ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಪ್ರಸಂಗ ಮಾಡಿದ್ರೆ ಪರಿಣಾಮ ನೆಟ್ಟಗಿರೋಲ್ಲ, ದೀದಿಗೆ ಸಚಿವೆಯ ವಾರ್ನಿಂಗ್

|
Google Oneindia Kannada News

Recommended Video

ಪಶ್ಚಿಮ ಬಂಗಾಳದ ರಾಯ್ಗಂಜ್ ಸಂಸದೆಯಿಂದ ಮಮತಾ ಬ್ಯಾನರ್ಜಿಗೆ ವಾರ್ನಿಂಗ್

ಕೋಲ್ಕತ್ತಾ, ಜೂನ್ 01: ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಅಡ್ಡಿ ಪಡಿಸಿದ್ದೇ ಆದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತಷ್ಟು ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು
ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆಯ ರಾಜ್ಯ ಸಚಿವೆ ದೇಬಶ್ರೀ ಚೌಧರಿ ಎಚ್ಚರಿಕೆ ನೀಡಿದ್ದಾರೆ.

"ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕೆಲಸ ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಅಡ್ಡಿಪಡಿಸುವ ಅಥವಾ ಕೇಂದ್ರದ ಯೋಜನೆಗಳು ಬೇಕಿಲ್ಲ ಎಂದು ಅಧಿಕ ಪ್ರಸಂಗ ಮಾಡುವುದಕ್ಕೆ ಮಮತಾ ಬ್ಯಾನರ್ಜಿ ಅವರು ಮುಂದಾದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಚೌಧರಿ ಖಡಕ್ಕಾಗಿ ಹೇಳಿದ್ದಾರೆ.

ಮೇ 30 ರಂದು ಹೊಸ ಎನ್ ಡಿಎ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಂಆಡಲಾಗಿದ್ದು, ಒಶ್ಚಿ ಬಂಗಾಳದ ರಾಯ್ಗಂಜ್ ಸಂಸದೆ ಚೌಧರಿ ಅವರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆಯ ರಾಜ್ಯ ಸಚಿವೆಯ ಸ್ಥಾನ ನೀಡಲಾಗಿದೆ.

'ದಯವಿಟ್ಟು ಕ್ಷಮಿಸಿ,' ಪ್ರಧಾನಿ ಮೋದಿಗೆ ಮಮತಾ ದೀದಿ ಸಂದೇಶ 'ದಯವಿಟ್ಟು ಕ್ಷಮಿಸಿ,' ಪ್ರಧಾನಿ ಮೋದಿಗೆ ಮಮತಾ ದೀದಿ ಸಂದೇಶ

ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಲ್ಲಿ ಮೊದಲಿನಿಂದಲೂ ಸೌಹಾರ್ದತೆ ಇಲ್ಲ. ಇದೀಗ ಲೋಕಸಭೆ ಚುನಾವಣೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಹುದ್ದೆಯ ಘನತೆಯನ್ನೂ ಮರೆತು ನಡೆದುಕೊಂಡಿರುವುದು ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ.

ಈ ಎಲ್ಲ ಕಾರಣಗಳಿಂದ ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವುದು ಸುಲಭವಿಲ್ಲ. ಆದರೆ ನಾನು ಇವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೀದಿಗ್ಯಾಕೆ ಇಂಥ ವಾರ್ನಿಂಗ್?

ದೀದಿಗ್ಯಾಕೆ ಇಂಥ ವಾರ್ನಿಂಗ್?

ಅಷ್ಟಕ್ಕೂ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗೂ ಇಲ್ಲದ ವಾರ್ನಿಂಗ್ ಮಮತಾ ಬ್ಯಾನರ್ಜಿ ಅವರಿಗೇ ಏಕೆ ಎಂಬುದು ಗಮನಿಸಬೇಕಾದ ವಿಷಯ. ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಎದ್ದಿದ್ದ ಚಂಡಮಾರುತದಿಂದ ಬಂಗಾಳದಲ್ಲಿ ಸಾಕಷ್ಟು ಹಾನಿಯಾಗಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ ಬಂಗಾಳಕ್ಕೆ ನೆರವು ನೀಡಲು ಮುಂದಾದರೆ, ನಿಮ್ಮ ನೆರವು ನಮಗೆ ಬೇಕಿಲ್ಲ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದರು. ಫೋನಿ ನಂತರದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಮೋದಿ ಅವರೇ ಖುದ್ದು ಎರಡು ಬಾರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿದ್ದರೂ ಅವರು ಮೋದಿ ಅವರ ಕರೆಯನ್ನು ಸ್ವೀಕರಿಸಿರಲಿಲ್ಲ. ವಾಪಸ್ ಕರೆ ಮಾಡುವ ಸೌಜನ್ಯವನ್ನೂ ತೋರಿರಲಿಲ್ಲ.

'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?

ನಿಮ್ಮ ದುಡ್ಡು ಯಾರಿಗೆ ಬೇಕು ಎಂದಿದ್ದ ದೀದಿ!

ನಿಮ್ಮ ದುಡ್ಡು ಯಾರಿಗೆ ಬೇಕು ಎಂದಿದ್ದ ದೀದಿ!

ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಭಗ್ನಗೊಂಡಿದ್ದ ಹತ್ತೊಂಬತ್ತನೇ ಶತಮಾನದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಇದ್ದ ಜಾಗದಲ್ಲೇ ಭವ್ಯವಾಗಿ ನಿರ್ಮಾಣ ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಬ್ಯಾನರ್ಜಿ, "ನಿಮ್ಮ ದುಡ್ಡು ಯಾರಿಗೆ ಬೇಕು?" ಎಂದು ಕೇಳಿದ್ದರು.

ಜೈ ಶ್ರೀರಾಮ್ ಎನ್ನುವ ಹಾಗಿಲ್ಲ!

ಮಮತಾ ಬ್ಯಾನರ್ಜಿ ಅವರು ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಕೆಲವರು 'ಜೈ ಶ್ರೀರಾಮ್' ಎಂದು ಕೂಗಿದ್ದಕ್ಕಾಗಿ ಕಾರಿನಿಂದ ಇಳಿದು ಅವರ ಮೇಲೆ ಮಮತಾ ಬ್ಯಾನರ್ಜಿ ಹರಿಹಾಯ್ದ ಘಟನೆ ಗುರುವಾರ ನಡೆದಿತ್ತು. ಹಾಗೆ ಘೋಷಣೆ ಕೂಗಿದವರು ಕ್ರಿಮಿನಲ್ ಗಳು ಅವರು ಬಿಜೆಪಿಯವರು ಎಂದು ಹೇಳಿ ಅವರನ್ನು ವಶಕ್ಕೆ ಪಡೆಯುವಂತೆ ಮಮತಾ ಬ್ಯಾನರ್ಜಿ ಪೊಲಿಸರಿಗೆ ಸೂಚಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಮತಾ ಬ್ಯಾನರ್ಜಿ ಅವರು ಸಾಕಷ್ಟು ಜನರ ವಿರೋಧ ಕಟ್ಟಿಕೊಳ್ಳುವಂತಾಗಿತ್ತು.

ಪ್ರಮಾಣ ವಚನಕ್ಕೆ ಗೈರಾಗಲು ಸಿಕ್ಕ ನೆಪ!

ಮೇ 31 ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನಕ್ಕೆ ದೀದಿ ಹಾಜರಾಗಿರಲಿಲ್ಲ. ಅದಕ್ಕೆ ಕಾರಣ ನೀಡಿ ಅವರು ಮಾಡಿದ ಟ್ವೀಟ್ ಹೀಗಿತ್ತು: "ನೂತನ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆಗಳು. ಸಾಂವಿಧಾನಿಕ ಆಮಂತ್ರಣವನ್ನು ಸ್ವೀಕರಿಸಿ ನಿಮ್ಮ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರ್ಧರಿಸಿದ್ದೆ. ಆದರೆ ನಾನು ಆಮಂತ್ರಣವನ್ನು ಒಪ್ಪಿಕೊಂಡ ಒಂದು ಗಂಟೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರಾಜಕೀಯ ಹಿಂಸಾಚಾರದಲ್ಲಿ 54 ಜನರನ್ನು ಕೊಲ್ಲಲಾಗಿದೆ ಎಂದು ದೂರಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದೆ. ಈ ಎಲ್ಲಾ ಕೊಲೆಗಳೂ ನಡೆದಿದ್ದು ವೈಯಕ್ತಿಕ ಕಾರಣ, ಕೌಟುಂಬಿಕ ದ್ವೇಷ ಮತ್ತಿತರ ಕಾರಣದಿಂದ. ಅದಕ್ಕೆ ರಾಜಕೀಯದ ಬಣ್ಣ ಹಚ್ಚಲಾಗಿದೆ. ಈ ಸುದ್ದಿ ಸುಳ್ಳು. ಇದ್ಯಾವುದಕ್ಕೂ ದಾಖಲೆಗಳಿಲ್ಲ. ಆದರೆ ಈ ಘಟನೆಗಾಗಿ ನನ್ನನ್ನು ದೂರುತ್ತಿರುವ ಕಾರಣಕ್ಕೆ ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ"- ಮಮತಾ ಬ್ಯಾನರ್ಜಿ

English summary
After appointed as the Union Minister of State for Women and Child Development West Bengal's Debashree Chowdurry warns CM Mamata Banerjee that she will face a severe backlash if her government tries to prevent central initiatives from reaching people in her state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X