ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಜಿಲ್ಲಾ ವೀಕ್ಷಕರು, ಸಹ ವೀಕ್ಷಕರನ್ನು ನೇಮಿಸಿದ ಬಿಜೆಪಿ

|
Google Oneindia Kannada News

ಕೋಲ್ಕತ್ತ, ಡಿಸೆಂಬರ್ 28: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಬಿಜೆಪಿಯು ಜಿಲ್ಲಾ ವೀಕ್ಷಕರು ಹಾಗೂ ಸಹ ವೀಕ್ಷಕರನ್ನು ನೇಮಿಸಿದೆ.

ಸಾಕಷ್ಟು ಮಂದಿ ಟಿಎಂಸಿ ಶಾಸಕ, ಕಾರ್ಯಕರ್ತರನ್ನು ಪಕ್ಷದತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯು, ಇದೀಗ ಜಿಲ್ಲಾ ವೀಕ್ಷಕರು, ಸಹ ವೀಕ್ಷಕರನ್ನು ನೇಮಕ ಮಾಡಿದೆ.

ಪ.ಬಂಗಾಳ; ಬಿಜೆಪಿ ಕಚೇರಿ ಬಳಿ ಟಿಎಂಸಿ ಕಾರ್ಯಕರ್ತರಿಂದ ಗಲಭೆಪ.ಬಂಗಾಳ; ಬಿಜೆಪಿ ಕಚೇರಿ ಬಳಿ ಟಿಎಂಸಿ ಕಾರ್ಯಕರ್ತರಿಂದ ಗಲಭೆ

ಬಿಜೆಪಿಯ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಭಾನುವಾರ ಬಿಜೆಪಿಯ ಜಿಲ್ಲಾ ವೀಕ್ಷಕರು ಹಾಗೂ ಸಹ ವೀಕ್ಷಕರನ್ನು ನೇಮಕ ಮಾಡಿದ್ದಾರೆ.

BJP Shifts Gears In West Bengal, Appoints District Observers, Co-Observers

ಮಾಹಿತಿ ಪ್ರಕಾರ ಕೋಲ್ಕತ್ತ ವಲಯಕ್ಕೆ ಸೋವನ್ ಛಟರ್ಜಿಯವರನ್ನು ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ. ದೇಬ್ಜಿತ್ ಸರ್ಕಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಬೈಸಾಖಿ ಬ್ಯಾನರ್ಜಿ ಹಾಗೂ ಸಂಕುದೇವ್‌ಪಾಂಡಾ ಅವರನ್ನು ಕೋಲ್ಕತ್ತ ವಲಯಕ್ಕೆ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಬೇಹಾರ್ ಜಿಲ್ಲಾ ವೀಕ್ಷಕರಾಗಿ ದೀಪೇನ್ ಪ್ರಮಾಣಿಕ್, ಭಾಸ್ಕರ್ ದೇಯ್ ದಾರ್ಜಿಲಿಂಗ್ ಜಿಲ್ಲಾ ವೀಕ್ಷಕ, ಅಮಿತವ ಮೈತ್ರ ದಿನಜ್‌ಪರ್ ಜಿಲ್ಲಾ ವೀಕ್ಷಕರು, ಮನಬೇಂದ್ರ ಚಕ್ರವರ್ತಿ ಮುರ್ಷಿದಾಬಾದ್ ಜಿಲ್ಲಾ ವೀಕ್ಷಕರು, ಉತ್ತರ ನಾದಿಯಾದ ವೀಕ್ಷಕರಾಗಿ ಗೋಪಾಲ್ ಸರ್ಕಾರ್ ಅವರನ್ನು ನೇಮಕ ಮಾಡಲಾಗಿದೆ.

ಬಸಿರ್‌ಹಟ್‌ನ ಜಿಲ್ಲಾ ವೀಕ್ಷಕರಾಗಿ ಪ್ರದೀಪ್ ಬ್ಯಾನರ್ಜಿ, ಉತ್ತರ ಕೋಲ್ಕತ್ತ ವೀಕ್ಷಕರಾಗಿ ಮನಸ್ ಭಟ್ಟಾಚಾರ್ಯ ಅವರನ್ನು ನೇಮಕ ಮಾಡಲಾಗಿದೆ ಹೀಗೆ ಪ್ರತಿಯೊಂದು ಜಿಲ್ಲೆಗಳು ವೀಕ್ಷಕರು ಹಾಗೂ ಸಹ ವೀಕ್ಷಕರನ್ನು ನೇಮಕ ಮಾಡಲಾಗಿದೆ.

2019ರಲ್ಲಿ ತೃಣಮೂಲ ಕಾಂಗ್ರೆಸ್ 42 ಲೋಕಸಭಾ ಸ್ಥಾನಗಳಲ್ಲಿ 18 ರಲ್ಲಿ ಗೆಲುವು ಸಾಧಿಸಿತ್ತು. ಮುಂಬರಲಿರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಇರುವ 294 ಸೀಟುಗಳ ಪೈಕಿ ಬಿಜೆಪಿ 200 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು.

English summary
Bharatiya Janata Party (BJP) on Sunday shifted gears in its preparation for the forthcoming West Bengal Assembly elections appointing district observers and co-observers in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X