ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ್ರಾಂಶು ರಕ್ಷಣೆ ವಾಪಾಸ್‌: ಮುಕುಲ್ ರಾಯ್ ಭದ್ರತೆ ಕೇಂದ್ರ ಹಿಂಪಡೆಯುವ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂ. 15: ಮುಕುಲ್ ರಾಯ್ ಪುತ್ರ ಶುಭ್ರಾಂಶು ರಾಯ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಭದ್ರತಾ ರಕ್ಷಣೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ಮುಕುಲ್ ರಾಯ್ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಭದ್ರತೆಯನ್ನು ಹಿಂಪಡೆಯುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

''ಗೃಹ ಸಚಿವಾಲಯ (ಎಂಎಚ್‌ಎ) ನಿರ್ಧರಿಸುತ್ತದೆ. ಮುಕುಲ್ ರಾಯ್‌ ಭದ್ರತೆ ಹಿಂಪಡೆಯಲು ಎಂಎಚ್‌ಎ ಆದೇಶವನ್ನು ಕಾಯಲಾಗುತ್ತಿದೆ,'' ಎಂದು ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ನ್ಯೂಸ್ 18 ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರಿದ ಮುಕುಲ್ ರಾಯ್ ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರಿದ ಮುಕುಲ್ ರಾಯ್

ರಾಯ್ 2017 ರಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರಿದ ನಂತರ ರಾಯ್‌ಗೆ ಕೇಂದ್ರ ಭದ್ರತಾ ರಕ್ಷಣೆಯನ್ನು ನೀಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ರಾಯ್ ಭದ್ರತೆಯನ್ನು ಡಿ ವರ್ಗಕ್ಕೆ ನವೀಕರಿಸಲಾಯಿತು. ಟಿಎಂಸಿಯಿಂದ ದಾಳಿಯ ಸಾಧ್ಯತೆಯಿಂದ ಚುನಾವಣೆಗೆ ಮುಂಚಿತವಾಗಿ ಭದ್ರತೆ ನವೀಕರಿಸಲಾಗಿತ್ತು.

Centre Withdraws Security Cover for Mukul Roys Son Subhranshu, Turncoat Also Likely to Lose Protection

ಈಗ ರಾಯ್‌ ಟಿಎಂಸಿಗೆ ಹಿಂತಿರುಗಿದ್ದಾರೆ ಹಾಗಾಗಿ ಬೆದರಿಕೆ ಕಡಿಮೆಯಾಗಿದೆ. ಈ ಹಿನ್ನೆಲೆ ಒದಗಿಸಲಾದ ಕೇಂದ್ರ ಭದ್ರತಾ ರಕ್ಷಣೆಯನ್ನು ಹಿಂಪಡೆಯಲು ಶೀಘ್ರದಲ್ಲೇ ಆದೇಶಗಳನ್ನು ಹೊರಡಿಸುವ ಬಗ್ಗೆ ಚಿಂತನೆ ಇದೆ ಎಂದು ಗೃಹ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ರಾಯ್‌ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಕೇಂದ್ರ ಭದ್ರತೆಯನ್ನು ಹಿಂಪಡೆಯುವಂತೆ ಕೋರಿದ್ದಾರೆ. ಕೋಲ್ಕತ್ತಾದ ಮಾಧ್ಯಮ ಪ್ರತಿನಿಧಿಗಳ ಬಳಿ ಶನಿವಾರ ಮಾತನಾಡಿದ ರಾಯ್‌, ''ಈಗಾಗಲೇ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ತಮ್ಮ ಭದ್ರತೆಯಿಂದ ಮುಕ್ತಗೊಳಿಸಲಾಗಿದೆ,'' ಎಂದು ಹೇಳಿದ್ದರು. ಆದರೆ ಸಿಆರ್‌ಪಿಎಫ್‌ ಮಾತ್ರ ''ನಮ್ಮ ಸಿಬ್ಬಂದಿಗಳು ಕರ್ತವ್ಯ ಮುಂದುವರಿಸುತ್ತಿದ್ದಾರೆ,'' ಎಂದಿದ್ದರು.

ಮುಕುಲ್ ರಾಯ್ ಪುತ್ರ ಶುಭ್ರಾಂಶುಗೆ ವೈ-ವರ್ಗದ ಭದ್ರತೆಯನ್ನು ಒದಗಿಸಿದ್ದ ಸಿಐಎಸ್ಎಫ್, "ಶನಿವಾರ ತನ್ನ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿತು. ಇದು ನಿಯಮದಂತೆ ನಡೆದಿದೆ. ವ್ಯಕ್ತಿಯು ಭದ್ರತೆಯನ್ನು ಬಯಸದಿದ್ದರೆ, ಅವರಿಗೆ ರಕ್ಷಣೆ ನೀಡಲಾಗುವುದಿಲ್ಲ," ಎಂದು ತಿಳಿಸಿದರು.

ಬಿಜೆಪಿಯಿಂದ ಟಿಎಂಸಿಗೆ ವಾಪಸಾದ ಮುಕುಲ್ ರಾಯ್ ಹೇಳಿದ್ದೇನು?ಬಿಜೆಪಿಯಿಂದ ಟಿಎಂಸಿಗೆ ವಾಪಸಾದ ಮುಕುಲ್ ರಾಯ್ ಹೇಳಿದ್ದೇನು?

ಎಂಟು ಸಿಐಎಸ್ಎಫ್ ಸಿಬ್ಬಂದಿ, ಐದು ಸಶಸ್ತ್ರ ಸ್ಥಾಯೀ ಸಿಬ್ಬಂದಿ ಮತ್ತು ಮೂವರು ವೈಯಕ್ತಿಕ ಭದ್ರತಾ ಅಧಿಕಾರಿಗಳು, ಪ್ರತಿ ಪಾಳಿಯಲ್ಲಿ ಒಬ್ಬರು ಶುಭ್ರಾಂಶುಗೆ ಭದ್ರತೆ ನೀಡುತ್ತಿದ್ದರು. ಮುಕುಲ್ ರಾಯ್‌ ರಕ್ಷಣೆಗೆ 12 ಸಶಸ್ತ್ರ ಬೆಂಗಾವಲುಗಳು ಸೇರಿದಂತೆ ಮೂವತ್ತಮೂರು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇನ್ನು ಮುಕುಲ್ ರಾಯ್ ಹಾಗೂ ಪುತ್ರ ಶುಭ್ರಾಂಶು ರಾಯ್‌ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರವು ಇಬ್ಬರಿಗೂ ಭದ್ರತೆ ಒದಗಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Centre Withdraws Security Cover for Mukul Roy's Son Subhranshu, Turncoat Also Likely to Lose Protection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X