• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀದಿ-ಸಿಬಿಐ ವಿವಾದ LIVE: ತನಿಖೆಗೆ ಸಹಕರಿಸುವಂತೆ ಸುಪ್ರೀಂ ಆದೇಶ

|

ಕೋಲ್ಕತ್ತ, ಫೆಬ್ರವರಿ 04: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವೆ ಉಂಟಾಗಿರುವ ವಿವಾದ ಪ್ರಕರಣ ಬಿಗಡಾಯಿಸಿದ್ದು, ಪಶ್ಚಿಮ ಬಂಗಾಳದಲ್ಲಿ ತುರ್ತು ಪರಿಸ್ಥಿತಿಯಂಥ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು.

ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ

ಆದರೆ ಸಿಬಿಐಯ ಈ ಕ್ರಮವನ್ನು ಖಂಡಿಸಿರುವ ದೀದಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಮತಾ ಈ ವಿವಾದವನ್ನು ಎಷ್ಟು ಜಾಣತನದಿಂದ ನಿಭಾಯಿಸುತ್ತಾರೆ ಎಂಬುದು ಕುತೂಹಲದ ವಿಷಯವಾಗಿದೆ.

CBI vs Mamata Banerjee issue: LIVE updates

ಕೋಲ್ಕತ್ತಾ ವಿವಾದಕ್ಕೆ ಸಂಬಂಧಿಸಿದ ಇಂದಿನ ಆಗುಹೋಗುಗಳ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡವು 'ಲೈವ್' ಮೂಲಕ ನೀಡಲಿದೆ.

ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ದೀದಿ ಕೆಂಡಾಮಂಡಲ

ಕೋಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ವಿಚಾರಣೆ ಮಾಡಲು ಅವಕಾಶ ನೀಡದ ಮಮತಾ ಬ್ಯಾನರ್ಜಿ ಅವರ ನಡೆ ಖಂಡಿಸಿ ಸಿಬಿಐ ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ.

Newest First Oldest First
11:26 AM, 5 Feb
"ರಾಜೀವ್ ಕುಮಾರ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಯಾವುದೇ ದಬ್ಬಾಳಿಕೆಯ ನಿರ್ಧಾರ ತೆಗೆದುಕೊಂಡಿಲ್ಲ. ಇದು ನೈತಿಕತೆಯ ಜನ ಎಂದು ನಾನು ಭಾವಿಸಿದ್ದೇನೆ. ನಮಗೆ ನ್ಯಾಯಾಂಗದ ಬಗ್ಗೆ ಅತೀವ ಗೌರವವಿದೆ. ಈ ಆದೇಶ ನಮಗೆ ತೃಪ್ತಿ ತಂದಿದೆ"- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
11:22 AM, 5 Feb
'ರಾಜೀವ್ ಕುಮಾರ್ ಅವರಿಗೆ ಸದ್ಯಕ್ಕೆ ಜೈಲಿಲ್ಲ, ಆದರೆ ತನಿಖೆಗೆ ಹಾಜರಾಗಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ದೀದಿ ಪಾಳೆಯದಲ್ಲಿ ಕೊಂಚ ನಿರಾಳವನ್ನುಂಟು ಮಾಡಿದೆಯಾದರೂ, ವಿಚಾರಣೆಗೆ ಹಾಜರಾಗಲೇಬೇಕು ಎಂದಿರುವುದು ತಲೆಬಿಸಿಗೆ ಕಾರಣವಾಗಿದೆ.
11:09 AM, 5 Feb
ಫೆಬ್ರವರಿ 20 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
11:06 AM, 5 Feb
ರಾಜೀವ್ ಕುಮಾರ್ ಅವರು ಮೇಘಾಲಯದ ಶಿಲ್ಲಾಂಗ್ ನಲ್ಲಿ ಸಿಬಿಐಮುಂದೆ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶ
11:04 AM, 5 Feb
"ಇದು ಸರ್ಕಾರಕ್ಕೆ ಅವಮಾನ ಮಾಡುವ ಪ್ರಯತ್ನವಷ್ಟೆ. ಐದು ವರ್ಷಗಳಿಂದಲೂ ಯಾವುದೇ ಎಫ್ ಐಆರ್ ಇಲ್ಲದಿದ್ದರೂ ಈಗಲೇ ತನಿಖೆ ನಡೆಸುವ ಅವಸರ ಏನಿತ್ತು? ರಾಜೀವ್ ಕುಮಾರ್ ಅವರ ವಿರುದ್ಧ ಸಾಕ್ಷ್ಯ ನಾಶದ ಒಂದು ಪ್ರಕರಣವೂ ದಾಖಲಾಗಿಲ್ಲ"-ಅಭಿಷೇಕ್ ಮನು ಸಿಂಘ್ವಿ, ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ
11:01 AM, 5 Feb
ಕೋಲ್ಕತ್ತಾ ಪೊಲೀಸ್ ಆಯುಕ್ತ, ಡಿಜಿಪಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
10:58 AM, 5 Feb
ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ರಾಜೀವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶ.
10:57 AM, 5 Feb
ಸಿಬಿಐ ವಿವಾದಕ್ಮಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಪಶ್ಚಿಮ ಬಂಗಾಳ ಹೈಕೋರ್ಟ್ ಗೆ ಪೊಲಿಸ್ ಆಯುಕ್ತ ರಾಜೀವ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 7 ಕ್ಕೆ ಹೈಕೋರ್ಟ್ ಮುಂದೂಡಿದೆ. ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ವಿಚಾರಣೆಯನ್ನು ಮುಂದೂಡಲಾಗಿದೆ.
10:45 AM, 5 Feb
ನಾನು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇನೆ. ಅವರು ಕೋರ್ಟಿನಲ್ಲಿ ಬೇಕಾದರೆ ವಿಚಾರಣೆ ಎದುರಿಸಲಿ. ಆದರೆ ಎಂದಿಗೂ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ನರೇಂದ್ರ ಮೋದಿ ಅವರು ಅರಾಜಕತೆ ಸೃಷ್ಟಿಸುತ್ತಿದ್ದಾರೆ- ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
10:41 AM, 5 Feb
ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಸಿಬಿಐ
10:22 AM, 5 Feb
ಪಶ್ಚಿಮ ಬಂಗಾಳದ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡಿ: ಸಿಬಿಐ ಗೆ ಸುಪ್ರೀಂ ಕೋರ್ಟ್
9:43 AM, 5 Feb
ಪಶ್ಚಿಮ ಬಂಗಾಳದ ನಟಿ ಮತ್ತು ಟಿಎಂ ಸಿ ನಾಯಕಿ ಇಂದ್ರಾಣಿ ಹಲ್ದರ್ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಧರಣಿಗೆ ಬೆಂಬಲ ಸೂಚಿಸಿದರು. ತಾವೂ ಧರಣಿಯಲ್ಲಿ ಪಾಲ್ಗೊಂಡರು.
9:39 AM, 5 Feb
ನಾನು ಸತ್ತರೂ ಮುಂದಿಟ್ಟ ಹೆಜ್ಜೆ ಹಿಂದಿಡೋಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
9:30 AM, 5 Feb
ಸುಪ್ರೀಂ ಕೋರ್ಟಿನಲ್ಲಿ ಇಂದು ಸಿಬಿಐ ಅರ್ಜಿ ವಿಚಾರಣೆ. ವಿಚಾರಣೆಗೆ ಸಹಕರಿಸದ ಪಶ್ಚಿಮ ಬಂಗಾಳ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ನಡೆಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟಿನಲ್ಲಿ ಸಿಬಿಐ ಅರ್ಜಿ ಸಲ್ಲಿಸಿತ್ತು.
9:28 AM, 5 Feb
ಮೂರನೇ ದಿನಕ್ಕೆ ಕಾಲಿಟ್ಟ ಮಮತಾ ಬ್ಯಾನರ್ಜಿ ಸತ್ಯಾಗ್ರಹ.
4:10 PM, 4 Feb
ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟಿಎಂಸಿ ಕಾರ್ಯಕರ್ತರು
3:26 PM, 4 Feb
ನಮ್ಮ ಸತ್ಯಾಗ್ರಹ ಯಾವುದೇ ಏಜೆನ್ಸಿಯ ವಿರುದ್ಧವಲ್ಲ. ಆದರೆ ಮೋದಿ ಸರ್ಕಾರದ ಅರಾಜಕತೆ ಮತ್ತು ದೌರ್ಜನ್ಯದ ವಿರುದ್ಧ- ಮಮತಾ ಬ್ಯಾನರ್ಜಿ
3:13 PM, 4 Feb
ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಮಮತಾ ಬ್ಯಾನರ್ಜಿ ಅವರು ಹೆದರಿಕೊಳ್ಳುವುದೇಕೆ? ತನಿಖೆ ನಡೆಯಲಿ ಬಿಡಿ, ನಿಮಗೆ ಭಯವೇಕೆ? -ಧರ್ಮೇಂದ್ರ ಪ್ರಧಾನ್, ಕೇಮದ್ರ ಸಚಿವ
2:46 PM, 4 Feb
ಸಿಬಿಐ-ಮಮತಾ ಬ್ಯಾನರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರು ಗೌಪ್ಯ ವರದಿಯೊಂದನ್ನು ತಯಾರಿಸಿದ್ದು, ಅದನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ.
2:40 PM, 4 Feb
ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬಿಡಿಗಾಸೂ ಬೇಕಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದು, ಧರಣಿಯನ್ನು ಮುಂದುವರಿಸುವುದಾಗಿ ಕೇಂದ್ರಕ್ಕೆ ಸವಾಲೆಸೆದಿದ್ದಾರೆ.
2:37 PM, 4 Feb
ಇದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ಕೇಂದ್ರ ಸರ್ಕಾರ ಸಮಪರ್ಪಕವಾಗಿ ನಡೆದುಕೊಳ್ಳಬೇಕು. ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದು ಭವಿಷ್ಯಕ್ಕೆ ಒಳ್ಳೆಯದಲ್ಲ. ವಿಪಕ್ಷಗಳ ನಾಯಕರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ- ಎಚ್ ಡಿ ಕುಮಾರಸ್ವಾಮಿ, ಕರ್ನಾಟಕ ಮುಖ್ಯಮಂತ್ರಿ
1:09 PM, 4 Feb
"ಪ್ರಜಾಪ್ರಭುತ್ವ ವಿರೋಧಿ ನಡೆ ಯಾವುದು? ಕರ್ತವ್ಯ ಪಾಲಿಸಲು ಹೊರಟ ಅಧಿಕಾರಿಗಳನ್ನು ತಡೆದು, ಆರೋಪಿಗಳ ರಕ್ಷಣೆಗೆ ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ತಲೆದೋರಿದೆ"- ಸ್ಮೃತಿ ಇರಾನಿ, ಕೇಂದ್ರ ಸಚಿವೆ
1:02 PM, 4 Feb
ಧರಣಿ ಸ್ಥಳಕ್ಕೇ ಫೈಲ್ ಗಳನ್ನು ತರಿಸಿಕೊಂಡು ಪರಿಶೀಲಿಸುತ್ತಿರುವ ಮಮತಾ ಬ್ಯಾನರ್ಜಿ
1:01 PM, 4 Feb
ಧರಣಿಯಲ್ಲಿ ಕುಳಿತೇ ದೈನಂದಿನ ಕಾರ್ಯಚಟುವಟಿಕೆಯಲ್ಲಿ ತೊಡಗಿರುವ ಮಮತಾ ಬ್ಯಾನರ್ಜಿ.
12:36 PM, 4 Feb
"ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳೊಂದಿಗೆ ಪಶ್ಚಿಮ ಬಂಗಾಳದ ಪೊಲೀಸರು ನಡೆದುಕೊಂಡ ರೀತಿ ಸಮಂಜಸವಲ್ಲ. ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಹಲವು ಬಾರಿ ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಆದ್ದರಿಂದ ಸಿಬಿಐ ಅಧಿಕಾರಿಗಳು ತನಿಖೆಗೆ ತೆರಳಿದ್ದರು" ಲೋಕಸಭೆಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿಕೆ
11:47 AM, 4 Feb
ಮೋದೀಜಿ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ವಿಡಂಬನೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲೂ ಮೋದಿಜಿ ಹೀಗೆಯೇ ಮಾಡಿದ್ದರು. ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ! ಈ ನಡೆಯನ್ನು ನಾವು ಕಠಿಣವಾಗಿ ಖಂಡಿಸುತ್ತೇವೆ -ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
11:34 AM, 4 Feb
"ಮಮತಾ ಬ್ಯಾನರ್ಜಿ ಅವರ ಆರೋಪ ಸರಿಯಾಗಿದೆ. ಈ ದೇಶ ಸರ್ವಾಧಿಕಾರದತ್ತ ಸಾಗುವ ಅಪಾಯದಲ್ಲಿದೆ. ಈ ದೇಶದ ಒಡೆಯರು ಕೇಂದ್ರ ಸರ್ಕಾರವಲ್ಲ, ಬದಲಾಗಿ ಜನರು"- ಫಾರೂಖ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ
11:13 AM, 4 Feb
ಕೋಲ್ಕತಾದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಅನ್ನು ಕರೆಸಲಾಗಿದ್ದು, ಸಿಬಿಐ ಕಚೇರಿ ಬಳಿ ಅವರು ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದಾರೆ. ಆದರೆ, ಸಿಆರ್ಪಿಎಫ್ ಆಗಲಿ, ಬಿಎಸ್ಎಫ್ ಆಗಲಿ, ಸೇನೆಯಾಗಲಿ ಮೋದಿಯವರ ನಿರ್ದೇಶನವನ್ನು ಪಾಲಿಸಬಾರದೆಂದು ಮಮತಾ ಬ್ಯಾನರ್ಜಿ ಕೋರಿದ್ದಾರೆ.
11:09 AM, 4 Feb
ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಭುಲಾವ್. ಪಶ್ಚಿಮ ಬಂಗಾಳ ಸರ್ಕಾರ ಸಿಬಿಐ ಅಧಿಕಾರಿಗಳನ್ನು ಸರಿಯಾಗಿ ನಡೆಸುಕೊಳ್ಳದ ಕುರಿತು ವಾಸ್ತವಾಂಶಗಳ ವಿಚಾರಣೆ ನಡೆಸಿದ ರಾಜನಾಥ್ ಸಿಂಗ್
11:07 AM, 4 Feb
ರಕ್ಷಣಾ ಸಚಿನೆ ನಿರ್ಮಲಾ ಸೀತಾರಾಮನ್, ನಾಯಕರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಭುಪೇಂದ್ರ ಯಾದವ್ ರನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ಚುನಾವಣಾ ಆಯುಕ್ತರನ್ನು ಭೇಟಿಯಾಗಿ, ಪಶ್ಚಿಮ ಬಂಗಾಳದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
READ MORE

English summary
CBI vs Mamata Banerjee issue: LIVE updates in Kannada. West Bengal Chief Minister Mamata Banerjee found herself on a collision course with the centre after a huge showdown on Sunday evening between the state police and officials of the CBI
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more