ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: ಬಿಜೆಪಿ ಕಚೇರಿಗೆ ಬೆಂಕಿ

|
Google Oneindia Kannada News

ಜಿದ್ದಾ-ಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯು ಅಭೂತಪೂರ್ವ ಗೆಲುವು ಸಾಧಿಸಿದೆ.

ಚುನಾವಣೆ ಆರಂಭವಾಗುವುದಕ್ಕೂ ಮುಂಚಿನಿಂದಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ರಾಜಕೀಯ ನಾಯಕರ ಹೇಳಿಕೆಗಳು, ಪ್ರಚಾರ ಸಮಯದ ಬೆಳವಣಿಗೆಗಳು ಪರಸ್ಪರ ಕಾರ್ಯಕರ್ತರಲ್ಲಿ ದ್ವೇಷವನ್ನೂ ಬೆಳೆಸಿತ್ತು.

ಇದೀಗ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ದಿನ ಅರಂಭಾಗ್‌ನ ಬಿಜೆಪಿ ಕಚೇರಿಗೆ ಪುಂಡರು ಬೆಂಕಿ ಇಟ್ಟಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ ಎನ್ನಲಾಗುತ್ತಿದೆ. ಮಾಧ್ಯಮವೊಂದರ ವರದಿಗಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.

BJP Office Was Set Ablaze In West Bengals Arambagh

ಇದೇ ವಿಡಿಯೋವನ್ನು ನಿರ್ಮಲಾ ಸೀತಾರಾಮನ್ ಸೇರಿ ಹಲವು ಬಿಜೆಪಿ ಮುಖಂಡರು ಹಂಚಿಕೊಂಡಿದ್ದು, ಟಿಎಂಸಿ ಕಾರ್ಯಕರ್ತರ ಕಾರ್ಯ ಇದೆಂದು ಆರೋಪಿಸಿದ್ದಾರೆ. ಆದರೆ ಅರಂಭಾಗ್‌ ಟಿಎಂಸಿಯು ಆರೋಪವನ್ನು ನಿರಾಕರಿಸಿದೆ.

ಇದೇ ದಿನ ಬೆಳಿಗ್ಗೆ ಕೊಲ್ಕತ್ತದ ಬಿಜಿಪಿ ಕಚೇರಿ ಮೇಲೂ ಕಲ್ಲು ತೂರಾಟ ನಡೆಯಿತು. ಆರಂಭದಲ್ಲಿ ಟಿಎಂಸಿ ಮುನ್ನಡೆಗೆ ಬರುತ್ತಿದ್ದಂತೆ ಕೆಲವು ಟಿಎಂಸಿ ಕಾರ್ಯಕರ್ತರು ಈ ದುಷ್ಕೃತ್ಯ ಎಸಗಿದರು ಎಂದು ಬಿಜೆಪಿ ಆರೋಪಿಸಿದೆ.

Recommended Video

ಪಕ್ಷ ಬದಲಾಯಿಸಿದರು ಒಲಿಯದ ಅದೃಷ್ಟ !!

ಪಶ್ಚಿಮ ಬಂಗಾಳದಲ್ಲಿ ದ್ವೇಷ ರಾಜಕಾರಣ ಹೊಸದೇನೂ ಅಲ್ಲ ರಾಜ್ಯದಲ್ಲಿ ಚುನಾವಣೆ ವಿಷಯವಾಗಿ ಜಗಳಗಳು, ಹಿಂಸಾಚಾರ ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೆ ಮಮತಾ ಬ್ಯಾನರ್ಜಿ ರ್ಯಾಲಿ ಮೇಲೆ , ಬಿಜೆಪಿ ರ್ಯಾಲಿ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು.

English summary
In West Bengal's Arambagh BJP office set ablaze. BJP blame TMC but TMC denies allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X