• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧರಣಿ ಕೂತ ಮಮತಾ ದೀದಿ, ಹೆಗಲಾಗುತ್ತೇನೆಂದ ರಾಹುಲ್ ಗಾಂಧಿ

|

ನವದೆಹಲಿ, ಫೆಬ್ರವರಿ 04: "ದೀದಿ ನಿಮ್ಮೊಂದಿಗೆ ನಾವಿದ್ದೇವೆ..." ಹಾಗಂತ ವಿರೋಧ ಪಕ್ಷಗಳೆಲ್ಲ ಒಕ್ಕೋರಲಿನಿಂದ ಧ್ವನಿ ಏರಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಬಗ್ಗುಬಡಿಯಲು ಮಹಾಘಟಬಂಧನ ಎಂಬ ಕೂಸು ಈಗಿನ್ನೂ ಹುಟ್ಟುತ್ತಿದೆ. ಈ ಸಮಯದಲ್ಲಿ, ಅದಕ್ಕೆ ಧಕ್ಕೆಯುಂಟಾಗುವ ಸನ್ನಿವೇಶ ನಿರ್ಮಾಣವಾದರೆ ಸುಮ್ಮನಿರುವುದಕ್ಕಾಗುತ್ತಿದೆಯೇ?

ಮಹಾಘಟಬಂಧನದ ಎಲ್ಲಾ ನಾಯಕರನ್ನೂ ಒಂದುಗೂಡಿಸಬಲ್ಲ ತಾಕತ್ತಿರುವ, ಈಗಾಗಲೇ ಜ.19 ರಂದು ಬೃಹತ್ ಸಮಾವೇಶವನ್ನು ನಡೆಸಿ ತಮ್ಮ ಸಾಮರ್ಥ್ಯವನ್ನೂ ಸಾಬೀತುಪಡಿಸಿರುವ ಮಮತಾ ಬ್ಯಾನರ್ಜಿ ಅವರು ಸಂಕಷ್ಟದಲ್ಲಿ ಸಿಲುಕಿಕೊಂಡರೆ, ರಾಜಕೀಯ ಹಿತಾಸಕ್ತಿಗಾದರೂ ಬೆಂಬಲಕ್ಕೆ ನಿಲ್ಲದೆ ಇರುವುದಕ್ಕಾಗುತ್ತದೆಯೇ?

ದೀದಿ-ಸಿಬಿಐ ವಿವಾದ LIVE: ಬೆಂಬಲಕ್ಕೆ ನಿಂತ ವಿಪಕ್ಷಗಳು

ದೀದಿ ಬೆಂಬಲಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಎಲ್ಲಾ ನಾಯಕರು ನಿಂತಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರೂ ಇಂದು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ದೇಶದಾದ್ಯಂತ ಪ್ರತಿಭಟನೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ದೀದಿ ಬೆಂಬಲಕ್ಕೆ ನಿಂತ ರಾಹುಲ್

"ನಾನು ಮಮತಾ ದೀದಿ ಅವರೊಂದಿಗಿದ್ದೇನೆ. ನಾವು ಅವರಿಗೆ ಕರೆ ಮಾಡಿ, ನಿಮ್ಮ ಹೆಗಲಿಗೆ ಹೆಗಲಾಗಿ ನಿಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಇಂದು ನಡೆಯುತ್ತಿರುವುದು ಬಿಜೆಪಿ ಮತ್ತು ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಗೆ ಉದಾಹರಣೆ. ಎಲ್ಲಾ ವಿಪಕ್ಷಗಳೂ ಒಂದಾಗಿ, ದುಷ್ಟ ಶಕ್ತಿಗಳಲನ್ನು ಸೋಲಿಸುತ್ತವೆ"- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ

ಆಘಾತ ವ್ಯಕ್ತಪಡಿಸಿದ ದೇವೇಗೌಡ

ಕೋಲ್ಕತ್ತದಲ್ಲಿ ಪೊಲೀಸ್ ಕಮಿಷನರ್ ರನ್ನು ಬಂಧಿಸಲು ಬಂದ ಸಿಬಿಐ ನಡೆ ಖಂಡನೀಯ. ಈಗಾಗಲೇ ದೇಶ ತುರ್ತು ಪರಿಸ್ಥಿತಿಯ ಸಮಯದಲ್ಲಿ ಕೆಲವು ಅಸಾಂವಿಧಾನಿಕ ಸನ್ನಿವೇಶಗಳನ್ನು ಎದುರಿಸಿದೆ. ಇದೀಗ ಮತ್ತೆ ಪಶ್ಚಿಮ ಬಂಗಾಳದಲ್ಲಿ ಅಂಥದೇ ಸ್ಥಿತಿ ನಿರ್ಮಾಣವಾಗುವಂತಿದೆ- ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ

ಪ್ರಜಾಪ್ರಭುತ್ವದ ವಿಡಂಬನೆ

ಮೋದೀಜಿ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ವಿಡಂಬನೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲೂ ಮೋದಿಜಿ ಹೀಗೆಯೇ ಮಾಡಿದ್ದರು. ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ! ಈ ನಡೆಯನ್ನು ನಾವು ಕಠಿಣವಾಗಿ ಖಂಡಿಸುತ್ತೇವೆ-ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಅಧಿಕಾರದ ವಾಂಛೆ

ಬಿಜೆಪಿ ಅಧಿಕಾರಕ್ಕಾಗಿ ಏನು ಮಾಡುವುದಕ್ಕೂ ಸಿದ್ಧವಾಗಿದೆ. ಅವರಿಗೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿರುವುದರಿಂದ ಸಿಬಿಐ ಅನ್ನು ಚುನಾವಣಾ ಏಜೆಂಟ್ ಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಾಂವಿಧಾನಿಕ ಮೌಲ್ಯಗಳ ವಿರುದ್ಧ. ಸಿಬಿಐ ಅನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗದಷ್ಟು ಸ್ವಾತಂತ್ರ್ಯ ನೀಡಬೇಕು- ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ.

English summary
CBI vs Mamata Banerjee issue: Congress president Rahul Gandhi and other opposition leaders stand with TMC leader Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more