ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಸಾಗಿಸುವಾಗ ಸಿಕ್ಕಿಬಿದ್ದ ಬಿಜೆಪಿ ಯುವ ನಾಯಕಿ!

|
Google Oneindia Kannada News

ಕೋಲ್ಕತಾ, ಫೆಬ್ರವರಿ 20: ಕೆಲವು ತಿಂಗಳ ಹಿಂದೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಸಿನಿಮಾ ರಂಗದ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳ ಮಾದಕ ವಸ್ತು ಬಳಕೆ ಪ್ರಕರಣ ಈಗ ಹೆಚ್ಚೂ ಕಡಿಮೆ ತಣ್ಣಗಾಗಿದೆ. ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯೇ ಈಗ ಮುಜುಗರಕ್ಕೆ ಸಿಲುಕುವ ಸನ್ನಿವೇಶ ಉಂಟಾಗಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ಪದಾಧಿಕಾರಿ ಪಮೇಲಾ ಗೋಸ್ವಾಮಿ ಎಂಬುವವರನ್ನು ದಕ್ಷಿಣ ಕೋಲ್ಕತಾದ ನ್ಯೂ ಅಲಿಪೋರ್ ಎಂಬಲ್ಲಿ ಶುಕ್ರವಾರ ಬಂಧಿಸಲಾಗಿದೆ. ಅವರ ಬಳಿ ಸುಮಾರು 90 ಗ್ರಾಂ ತೂಕದ ಕೊಕೇನ್ ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎಂದು ಕೋಲ್ಕತಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಿರ್ದಿಷ್ಟ ಮಾಹಿತಿ ಆಧಾರದಲ್ಲಿ ನಾವು ಆಕೆಯ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದೆವು. ಪತ್ತೆಯ ವೇಳೆ ಈ ನಿಷೇಧಿತ ಉತ್ಪನ್ನ ದೊರಕಿದೆ' ಎಂದು ಅವರು ಹೇಳಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳ ಅಡಿ ಪಮೇಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂದೆ ಓದಿ.

ಇನ್ನೂ ಇಬ್ಬರ ಬಂಧನ

ಇನ್ನೂ ಇಬ್ಬರ ಬಂಧನ

ಪಟೂಲಿ ನಿವಾಸಿ ಪಮೇಲಾ ಗೋಸ್ವಾಮಿ (23) ಅವರೊಂದಿಗೆ ಗಾರಿಯಾ ನಿವಾಸಿ ಪ್ರಬೀರ್ ಕುಮಾರ್ ದೇ (38) ಮತ್ತು ಔಷಗ್ರಾಮ್‌ನ ಸೋಮನಾಥ್ ಚಟರ್ಜಿ (26) ಎಂಬುವವರನ್ನು ಕೂಡ ಬಂಧಿಸಲಾಗಿದೆ. ಅವರ ಬಳಿ ಪತ್ತೆಯಾಗ ಕೊಕೇನ್ ಸರಿ ಸುಮಾರು 10 ಲಕ್ಷ ರೂ ಮೌಲ್ಯದ್ದಾಗಿದೆ. ಪಮೇಲಾ ಅವರು ಮಾದಕವಸ್ತುಗಳ ಪೂರೈಕೆ ಹಾಗೂ ಸೇವನೆಯಲ್ಲಿ ಭಾಗಿಯಾಗಿರಬಹುದು. ಅವರು ಈ ಜಾಲದ ಭಾಗವೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಂದ ಸುಳ್ಳು ಪ್ರಕರಣ

ಪೊಲೀಸರಿಂದ ಸುಳ್ಳು ಪ್ರಕರಣ

ಆದರೆ ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ನಮ್ಮ ಪಕ್ಷದ ಅನೇಕ ಕಾರ್ಯಕರ್ತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಅನೇಕ ಘಟನೆಗಳು ನಡೆದಿವೆ. ಇದೂ ಕೂಡ ಅದೇ ರೀತಿಯದ್ದಾಗಿರಬಹುದು ಎಂದು ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಹೇಳಿದ್ದಾರೆ.

ನಿಜವಾದರೆ ಖಂಡನೀಯ

ನಿಜವಾದರೆ ಖಂಡನೀಯ

'ಪೊಲೀಸರು ಶಸ್ತ್ರಾಸ್ತ್ರಗಳು ಮತ್ತು ಇತರೆ ನಿಷೇಧಿತ-ಅಕ್ರಮ ಆಮದಿನ ವಸ್ತುಗಳನ್ನು ಇರಿಸಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಪಮೇಲಾ ಅವರ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಒಂದು ವೇಳೆ ಅವರ ಬಳಿಕ ಅಕ್ರಮ ಮಾದಕ ವಸ್ತು ಇದ್ದದ್ದು ನಿಜವಾದರೆ ಅದು ಖಂಡನೀಯ' ಎಂದು ಚಟರ್ಜಿ ತಿಳಿಸಿದ್ದಾರೆ.

ಬಂಗಾಳ ಚುನಾವಣೆ ತಯಾರಿ

ಬಂಗಾಳ ಚುನಾವಣೆ ತಯಾರಿ

ಬಿಜೆಪಿಯ ರಾಜ್ಯ ಘಟಕದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಪಮೇಲಾ, ಆಕೆಯ ಸ್ನೇಹಿತ ಮತ್ತು ಭದ್ರತಾ ಕಾವಲುಗಾರನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985ರ ಅಡಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯುವ ಮೋರ್ಚಾದ ರಾಜಕೀಯ ಕಾರ್ಯಕ್ರಮಗಳಲ್ಲಿ ಪಮೇಲಾ ಸಕ್ರಿಯರಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಕಳಂಕ ತರಲೆಂದೇ ಅವರನ್ನು ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

English summary
West Bengal BJP Youth Wing general secretary Pamela Goswami and 2 others were held with 90 gm cocaine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X