ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಂದರೆ ಮಮತಾರನ್ನು ಅಪ್ಪಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ಮುಖಂಡಗೆ ಕೊರೊನಾ ಸೋಂಕು

|
Google Oneindia Kannada News

ಕೊಲ್ಕತ್ತ, ಅಕ್ಟೋಬರ್ 02: ಒಂದೊಮ್ಮೆ ನನಗೆ ಕೊರೊನಾ ಬಂದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡನಿಗೆ ಕೊರೊನಾ ಸೋಂಕು ತಗುಲಿದೆ.

ಹೊಸದಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಹೇಳಿಕೆ ನೀಡಿದ್ದರು.

ಒಂದೊಮ್ಮೆ ನನಗೆ ಕೊರೊನಾ ಬಂದರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುತ್ತೇನೆ: ಬಿಜೆಪಿ ಮುಖಂಡಒಂದೊಮ್ಮೆ ನನಗೆ ಕೊರೊನಾ ಬಂದರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುತ್ತೇನೆ: ಬಿಜೆಪಿ ಮುಖಂಡ

ನಮ್ಮ ಪಕ್ಷದ ಕಾರ್ಯಕರ್ತರು ಕೊರೊನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ನನಗೆ ಕೊರೊನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದರು.

ಕೊವಿಡ್-19 ರೋಗಿಗಳ ಕುಟುಂಬಗಳ ನೋವನ್ನು ಅರ್ಥಪಡಿಸಲು ಈ ರೀತಿ ಮಾಡುವುದಾಗಿ ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ಪೊಲೀಸ್ ದೂರು ದಾಖಲಿಸಿತ್ತು.

 ಇದೀಗ ಅನುಪಮ್ ಮೇಲೆ ಎಲ್ಲರ ಚಿತ್ತ

ಇದೀಗ ಅನುಪಮ್ ಮೇಲೆ ಎಲ್ಲರ ಚಿತ್ತ

ಒಂದೊಮ್ಮೆ ತನಗೆ ಕೊರೊನಾ ಸೋಂಕುತಗುಲಿದರೆ, ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ ಎಂದು ಅನುಪಮ್ ಹಜ್ರಾ ಹೇಳಿಕೆ ನೀಡಿದ್ದ ಕಾರಣ, ಇದೀಗ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರ ಚಿತ್ತ ಅವರ ಮೇಲಿದೆ. ಅವರು ಹೇಳಿದ್ದನ್ನು ನಿಜವಾಗಿ ಮಾಡುತ್ತಾರೆಯೇ ಎನ್ನುವ ಗುಸುಗುಸು ಆರಂಭವಾಗಿದೆ.

 ಅನುಪಮ್ ಹಜ್ರಾಗೆ ರೋಗದ ಲಕ್ಷಣಗಳಿತ್ತು

ಅನುಪಮ್ ಹಜ್ರಾಗೆ ರೋಗದ ಲಕ್ಷಣಗಳಿತ್ತು

ಅನುಮಪ್ ಹಜ್ರಾಗೆ ಆಯಾಸದ ಅನುಭವ ಆಗುತ್ತಿದ್ದ ಕಾರಣ, ಅವರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಬಳಿಕ ವರದಿ ಪಾಸಿಟಿವ್ ಬಂದಿದೆ.

 ಹಜ್ರಾ ವಿರುದ್ಧ ದೂರು

ಹಜ್ರಾ ವಿರುದ್ಧ ದೂರು

ಮಮತಾ ಬ್ಯಾನರ್ಜಿ ವಿರುದ್ಧ ಇಂತಹ ಹೇಳಿಕೆ ನೀಡಿರುವ ಹಜ್ರಾ ವಿರುದ್ಧ ಟಿಎಂಸಿ ದೂರು ನೀಡಿತ್ತು. ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ. ತಾನು ಪಬ್ಲಿಕ್ ಹೀರೋ ಆಗಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

 ಕೊವಿಡ್ ಶವಗಳ ಅಂತ್ಯಕ್ರಿಯೆ ನಡೆಸುವ ರೀತಿ ಕರಣಾಜನಕ

ಕೊವಿಡ್ ಶವಗಳ ಅಂತ್ಯಕ್ರಿಯೆ ನಡೆಸುವ ರೀತಿ ಕರಣಾಜನಕ

ಕೊವಿಡ್ -19 ರೋಗಿಗಳ ಶವಗಳನ್ನು ರಾಜ್ಯದಲ್ಲಿ ಅಂತ್ಯಕ್ರಿಯೆ ನಡೆಸುವ ರೀತಿ ಕರುಣಾಜನಕವಾಗಿದೆ. ಮೃತದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಗುತ್ತಿದೆ. ಕೊವಿಡ್-19 ನಿಂದ ಮೃತಪಟ್ಟ ಪೋಷಕರ ಮುಖಗಳನ್ನು ಮಕ್ಕಳಿಗೆ ತೋರಿಸುತ್ತಿಲ್ಲ.ನಾವು ಸತ್ತ ಬೆಕ್ಕುಗಳು ಅಥವಾ ನಾಯಿಗಳನ್ನು ಸಹ ಆ ರೀತಿ ನಡೆಸುಕೊಳ್ಳುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

Recommended Video

ಕಡೆಗೂ ಪ್ರಕರಣದ ಬಗ್ಗೆ ಮೌನ ಮುರಿದ UP ಮುಖ್ಯಮಂತ್ರಿ Yogi AdityaNath | Oneindia Kannada

English summary
BJP leader Anupam Hazra, who had threatened to hug West Bengal Chief Minister Mamata Banerjee if he got infected with COVID-19, has tested positive for the disease, health officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X