ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯನ್ನೇ 30 ನಿಮಿಷ ಕಾಯಿಸಿ ದುರಹಂಕಾರ ತೋರಿದ ಮಮತಾ ಬ್ಯಾನರ್ಜಿ

|
Google Oneindia Kannada News

ನವದೆಹಲಿ, ಮೇ 29:ಯಾಸ್ ಚಂಡಮಾರುತದಿಂದ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳದ ಪ್ರದೇಶಗಳ ಪರಿಸ್ಥಿತಿ ಪರಿಶೀಲಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು 30 ನಿಮಿಷಗಳ ಕಾಲ ಕಾಯುವಂತೆ ಮಾಡಿ ಮಮತಾ ಬ್ಯಾನರ್ಜಿ ದುರಹಂಕಾರ ಪ್ರದರ್ಶಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡುಮಾರುತದಿಂದ ಆದ ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಮೋದಿ ಬಂಗಾಳದ ಕಲಾಯಿಕುಂಡ್ ವಾಯುನೆಲೆಗೆ ಬಂದಾಗ, ಮಮತಾ ಬ್ಯಾನರ್ಜಿ ಕಾಯಿಸಿರುವುದಾಗಿ ಹೇಳಲಾಗಿದೆ.

ಬ್ಯಾನರ್ಜಿ ತನ್ನ ಸಭೆಯ ಬಗ್ಗೆ ಕೇಂದ್ರಕ್ಕೆ ತಿಳಿಸಿದ್ದರು.ಆದರೆ, ಅವರನ್ನು ವಾಯುನೆಲೆಯಲ್ಲಿ ಪ್ರಧಾನಿಯವರಿಗಾಗಿ ಕಾಯುವಂತೆ ಮಾಡಲಾಗಿತ್ತು. ಇದು ಅವರನ್ನು ಕುಪಿತರನ್ನಾಗಿಸಿತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿ ತಿಳಿಸಿದೆ.

ಯಾಸ್ ಚಂಡಮಾರುತದ ಪರಿಣಾಮದಿಂದಾದ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಇಂದಿನ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾದರು.

ಬದಲಿಗೆ ವಾಯುನೆಲೆಯಲ್ಲಿ ಪ್ರಧಾನಿಯೊಂದಿಗೆ ತರಾತುರಿಯಲ್ಲಿ 15 ನಿಮಿಷ ಸಂವಾದ ನಡೆಸಿದರು. ಪ್ರಧಾನಿಯೊಂದಿಗಿನ ಚಂಡಮಾರುತ ಹಾನಿ ಪರಾಮರ್ಶನಾ ಸಭೆಯಲ್ಲಿ ಮಮತಾ ಪಾಲ್ಗೊಳ್ಳಬೇಕಿತ್ತು. ಆದರೆ, ವರದಿ ಕೊಟ್ಟ ಬಳಿಕ ಅವರು ಹೊರಟೆ ಬಿಟ್ಟರು.

ನಾನು ಬೇಗ ಹೊರಡಬೇಕು

ನಾನು ಬೇಗ ಹೊರಡಬೇಕು

ನೀವು ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಇಂದು ಬಂದೆ. ನಾನು ಮತ್ತು ನನ್ನ ಮುಖ್ಯ ಕಾರ್ಯದರ್ಶಿ ಈ ವರದಿಯನ್ನು ಸಲ್ಲಿಸಿದ್ದೇವೆ. ಈಗ ದಿಘಾದಲ್ಲಿ ಸಭೆ ಇದ್ದು, ಇಲ್ಲಿಂದ ಹೊರಡಲು ನಿಮ್ಮ ಅನುಮತಿ ಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಬಂಗಾಳ ಚುನಾವಣೆ ಪ್ರಚಾರದ ನಂತರ ಇದು ಅವರಿಬ್ಬರ ಮೊದಲ ಮುಖಾಮುಖಿ ಭೇಟಿಯಾಗಿತ್ತು.

ಖಾಲಿ ಖುರ್ಚಿಗಳು

ಖಾಲಿ ಖುರ್ಚಿಗಳು

ಧಾಂಕರ್ ಅವರು ಟ್ವೀಟ್ ಮಾಡಿರುವ ಚಿತ್ರದಲ್ಲಿ ಪರಿಶೀಲನಾ ಸಭೆಯ ಆರಂಭಕ್ಕೆ ಮುನ್ನ ಮೋದಿ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಕುಳಿತಿದ್ದರೆ, ಅವರ ಬಲಭಾಗದಲ್ಲಿಯ ಖುರ್ಚಿಗಳು ಖಾಲಿ ಇರುವುದನ್ನು ತೋರಿಸಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಬ್ಯಾನರ್ಜಿ ಅವರ ಇಂತಹ ವರ್ತನೆ ವಿಷಾದನೀಯವಾಗಿದೆ ಮತ್ತು ಕೆಳ ದರ್ಜೆಯ ರಾಜಕೀಯದ ಸಂಕೇತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಸರ್ಕಾರದ ಯಾರೊಬ್ಬರೂ ಇರಲಿಲ್ಲ

ಸರ್ಕಾರದ ಯಾರೊಬ್ಬರೂ ಇರಲಿಲ್ಲ

ಮೋದಿ ಪರಿಶೀಲನಾ ಸಭೆಗೆ ಆಗಮಿಸಿದಾಗ ಪಶ್ಚಿಮ ಬಂಗಾಳ ಸರ್ಕಾರದ ಯಾರೂ ಅಲ್ಲಿರಲಿಲ್ಲ. ಬ್ಯಾನರ್ದಿ ಮತ್ತು ಮುಖ್ಯ ಕಾರ್ಯದರ್ಶಿ ಅದೇ ಅವರಣದಲ್ಲಿದ್ದರೂ ಪ್ರಧಾನಿ ಅವರನ್ನು ಬರಮಾಡಿಕೊಳ್ಳಲು ಬಂದಿರಲಿಲ್ಲ ಎಂದಿರುವ ಕೇಂದ್ರ ಸರ್ಕಾರದ ಮೂಲಕಗಳು, ದಿಢೀರನೇ ಸಭಾಂಗಣವನ್ನು ಪ್ರವೇಶಿಸಿದ ಬ್ಯಾನರ್ಜಿ ಚಂಡಮಾರುತದಿಂದ ಹಾನಿಯ ಕುರಿತು ಕೆಲವು ದಾಖಲೆಗಳನ್ನು ನೀಡಿ, ತನಗೆ ಇತರ ಕಾರ್ಯಕ್ರಮಗಳು ಇವೆ ಎಂದು ತಿಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಇದೇ ಮೊದಲ ಪ್ರಕರಣ

ಇದೇ ಮೊದಲ ಪ್ರಕರಣ

ಭಾರತೀಯ ಗಣರಾಜ್ಯದ ಇತಿಹಾಸದಲ್ಲಿಯೇ ರಾಜ್ಯವೊಂದರ ಮುಖ್ಯಮಂತ್ರಿ ಪ್ರಧಾನಿ ಮತ್ತು ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಜೊತೆಗೆ ಇಷ್ಟೊಂದು ಕೆಟ್ಟದಾಗಿ, ಅಗೌರವಯುತವಾಗಿ ಮತ್ತು ದುರಹಂಕಾರದಿಂದ ನಡೆದುಕೊಂಡಿರಲಿಲ್ಲ ಎಂದಿವೆ.

ಪ್ರಧಾನಿ ಜತೆ ಪ್ರತ್ಯೇಕ ಸಮಯ

ಪ್ರಧಾನಿ ಜತೆ ಪ್ರತ್ಯೇಕ ಸಮಯ

ಪರಾಮರ್ಶನಾ ಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಜೊತೆಗೆ ಪ್ರತ್ಯೇಕ ಸಮಯ ಕೇಳಲಾಗಿತ್ತು. ಸಭೆ ಇರುವ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಎಲ್ಲಾದಕ್ಕೂ ಒಪ್ಪಲಾಗಿತ್ತು. ಆದರೆ ಏಕೆ ಅವರನ್ನು ಕಾಯುವಂತೆ ಮಾಡಲಾಯಿತು ಎಂದು ಬಂಗಾಳ ಸರ್ಕಾರ ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.

ಅಧಿಕಾರಿಗಳಿಗೆ ಅವಕಾಶ ನೀಡಿರಲಿಲ್ಲ

ಅಧಿಕಾರಿಗಳಿಗೆ ಅವಕಾಶ ನೀಡಿರಲಿಲ್ಲ

ಪ್ರಧಾನಿಗಳ ಎದುರು ವರದಿಯನ್ನು ಮಂಡಿಸುವಾಗಲೂ ತನ್ನ ಅಧಿಕಾರಿಗಳಿಗೆ ಬ್ಯಾನರ್ಜಿ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ಹೇಳಿವೆ. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ವಿಷಯ ಬ್ಯಾನರ್ಜಿ ಅವರಿಗೆ ಕಸಿವಿಸಿಯನ್ನುಂಟುಮಾಡಿತ್ತು ಎಂದು ಅವರು ತಿಳಿಸಿವೆ.

Recommended Video

8-9 ದಿನಗಳು ನಿದ್ರೆ ಇರಲಿಲ್ಲ, IPL ಅರ್ಧಕ್ಕೆ ಬಿಟ್ಟ ಕಾರಣ ಕೊಟ್ಟ ಅಶ್ವಿನ್ | Oneindia Kannada

English summary
Bengal Chief Minister Mamata Banerjee today skipped a meeting with Prime Minister Narendra Modi to assess the impact of Cyclone Yaas, choosing instead a quick 15-minute interaction with him at an airbase where his flight landed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X