ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಯಕರ ಅತಿಯಾದ ಹೆಮ್ಮೆ, ಆತ್ಮವಿಶ್ವಾಸದಿಂದ ಬಿಜೆಪಿ ಬಂಗಾಳದಲ್ಲಿ ಸೋತಿದೆ' ಎಂದ ಸುವೇಂದು

|
Google Oneindia Kannada News

ಕೋಲ್ಕತ್ತಾ, ಜು.19: "ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ 170 ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬ ಹಲವಾರು ನಾಯಕರ ಅತಿಯಾದ ಆತ್ಮವಿಶ್ವಾಸದಿಂದಾಗಿ ಬಿಜೆಪಿ ಬಂಗಾಳದಲ್ಲಿ ಸೋತಿದೆ," ಎಂದು ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುವೇಂದು ಅಧಿಕಾರಿ ಭಾನುವಾರ ಹೇಳಿದ್ದಾರೆ.

ಪುರ್ಬಾ ಮೇದಿನಿಪುರ ಜಿಲ್ಲೆಯ ಚಂಡೀಪುರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅಧಿಕಾರಿ, ಈ ನಗು ಮತ್ತು ಅತಿಯಾದ ಆತ್ಮವಿಶ್ವಾಸವು ಉದಯೋನ್ಮುಖ ನೆಲದ ಪರಿಸ್ಥಿತಿಯ ತಿಳುವಳಿಕೆಯ ಕೊರತೆಗೆ ಕಾರಣವಾಯಿತು ಎಂದಿದ್ದಾರೆ.

ಉತ್ತರಪ್ರದೇಶ ಆಡಳಿತವನ್ನು ಹೊಗಳಿ ಮೋದಿ ಕಾಳೆಲೆದ ದೀದಿಉತ್ತರಪ್ರದೇಶ ಆಡಳಿತವನ್ನು ಹೊಗಳಿ ಮೋದಿ ಕಾಳೆಲೆದ ದೀದಿ

"ಅಸೆಂಬ್ಲಿ ವಿಭಾಗಗಳ ಈ ಭಾಗಗಳಲ್ಲಿನ ಮೊದಲ ಎರಡು ಮತದಾನ ಹಂತಗಳಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಂತೆ, ನಮ್ಮ ಅನೇಕ ನಾಯಕರು ಅತಿಯಾದ ಆತ್ಮವಿಶ್ವಾಸ ಹೊಂದಿ ಬೀಗಿಕೊಂಡರು," ಎಂದು ತಿಳಿಸಿದ್ದಾರೆ.

BJP Lost In Bengal Due To Smug, Overconfident Leaders says Suvendu Adhikari

"ಚುನಾವಣೆಯಲ್ಲಿ ಬಿಜೆಪಿ 170-180 ಸ್ಥಾನಗಳನ್ನು ಗಳಿಸಲಿದೆ ಎಂದು ಬಿಜೆಪಿ ನಾಯಕರು ತಾವಾಗಿಯೇ ನಂಬಿಕೊಳ್ಳಲು ಪ್ರಾರಂಭಿಸಿದರು. ಆದರೆ ಅದಕ್ಕಾಗಿ ಬೇಕಾದ ತಯಾರಿಯನ್ನು ಮಾಡಲಿಲ್ಲ. ಇದು ನಮಗೆ ಬೆಲೆತೆರಬೇಕಾದ ಪರಿಸ್ಥಿತಿ ಉಂಟು ಮಾಡಿದೆ," ಎಂದು ತೃಣಮೂಲದಿಂದ ಬಿಜೆಪಿಗೆ ಹೋದ ಸುವೇಂದು ಅಧಿಕಾರಿ ಅಭಿಪ್ರಾಯಿಸಿದ್ದಾರೆ.

"ಗುರಿಗಳನ್ನು ನಿಗದಿಪಡಿಸುವ ಸಂದರ್ಭದಲ್ಲಿ ನೆಲದ ಮಟ್ಟದಲ್ಲಿ ಕೆಲಸ ಮುಂದುವರಿಸುವುದು ಅಷ್ಟೇ ಮುಖ್ಯ. ಅದಕ್ಕಾಗಿ ಕಠಿಣ ಪರಿಶ್ರಮದ ಅಗತ್ಯವಿದೆ," ಎಂದು ಕೂಡಾ ಈ ಸಂದರ್ಭದಲ್ಲೇ ಹೇಳಿದರು.

ಇನ್ನು ಸುವೇಂದು ಅಧಿಕಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತೃಣಮೂಲ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್‌, "ಸುವೇಂದು ಅಧಿಕಾರಿ ಟಿಎಂಸಿ ಆಡಳಿತದ ಸಮಾಜ ಕಲ್ಯಾಣ ಯೋಜನೆಗಳನ್ನು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಅಭಿವೃದ್ಧಿಯ ಯೋಜನೆಗಳನ್ನು ಮರೆತಿದ್ದಾರೆ. ಹಾಗೆಯೇ ಸಿಎಂ ಮತ್ತು ಟಿಎಂಸಿ ವಿರುದ್ಧ ಬಿಜೆಪಿಯ ವಿರುದ್ದ ಬಿಜೆಪಿ ನಡೆಸಿದ ಭರ್ಜರಿ ನಿರಂತರ ಅಭಿಯಾನದ ವಿರುದ್ದದ ಧನಿಯನ್ನೂ ಮರೆತಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ.

"ಕೇಸರಿ ಪಕ್ಷವು 200 ಸ್ಥಾನಗಳನ್ನು ದಾಟಲಿದೆ ಎಂದು ಬಿಜೆಪಿಯ ಅನೇಕ ನಾಯಕರು ಊಹಿಸಿದ್ದರಿಂದ ಬಿಜೆಪಿ ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿತ್ತು. ಈಗ ಅವರು ಇತರರೊಂದಿಗೆ ಏಕೆ ದೋಷವನ್ನು ಕಂಡುಕೊಳ್ಳುತ್ತಿದ್ದಾರೆ? ತಮ್ಮ ಪಕ್ಷಕ್ಕೆ ಕನಿಷ್ಠ 180 ಸ್ಥಾನಗಳು ಸಿಗುತ್ತವೆ ಎಂದು ಸುವೇಂದು ಪದೇ ಪದೇ ಹೆಮ್ಮೆ ಪಡಲಿಲ್ಲವೇ?, ಅವರಿಗೆ ಬಂಗಾಳದ ನಾಡಿಮಿಡಿತ ತಿಳಿದಿಲ್ಲ, ಆದರೆ ತೃಣಮೂಲಕ್ಕೆ ತಿಳಿದಿದೆ," ಎಂದು ತೃಣಮೂಲ ಕಾಂಗ್ರೆಸ್‌ ವಕ್ತಾರ ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Bengal Bharatiya Janata Party (BJP) leader Suvendu Adhikari said the BJP lost because of several leaders Smug and overconfidence that the party would get over 170 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X