ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಅನ್ನು 'ಚುನಾವಣೆಯ ಉಡುಗೊರೆ' ಎಂದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಜುಲೈ 05: "ಯಾವುದೇ ದೂರದೃಷ್ಟಿಯಿಲ್ಲದ ಕೇಂದ್ರ ಬಜೆಟ್ ಇದು. ಹಳಿ ತಪ್ಪಿದ ಈ ಬಜೆಟ್ ಚುನಾವಣೆಯ ಉಡುಗೊರೆ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.

"ಬಜೆಟ್ ಸಂಪೂರ್ಣವಾಗಿ ಯಾವುದೇ ದೂರದೃಷ್ಟಿಯಿಲ್ಲದ್ದಾಗಿದೆ. ಗುರಿಯೇ ಹಳಿತಪ್ಪಿದೆ. ಕೇವಲ ಸೆಸ್ ಮಾತ್ರವಲ್ಲ, ಪೆಟ್ರೋಲ್ ಮತ್ತು ಡೀಸೆಲ್ ಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನೂ ಹಾಕಿದ್ದಾರೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿಯೂ ಏರಿಕೆಯಾಗಲಿದೆ" ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಕೇಂದ್ರ ಬಜೆಟ್: ಹೊಸ ಬಾಟಲಿಯಲ್ಲಿ ಹಳೇ ವೈನ್ ಎಂದ ಕಾಂಗ್ರೆಸ್!ಕೇಂದ್ರ ಬಜೆಟ್: ಹೊಸ ಬಾಟಲಿಯಲ್ಲಿ ಹಳೇ ವೈನ್ ಎಂದ ಕಾಂಗ್ರೆಸ್!

"ದರ ಏರಿಕೆಯಿಂದ ಸಾರಿಗೆ, ಮಾರುಕಟ್ಟೆಯಿಂದ ಹಿಡಿದು ಅಡುಗೆ ಕೋಣೆಯ ಮೇಲೂ ಪರಿಣಾಮವಾಗಲಿದೆ. ಜನ ಸಾಮಾನ್ಯರು ಪರಿತಪಿಸಬೇಕು, ಹೆಣಗಾಡಬೇಕು...

Completely visionless: Mamata Banerjee on Union Budget 2019

ಇದು ಚುನಾವಣೆಯ ಉಡುಗೊರೆ" ಎಮದು ವ್ಯಂಗ್ಯವಾಗಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಹೊಸ ಯೋಜನೆಗಳನ್ನು ಘೋಷಿಸದಿದ್ದರೂ, ಉದ್ಯೋಗಾವಕಾಶ ಹೆಚ್ಚಿಸುವ, ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಬೆಸೆಯ ಕಾರ್ಯ ಮಾಡುವ ಮತ್ತು ಆರ್ಥಿಕತೆಯನ್ನು ಶಕ್ತಿಶಾಲಿ ಮಾಡುವ ಸಲುವಾಗಿ ಸಬಲೀಕರಣದತ್ತ ಹೆಜ್ಜೆ ಇಡುವ ಇಂಗಿತವನ್ನು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ವ್ಯಕ್ತಪಡಿಸಿದ್ದಾರೆ.

English summary
West Bengal chief minister Mamata banerjee on Union Budget 2019: It is completely visionless and election prize! In fact, the total vision is derailed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X