ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳಕ್ಕೆ 7 ಹೊಸ ಜಿಲ್ಲೆಗಳ ಸೇರ್ಪಡೆ

|
Google Oneindia Kannada News

ಕೋಲ್ಕತ್ತಾ, ಆಗಸ್ಟ್‌. 1: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯವು ಏಳು ಹೊಸ ಜಿಲ್ಲೆಗಳನ್ನು ಪಡೆಯಲಿದೆ ಎಂದು ಘೋಷಿಸಿದ್ದಾರೆ.

ಈ ಮೂಲಕ ಪಶ್ಚಿಮ ಬಂಗಾಳದ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 30ಕ್ಕೆ ಏರಲ್ಪಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಘೋಷಿಸಲಾದ ಏಳು ಹೊಸ ಜಿಲ್ಲೆಗಳಲ್ಲಿ ಸುಂದರ್ಬನ್, ಇಚೆಮತಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ, ಮತ್ತು ಬೆಹ್ರಾಂಪುರ ಹಾಗೂ ಬಸಿರ್‌ಹತ್‌ ಎಂದು ಹೆಸರಿಸಲಾಗಿದೆ.

Breaking: ಮಮತಾ ಬ್ಯಾನರ್ಜಿ ಅವರ ಸಂಪುಟ ಬುಧವಾರ ಪುನಾರಚನೆBreaking: ಮಮತಾ ಬ್ಯಾನರ್ಜಿ ಅವರ ಸಂಪುಟ ಬುಧವಾರ ಪುನಾರಚನೆ

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು. ಈಗ ಅದನ್ನು 30ಕ್ಕೆ ಹೆಚ್ಚಿಸಲಾಗಿದೆ. ಆ 7 ಹೊಸ ಜಿಲ್ಲೆಗಳೆಂದರೆ ಸುಂದರ್ಬನ್, ಇಚೆಮತಿ, ರಾಣಾಘಾಟ್, ಬಿಷ್ಣುಪುರ್, ಜಂಗಿಪುರ್, ಬೆಹ್ರಾಂಪುರ ಮತ್ತು ಬಸಿರ್‌ಹತ್‌ ಜಿಲ್ಲೆ ಎಂದು ಕರೆಯಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

CM Mamata Banerjee announced addition of 7 new districts to West Bengal

ಏಳು ಹೊಸ ಜಿಲ್ಲೆಗಳ ರಚನೆಯ ಕುರಿತು ಘೋಷಣೆ ಹೊರಬಿದ್ದಿದ್ದು, ಮುಖ್ಯಮಂತ್ರಿಗಳು ಜಿಲ್ಲೆಗಳ ಪುನರ್‌ ರಚನೆಯು ಅಂತಿಮ ಹಂತದಲ್ಲಿದೆ. ಮುಂದುವರಿದು ಸಚಿವ ಸಂಪುಟಕ್ಕೆ ನಾಲ್ಕರಿಂದ ಐದು ಹೊಸ ಮುಖಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಘೋಷಿಸಿದ್ದಾರೆ.

ಕ್ಯಾಬಿನೆಟ್‌ಗೆ ಹೊಸ ಸಚಿವರ ಸೇರ್ಪಡೆಯನ್ನು ಘೋಷಿಸಿದ ಮಮತಾ ಬ್ಯಾನರ್ಜಿ, ಬಂಗಾಳ ಕ್ಯಾಬಿನೆಟ್‌ನಲ್ಲಿ ಪಂಚಾಯತ್, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪುಗಳಂತಹ ಹಲವಾರು ಇಲಾಖೆಗಳು ಯಾವುದೇ ಮೀಸಲಾದ ಮಂತ್ರಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಈ ಇಲಾಖೆಗಳ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

CM Mamata Banerjee announced addition of 7 new districts to West Bengal

ನಾವು ನಮ್ಮ ಕ್ಯಾಬಿನೆಟ್ ಅನ್ನು ಪುನರ್ರಚನೆ ಮಾಡಬೇಕಾಗಿದೆ. ಆದರೆ ನಾನು ಕ್ಯಾಬಿನೆಟ್ ಅನ್ನು ವಿಸರ್ಜಿಸಿ ಹೊಸದನ್ನು ರಚಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಹಲವಾರು ಇಲಾಖೆಗಳು ಸಚಿವರನ್ನು ಹೊಂದಿಲ್ಲ. ನಾನು ಈ ಇಲಾಖೆಗಳ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ. ನಾಲ್ಕೈದು ಹೊಸ ಮುಖಗಳನ್ನು ಶೀಘ್ರದಲ್ಲೇ ಸಂಪುಟಕ್ಕೆ ಪರಿಚಯಿಸಲಾಗುವುದು ಮತ್ತು ಆಗಸ್ಟ್ 3 ಬುಧವಾರ ಪುನರ್‌ ರಚನೆ ಮಾಡಲಾಗುವುದು. ನಾವು ನಾಲ್ಕರಿಂದ ಐದು ಹೊಸ ಮುಖಗಳನ್ನು ಸಂಪುಟಕ್ಕೆ ಪರಿಚಯಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಪಂಚಾಯತ್, ಆರೋಗ್ಯ, ಇಂಜಿನಿಯರಿಂಗ್, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪುಗಳ ಇಲಾಖೆಗಳನ್ನೂ ಮಮತಾ ಬ್ಯಾನರ್ಜಿ ನೋಡಿಕೊಳ್ಳುತ್ತಿದ್ದರು. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದಾಗಿನಿಂದ ಮಮತಾ ಬ್ಯಾನರ್ಜಿ ಅವರ ಇಲಾಖೆಗಳನ್ನೂ ನೋಡಿಕೊಳ್ಳುತ್ತಿದ್ದರು.

English summary
West Bengal Chief Minister Mamata Banerjee has announced that the state will get seven new districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X