ್ಮಿ'' ಎಂದಿದ್ದಾರೆ ಅಜಯ್ ಚಕ್ರಬೋರ್ತಿ.

'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!

''ನೆಗಡಿ, ಜ್ವರ ಮತ್ತು ಕೆಮ್ಮಿನಿಂದ ಆ ಮೃತಪಟ್ಟಿರುವುದರಿಂದ ಕುಟುಂಬಸ್ಥರು ಮೃತದೇಹವನ್ನು ಮುಟ್ಟುವ ಮುನ್ನ ಮುಂಜಾಗ್ರತೆ ವಹಿಸಬೇಕು. ಅಂತಿಮ ಸಂಸ್ಕಾರ ನೆರವೇರಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು'' ಅಂತ ಹೇಳಿದ್ದಾರೆ ಅಜಯ್ ಚಕ್ರಬೋರ್ತಿ.

English summary
Coronavirus scare: Man who returned from Saudi Arabia dies in Bengal isolation ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X