ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಬ್ಯಾಕ್ ಚಿದಂಬರಂ: ಕಾಂಗ್ರೆಸ್ ಕಾರ್ಯಕರ್ತರೇ ಹೀಗೆ ಕೂಗಲು ಕಾರಣವೇನು?

|
Google Oneindia Kannada News

ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಲು ಮುಂದಾದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಪಿ. ಚಿದಂಬರಂ ತೀವ್ರ ವಿರೋಧವನ್ನು ಎದುರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಲು ಕೋಲ್ಕತ್ತಾ ನ್ಯಾಯಾಲಯಕ್ಕೆ ತೆರಳಿದ ವಕೀಲ ಪಿ. ಚಿದಂಬರಂ ವಿರುದ್ಧ ಕಾಂಗ್ರೆಸ್ ಪರ ವಕೀಲರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಕೋರ್ಟ್ ಮೆಟ್ಟಿಲೇರಿದ್ದರು. ಕಾಂಗ್ರೆಸ್ ರಾಜ್ಯಾಧ್ಯಕ್ಷರೇ ಪ್ರಶ್ನೆ ಮಾಡಿರುವ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಮಮತಾ ಬ್ಯಾನರ್ಜಿ ಪರವಾಗಿ ಪಿ. ಚಿದಂಬರಂ ವಕಾಲತ್ತು ವಹಿಸುವುದಕ್ಕೆ ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

Congress leader P Chidambaram faced protests After Defending Bengal Govt Action In Court

ಕಾಂಗ್ರೆಸ್ ಪಕ್ಷದ ಭಾವನೆಗಳೊಂದಿಗೆ ಆಟ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಬೆಂಬಲಿಸುವ ವಕೀಲರು ಹಿರಿಯ ಮುಖಂಡ ಹಾಗೂ ವಕೀಲ ಪಿ. ಚಿದಂಬರಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಿ ಚಿದಂಬರಂ ಕಾಂಗ್ರೆಸ್ ಪಕ್ಷದ ಭಾವನೆಗಳ ಜೊತೆಗೆ ಆಟವಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

'ಪಿಕೆ ಯೋಜನೆಯಲ್ಲಿ ನಾಯಕತ್ವ ವಿಚಾರ ಇಲ್ಲ, ಅಂಕಿ-ಅಂಶಗಳೇ ಎಲ್ಲ''ಪಿಕೆ ಯೋಜನೆಯಲ್ಲಿ ನಾಯಕತ್ವ ವಿಚಾರ ಇಲ್ಲ, ಅಂಕಿ-ಅಂಶಗಳೇ ಎಲ್ಲ'

ಕೋಲ್ಕತ್ತಾ ನ್ಯಾಯಾಲಯಕ್ಕೆ ಆಗಮಿಸಿದ ಪಿ. ಚಿದಂಬರಂ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಗೋ ಬ್ಯಾಕ್ ಚಿದಂಬರಂ ಎಂಬ ಘೋಷಣೆಗಳನ್ನು ಕೂಗಿದರು. ಇಂಥ ನಾಯಕರಿಂದಲೇ ಕಾಂಗ್ರೆಸ್ ಪಾತಾಳಕ್ಕೆ ಕುಸಿಯುತ್ತಿದೆ ಎಂದು ದೂಷಿಸಿದರು.

ಮೆಟ್ರೋ ಡೈರಿ ಷೇರು ಮಾರಾಟದಲ್ಲಿ ಅಕ್ರಮ; ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ರಾಜಕೀಯ ಪೈಪೋಟಿಗೆ ಬಿದ್ದಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಮೆಟ್ರೋ ಡೈರಿ ಷೇರುಗಳ ಮಾರಾಟದಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿದ್ದರು. ಈ ಷೋರು ಮಾರಾಟದ ತನಿಖೆಯನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Congress leader P Chidambaram faced protests After Defending Bengal Govt Action In Court

ಚೌಧರಿ ಪರ ವಕೀಲ ಬಿಕಾಶ್ ಭಟ್ಟಾಚಾರ್ಯ, ಷೇರು ಮಾರಾಟವು ರಾಜ್ಯದ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರತಿಪಾದಿಸಿದರು. ಕೆವೆಂಟರ್, ಅವರು ಈಗಾಗಲೇ ಷೇರುಗಳ ಒಂದು ಭಾಗವನ್ನು ಸಿಂಗಾಪುರ ಮೂಲದ ಕಂಪನಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದಿದ್ದರು.

ಪಿ. ಚಿದಂಬರಂ ವೃತ್ತಿಪರರು ಎಂದು ಒಪ್ಪಿಕೊಂಡ ಚೌಧರಿ: ಯಾವುದೇ ಕಕ್ಷಿದಾರರನ್ನು ಪ್ರತಿನಿಧಿಸಲು ವಕೀಲರಾಗಿ ಪಿ. ಚಿದಂಬರಂ ಅವರ ಹಕ್ಕನ್ನು ಅಧೀರ್ ರಂಜನ್ ಚೌಧರಿ ಒಪ್ಪಿಕೊಂಡರು. "ಇದೊಂದು ವೃತ್ತಿಪರ ಜಗತ್ತು. ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಯಾರೂ ಅವರಿಗೆ ನಿರ್ದೇಶಿಸಲು ಸಾಧ್ಯವಿಲ್ಲ," ಎಂದು ಹೇಳಿದರು.

English summary
Senior Congress leader and former union minister P. Chidambaram faced protests from lawyers and party supporters after defending Bengal govt action in court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X