• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ಠಾಣೆ ಮುಂದೆ ಬಿಜೆಪಿ ನಾಯಕನ ಹತ್ಯೆ; ಬಂದ್ ಕರೆ

|

ಕೋಲ್ಕತ್ತಾ, ಅಕ್ಟೋಬರ್ 05 : ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಸೋಮವಾರ 12 ಗಂಟೆಗಳ ಬಂದ್‌ಗೆ ಕರೆನೀಡಿದೆ. ಪಕ್ಷದ ಕೌನ್ಸಿಲರ್ ಮನೀಶ್ ಶುಕ್ಲಾ ಹಂತ್ಯೆ ಖಂಡಿಸಿ ಬಂದ್ ಕರೆ ನೀಡಲಾಗಿದೆ.

ನಾರ್ಥ್ 24 ಪರ್ಗನಸ್ ಜಿಲ್ಲೆಯ ತಿತಾಘರ್ ಪೊಲೀಸ್ ಠಾಣೆಯ ಮುಂಭಾಗವೇ ಮನೀಶ್ ಶುಕ್ಲಾ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ರಾಜ್ಯ ಬಿಜೆಪಿ ಘಟಕ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವು; ಸಿಬಿಐ ತನಿಖೆಗೆ ಒತ್ತಾಯ

"ಮನೀಶ್ ಶುಕ್ಲಾ ಹತ್ಯೆ ಖಂಡಿಸಿ 12 ಗಂಟೆಗಳ ಬಂದ್ ಕರೆ ನೀಡಲಾಗಿದೆ" ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಸಿಂಗ್ ಹೇಳಿದ್ದಾರೆ. ಹತ್ಯೆ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.

ಬಿಜೆಪಿ ಶಾಸಕನ ಕೊಲೆ, ಮನೆ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

"ಪೊಲೀಸ್ ಠಾಣೆಯ ಮುಂದೆಯೇ ಬಿಜೆಪಿ ನಾಯಕನ ಹತ್ಯೆ ನಡೆದಿದೆ. ಈ ಕುರಿತು ಸಿಬಿಐ ತನಿಖೆ ನಡೆಯಬೇಕು" ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಅಲ್‌-ಖೈದಾ ಭಯೋತ್ಪಾದಕನ ಬಂಧನ

ಮಾಹಿತಿ ಕೇಳಿದ ರಾಜ್ಯಪಾಲರು : ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಡಿಜಿಪಿಯನ್ನು ಸೋಮವಾರ ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಬಿಜೆಪಿ ನಾಯಕನ ಹತ್ಯೆ ಬಗ್ಗೆ ಅವರು ಮಾಹಿತಿ ಕೇಳಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೂ ವರದಿಯನ್ನು ಕೇಳಿದ್ದಾರೆ.

English summary
West Bengal BJP has called for a 12 hour bandh to protest against the murder of party worker Manish Shukla in Titagarh. BJP councillor Manish Shukla has been shot dead in front of Titagarh police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X