ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ. ಬಂಗಾಳ ಬಿಜೆಪಿ ಶಾಸಕನ ಸಾವು; ಸಿಐಡಿಯಿಂದ ಒಬ್ಬನ ಬಂಧನ

|
Google Oneindia Kannada News

ಕೋಲ್ಕತ್ತಾ, ಜುಲೈ 15 : ಪಶ್ಚಿಮ ಬಂಗಾಳದ ಬಿಜೆಪಿ ಶಾಸಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಶಾಸಕ ದೇಬೇಂದ್ರನಾಥ ರಾಯ್ ಸಾವಿನ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ರಾಜ್ಯದ ಬಿಜೆಪಿ ಘಟಕ ಒತ್ತಾಯಿಸಿದೆ.

Recommended Video

Dhoni ಜೊತೆ ಆಡೋದು ತುಂಬಾ ಖುಷಿ ಕೊಡುತ್ತೆ ಎಂದ Pant | Oneindia Kannada

ಹೆಮ್ಟಾಬಾದ್ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ. ಬುಧವಾರ ಪೊಲೀಸರು ನಿಲಾಯ್ ಸಿಂಗ್ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವು; ಸಿಬಿಐ ತನಿಖೆಗೆ ಒತ್ತಾಯ ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವು; ಸಿಬಿಐ ತನಿಖೆಗೆ ಒತ್ತಾಯ

ದೇಬೇಂದ್ರನಾಥ ರಾಯ್ ಶವ ಜುಲೈ 13ರ ಸೋಮವಾರ ಹುಟ್ಟೂರಿನಲ್ಲಿರುವ ಮಾರುಕಟ್ಟೆಯ ಕಟ್ಟಡವೊಂದರ ಎದುರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ಘಟಕ ಗೃಹ ಸಚಿವ ಅಮಿತ್ ಶಾಗೆ ಮಂಗಳವಾರ ಮನವಿ ಮಾಡಿತ್ತು.

ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಆತ್ಮಹತ್ಯೆ; ವ್ಯಕ್ತಿ ವಶಕ್ಕೆ ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಆತ್ಮಹತ್ಯೆ; ವ್ಯಕ್ತಿ ವಶಕ್ಕೆ

BJP MLA Debendranath Roy Death One Arrested

ಸಿಐಡಿ ಪೊಲೀಸರು ಮಂಗಳವಾರ ದೇಬೇಂದ್ರನಾಥ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬುಧವಾರ ಮತ್ತೊಬ್ಬ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಬಿಜೆಪಿ ಶಾಸಕನ ಕೊಲೆ, ಮನೆ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!ಬಿಜೆಪಿ ಶಾಸಕನ ಕೊಲೆ, ಮನೆ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

ಶಾಸಕ ದೇಬೇಂದ್ರನಾಥ ರಾಯ್ ಮೊದಲು ಹೆಮ್ಟಾಬಾದ್ ಕ್ಷೇತ್ರದಿಂದ ಸಿಪಿಐಎಂ ಚಿನ್ಹೆಯಲ್ಲಿ ಗೆದ್ದು ಬಂದಿದ್ದರು. 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು, ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.

ಶಾಸಕ ದೇಬೇಂದ್ರನಾಥ ರಾಯ್ ಸಾವಿನ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಟೀಕೆಗಳನ್ನು ನಡೆಸುತ್ತಿದೆ.

English summary
West Bengal CID police arrested one man in connection to the death of BJP MLA Debendranath Roy. Debendra Nath Roy body was found hanging on July 14, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X