• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರದ ಸಂಪುಟ ಪುನಾರಚನೆ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆ

|
Google Oneindia Kannada News

ಕೋಲ್ಕತ್ತಾ, ಜುಲೈ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಎರಡನೇ ಅಲೆಯ ಗಂಭೀರತೆ ಬಗ್ಗೆ ತಿಳಿದುಕೊಂಡಿದೆಯಾ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ಕೊವಿಡ್-19 ಎರಡನೇ ಅಲೆ ವಿಚಾರದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಬಲಿಪಶು ಆಗಿದ್ದಾರೆ. ಇನ್ನು ಮುಂದೆ ಎಲ್ಲ ಸಭೆಗಳನ್ನು ಪ್ರಧಾನಮಂತ್ರಿ ಮೋದಿಯವರೇ ಮಾಡುತ್ತಾರಾ," ಎಂದು ಪ್ರಶ್ನಿಸಿದ್ದಾರೆ.

PM Modi Cabinet Reshuffle Live Updates: 12 ಸಚಿವರು ಔಟ್, 43 ಇನ್PM Modi Cabinet Reshuffle Live Updates: 12 ಸಚಿವರು ಔಟ್, 43 ಇನ್

ಪಶ್ಚಿಮ ಬಂಗಾಳದ ಇಬ್ಬರು ರಾಜ್ಯ ಸಚಿವರಾದ (ಎಂಒಎಸ್) ಬಾಬುಲ್ ಸುಪ್ರಿಯೋ ಮತ್ತು ದೇಬಶ್ರೀ ಚೌಧರಿ ರಾಜೀನಾಮೆ ಪಡೆಯಲಾಗಿದೆ. ಇವರ ಬದಲಿಗೆ ಬಂಗಾಳದ ಇತರ 4 ಸಂಸದರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ನಿಸಿತ್ ಪ್ರಮಣಿಕ್, ಜಾನ್ ಬಾರ್ಲಾ, ಸಂತನು ಠಾಕೂರ್ ಮತ್ತು ಸುಭಾಷ್ ಸರ್ಕಾರ್ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಮಮತಾ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

"ಪೆಟ್ರೋಲ್, ವ್ಯಾಕ್ಸಿನ್ ಕೀ ಬಾತ್":

ಮಮತಾ ಬ್ಯಾನರ್ಜಿ
Know all about
ಮಮತಾ ಬ್ಯಾನರ್ಜಿ

ಭಾರತದಲ್ಲಿ ಆರ್ಥಿಕತೆ ಕುಸಿತು ಕಾಣುತ್ತಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಧಾನಮಂತ್ರಿ ನಡೆಸುವ ಮನ್ ಕೀ ಬಾತ್ ಬದಲಿಗೆ ಪೆಟ್ರೋಲ್ ಕೀ ಬಾತ್, ವ್ಯಾಕ್ಸಿನ್ ಕೀ ಬಾತ್ ಎಂದು ಹೆಸರಿಸಲಿ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

English summary
Cabinet Reshuffle: Mamata Banerjee Questioned PM Modi About Covid-19 Seriousness And Oil Rate Hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X