ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಬಾಬು ನಾಯ್ಡು-ಮಮತಾ ಭೇಟಿ: ಚಿಂತೆಯ ಗೆರೆಗಳು

|
Google Oneindia Kannada News

ಕೊಲ್ಕತ್ತಾ, ಮೇ 20: ಮತದಾನೋತ್ತರ ಸಮೀಕ್ಷೆಗಳು ಎನ್‌ಡಿಎ ಮತ್ತೆ ಅಧಿಕಾರಕ್ಕೆ ಎಂದು ಸಾರಿ ಹೇಳಿರುವ ಸಮಯದಲ್ಲಿಯೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇಂದು ಭೇಟಿ ಆಗಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಭೇಟಿ ನಂತರ ಮಾತನಾಡಿರುವ ಚಂದ್ರಬಾಬು ನಾಯ್ಡು, ಬುಧವಾರ ವಿರೋಧಪಕ್ಷಗಳು ದೆಹಲಿಗೆ ತೆರಳುತ್ತಿದ್ದು
ಚುನಾವಣಾ ಆಯುಕ್ತರನ್ನು ಭೇಟಿ ಆಗಲಿದ್ದೇವೆ, ಅದಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಿದ್ದೇವೆ ಎಂದು ಹೇಳಿದರು.

ಎಕ್ಸಿಟ್ ಪೋಲ್‌ ಸಮೀಕ್ಷೆ ಸುಳ್ಳಿನ ಕಂತೆ ಎಂದ ಬಿಜೆಪಿಯ ಮಿತ್ರಪಕ್ಷ! ಎಕ್ಸಿಟ್ ಪೋಲ್‌ ಸಮೀಕ್ಷೆ ಸುಳ್ಳಿನ ಕಂತೆ ಎಂದ ಬಿಜೆಪಿಯ ಮಿತ್ರಪಕ್ಷ!

ಇಬ್ಬರೂ ನಾಯಕರು, ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ನಿರಾಕರಿಸಿದರು, ಮಮತಾ ಬ್ಯಾನರ್ಜಿ ಅವರಂತೂ, ಎಕ್ಸಿಟ್ ಪೋಲ್ ಮೂಲಕ ಇವಿಎಂ ತಿದ್ದುವ ಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

Chandrababu Naidu and Mamtha Banarjee met today

ಬಿಜೆಪಿ ಕೇಂದ್ರದ ಗದ್ದುಗೆಗೆ ಏರುವುದನ್ನು ತಡೆಯಲು ಚಂದ್ರಬಾಬು ನಾಯ್ಡು ಅವರು ಶತಪ್ರಯತ್ನ ಮಾಡುತ್ತಿದ್ದು, ಬಹುತೇಕ ಪ್ರಾದೇಶಿಕ ಪಕ್ಷಗಳನ್ನು ಅವರು ಭೇಟಿ ಆಗಿದ್ದರು, ಆದರೆ ಮತದಾನೋತ್ತರ ಸಮೀಕ್ಷೆಗಳು ನಾಯ್ಡು ಹಾಗೂ ಮಮತಾ ಬ್ಯಾನರ್ಜಿ ಸೇರಿ ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರ ತೃತೀಯ ರಂಗ ರಚನೆ ಆಸೆಗೆ ತಣ್ಣೀರು ಎರಚಿದಂತಿವೆ.

English summary
Andhra Pradesh CM Chandrababu Naidu and West Bengal CM Mamatha Banarjee met today in Kolkatta. they discussed about lok sabha elections result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X